ಹದಿಹರೆಯದವರಲ್ಲಿ ಆಹಾರ ಸೇವಿಸುವ ವಿಧಾನದಿಂದ ಕಂಡುಬರುವಂತಹ ಸಮಸ್ಯೆಗಳು..

೧. ಅನೋರೆಕ್ಸಿಯ ನರ್ವೋಸ (Anorexia nervosa – An eating disorder causing people to obsess about weight and what they eat.)

ಇದು ಆಹಾರ ಸೇವನೆಗೆ ಸಂಬಂಧಿಸಿದ ಖಾಯಿಲೆಯಾಗಿದ್ದು, ಆರೋಗ್ಯಕರ ದೇಹದ ತೂಕವನ್ನು ಕಾಪಾಡುವ ಬಗ್ಗೆ ಇರುವ ನಿರ್ಲಕ್ಷ್ಯವು ಈ ವ್ಯಾಧಿಯ ಲಕ್ಷಣವಾಗಿದೆ. ರೂಪುಗೊಂಡ ಸ್ವಪ್ರತಿಬಿಂಬದಿಂದಾಗಿ ದೇಹದ ತೂಕವು ಹೆಚ್ಚಾಗುವಂತಹ ಒಂದು ಗೀಳಿನ ಭಯ. ಇದನ್ನು ವಿವಿಧ ಅರಿವಿಗೆ ಸಂಬಂಧಿಸಿದ ಪೂರ್ವಾಗ್ರಹದಿಂದ ನಿಭಾಯಿಸಬಹುದಾಗಿದೆ.

ಚಿಹ್ನೆಗಳು ಮತ್ತು ಗುಣಲಕ್ಷಣಗಳು:

ದೈಹಿಕ ಗುಣಲಕ್ಷಣಗಳು:
• ಆದಿ ಮತ್ತು ಮಧ್ಯ ಪ್ರೌಢಾವಸ್ಥೆಯಲ್ಲಿ ಇದನ್ನು ಕಾಣಬಹುದು.
• ಸ್ಪಷ್ಟವಾಗಿ ಕಾಣುವ, ಅತಿವೇಗದ ತೂಕ ಇಳಿಕೆ.
• ಲ್ಯಾನುಗೋ: ಮೃದುವಾಧ, ತೆಳುವಾದ ಕೂದಲುಗಳು ಮುಖ ಮತ್ತು ದೇಹದೆಲ್ಲೆಡೆ ಬೆಳೆಯುತ್ತದೆ.
• ಸರಿಯಾದ ಕ್ರಮದಲ್ಲಿ ಮುಟ್ಟಾಗದಿರುವುದು.
• ವ್ಯಾಕರಿಕೆ, ಹೊಟ್ಟೆ ಉಬ್ಬರ, ಮಲಬದ್ಧತೆ.
ಆಹಾರ ಕ್ರಮ ಮತ್ತು ಚಟುವಟಿಕೆಗೆ ಸಂಬಂಧಿಸಿದ ಗುಣಲಕ್ಷಣಗಳು:
• ಆಹಾರ, ಭೋಜನ ಅಥವಾ ಅಡುಗೆಯ ಬಗೆಗೆ ಮೊದಲೆ ಮನಸ್ಸನ್ನು ಹಿಡಿದಿಡುವುದು. ಬೇರೆಯವರಿಗಾಗಿ (ಆದರೆ ತಮಗೋಸ್ಕರ ತಿನ್ನದಂತೆ) ಹೆಚ್ಚಿನ ವಿಧ ವಿಧ ಅಡುಗೆಯನ್ನು ತಯಾರಿಸುವುದು.
• ಆಹಾರ ಸೇವನೆಯನ್ನು ನಿರಾಕರಿಸುವುದು, ಹಸಿವನ್ನು ನಿರಾಕರಿಸುವುದು. ಆಹಾರ ಪದಾರ್ಥಗಳನ್ನು ಅತೀ ಚಿಕ್ಕ ಚಿಕ್ಕ ಚೂರುಗಳನ್ನಾಗಿ ಮಾಡಿ ಸೇವಿಸುವುದು.
• ಅತಿಯಾಗಿ ವ್ಯಾಯಾಮ ಮಾಡುವುದು.
• ವಿಚಿತ್ರ ಆಹಾರ ಸಂಯೋಜನೆಯನ್ನು ಸೇವಿಸುವುದು.
• ತಪ್ಪಿಸಲಾಗದ ಆಹಾರ ಸೇವನೆಯ ಕಾರಣದಿಂದಾಗಿ ಸಾಮಾಜಿಕ ಆಮಂತ್ರಣವನ್ನು ನಿರಾಕರಿಸುವುದು.

ಮನಸ್ಸಿಗೆ ಸಂಬಂಧಿಸಿದ ಗುಣಲಕ್ಷಣಗಳು:
• ತೂಕ ಹೆಚ್ಚುವ ಬಗ್ಗೆ ಅಥವಾ ಮುಂದೆ ಅತಿಭಾರವಾಗುವ ಭೀತಿ.
• ಸದಾ ದುಃಖಿತರಾಗಿರುವುದು.
• ತೂಕ, ಆಹಾರ, ವ್ಯಾಯಾಮ ಮತ್ತು ಪಥ್ಯದ ಕ್ರಮಗಳ ಬಗ್ಗೆ ಅತಿಯಾಗಿ ಗಮನವಹಿಸುವುದು.
• ಖಿನ್ನತೆ, ಹತಾಶೆ
• ತಿನ್ನುತ್ತಿರುವ ಕ್ರಮವನ್ನು (ಅಭ್ಯಸಿಸಿದ ಕ್ರಮವನ್ನು) ಅಸಹಜವೆಂದು ಒಪ್ಪಿಕೊಳ್ಳಲು ನಿರಾಕರಿಸುವುದು.
• ಅಪೌಷ್ಥಿಕತೆಯಿಂದ ಅತಿಯಾದ ಸುಸ್ತು ಮತ್ತು ಬಳಲಿಕೆ.

೨. ಬುಲೀಮಿಯ ನರ್ವೋಸ (bulimia nervosa – A serious eating disorder marked by bingeing, followed by methods to avoid weight gain )

ದೈಹಿಕ ಗುಣಲಕ್ಷಣಗಳು:
• ಪ್ರೌಢಾವಸ್ಥೆಯ ಅಂತ್ಯದಲ್ಲಿರುವವರಲ್ಲಿ ಈ ಸಮಸ್ಯೆ ಕಾಣಬಹುದಾಗಿದೆ, ಮತ್ತು ತೂಕ ಇಳಿಕೆಯ ನಂತರ ಅಥವಾ ಪಥ್ಯದ ನಂತರ ಈ ಸಮಸ್ಯೆ ಶುರುವಾಗುತ್ತದೆ.
• ಸಾಮಾನ್ಯವಾಗಿ ಸರಿಯಾದ ದೇಹದ ತೂಕ ಉಳ್ಳವರಾಗಿರುತ್ತಾರೆ, ಆದರೆ ಆಗಾಗ್ಗೆ ತೂಕದ ಏರಿಳಿತಗಳನ್ನು ಕಾಣಬಹುದು.
• ಕೈಗಳ ಹಿಂಭಾಗದಲ್ಲಿ ಗೋಚರಿಸುವಂತಹ ಕ್ಯಾಲಸಸ್ ಮತ್ತು ಕ್ಯಾಲ್ಸಿಫೈಡ್ ಅಂಗಾಂಶ.
• ಹಲ್ಲಿನ ಕುಳಿಗಳು, ಹಲ್ಲಿನ ದಂತಕವಚ ಸವೆತ.
• ಅತಿಯಾದ ಸುಸ್ತು ಮತ್ತು ಬಳಲಿಕೆ.
• ಅನಿಯಮಿತ ಮುಟ್ಟು.
ಆಹಾರ ಮತ್ತು ವ್ಯಾಯಾಮಕ್ಕೆ ಸಂಬಂಧಿಸಿದ ಗುಂಲಕ್ಷಣಗಳು:
• ಅತೀಯಾಗಿ ತಿನ್ನುವುದು.
• ಅತಿಯಾಗಿ ತಿಂದ ನಂತರ ಕಟ್ಟುನಿಟ್ಟಾದ ಪಥ್ಯವನ್ನು ಅನುಸರಿಸುವುದು.
• ಲಾಕ್ಸೇಟಿವ್, ಡೈಯೂರೇಟಿಕ್ಸ್ ಮುಂತಾದ ಮಾತ್ರೆಗಳನ್ನು ಬಳಸುವುದು.
• ಸ್ವಯಂ ಪ್ರೇರಿತವಾಗಿ ವಾಂತಿ ಮಾಡುವುದರಲ್ಲಿ ತೊಡಗುವುದು, ವಾಂತಿ ಮಾಡಲೆಂದು ಊಟದ ಬಳಿಕ ಶೌಚಾಲಯಕ್ಕೆ ಓಡುವುದು, ಮತ್ತು ಕ್ಯಾಲೋರಿಯುಕ್ತ ಅಅಹಾರಗಳನ್ನು ವಿನಾಕಾರಣ ನಿರಾಕರಿಸುವುದು.
• ಇತರರ ಮುಂದೆ ಆಹಾರ ಸೇವಿಸುವುದನ್ನು ನಿರಾಕರಿಸುವುದು.

ಮನಸ್ಸಿಗೆ ಸಂಬಂಧಿಸಿದ ಗುಣಲಕ್ಷಣಗಳು:
• ತೂಕ, ಆಹಾರ, ವ್ಯಾಯಾಮ ಮತ್ತು ಪಥ್ಯದ ಕ್ರಮಗಳ ಬಗ್ಗೆ ಅತಿಯಾಗಿ ಗಮನವಹಿಸುವುದು.
• ಇತರರ ಮುಂದೆ ಆಹಾರ ಸೇವಿಸುವಾಗ ಅತ್ಯಂತ ಮುಜುಗರ ಹೊಂದುವುದು.
• ಆಹಾರ ಸೇವನೆಯ ಮಲೆ ಹಿಡಿತ ತಪ್ಪುವುದು ಮತ್ತು ಅತಿಯಾಗಿ ತಿನ್ನುವುದು.
• ಖಿನ್ನತೆ, ಒಂಟಿತನ, ಅವಮಾನ ಮತ್ತು ಶೂನ್ಯ ಭಾವನೆ ಹೊಂದುವುದು.
• ಮದ್ಯಪಾನ ಸೇವನೆ ಮತ್ತು ಮಾದಕ ವಸ್ತು ವ್ಯಸನಿಯಾಗುವುದು.
• ಆಹಾರ ಸೇವಿಸುವ ಕ್ರಮ ಅಸಹಜವಾಗಿದೆ ಎಂದು ಅರಿವಾದರೂ ಅದನ್ನು ಸರಿಪಡಿಸಿಕೊಳ್ಳಲು ಇಚ್ಛಿಸದಿರುವುದು.
• ಆತ್ಮವಿಶ್ವಾಸ ಕುಂದುವುದು.

೩. ಬಿಂಜ್ ಈಟಿಂಗ್ ಸಮಸ್ಯೆ: (binge eating disorder – Frequently consuming unusually large amounts of food in one sitting and feeling that eating behavior is out of control.)

ದೈಹಿಕ ಗುಣಲಕ್ಷಣಗಳು:
• ಯಾವುದೇ ಅವಧಿಯಲ್ಲಿ ಕಾಣಬಹುದಾಗಿದೆ.
• ಅತಿ ತೂಕ ಅಥವಾ ಬೊಜ್ಜು ಸಾಮಾನ್ಯವಾದ ಲಕ್ಷಣಗಳು.
• ಬೊಜ್ಜಿಗೆ ಸಂಬಂಧಿಸಿದ ಸಮಸೆಗಳಾದಂತಹ ಮಧುಮೇಹ, ರಕ್ತದೊತ್ತಡ, ಅಧಿಕ ಕೊಬ್ಬು ಮುಂತಾದ ದೈಹಿಕ ಸಮಸ್ಯೆಗಳು ಕಾಣುತ್ತವೆ.
ಆಹಾರ ಮತ್ತು ವ್ಯಾಯಾಮಕ್ಕೆ ಸಂಬಂಧಿಸಿದ ಲಕ್ಷಣಗಳು:
• ಪದೇ ಪದೇ ಪಥ್ಯ (ಡಯಟ್) ಅನುಸರಿಸುವುದು.
• ದೇಹದ ತೂಕ ಕಳೆದುಕೊಳ್ಳುವುದು ಅಥವಾ ಹೆಚ್ಚಿಸಿಕೊಳ್ಳುವುದು ಅಥವಾ ಪಥ್ಯದ ನಂತರವೂ ದೇಹದ ತೂಕವನ್ನು ಕಳೆದುಕೊಳ್ಳದಿರುವುದು.
• ತೀವ್ರ ಅಸ್ವಸ್ಥತೆಯ ಹಂತಕ್ಕೆ ತಿನ್ನುವುದು.
• ಇತರರ ಮುಂದೆ ತಿನ್ನದಿರುವುದು ಅಥವ ಕಡಿಮೆ ಪ್ರಮಾಣದಲ್ಲಿ ತಿನ್ನುವುದು.
• ಅತಿಯಾದ ತೂಕದಿಂದ ವ್ಯಾಯಾಮ ಮಾಡಲು ಕಷ್ಟಪಡುವುದು.
• ದೈಹಿಕ ಚಟುವಟಿಕೆಗಳಿಂದ ತಪ್ಪಿಸಿಕೊಳ್ಳುವುದು ಮತ್ತು ದೇಹದ ಬಗ್ಗೆ ಸ್ವಂತ ಅರಿವನ್ನು ಮೂಡಿಸುವ ಯಾವುದರಿಂದಾದರೂ ತಪ್ಪಿಸಿಕೊಳ್ಳುವುದು.

Leave a Reply

This site uses Akismet to reduce spam. Learn how your comment data is processed.