ಸಿಂಗರಿಸಿಕೊಂಡವಳು ಕುಂಕುಮವ ಧರಿಸಿ
ದೀಪ ಬೆಳಗುವುದಕೆಂದು ಮುಂಗುರುಳ ಸರಿಸಿ
ಬತ್ತಿಯೊಳಗಿದ್ದ ಕರಿ ಹಣೆಯ ಮೇಲಾಯ್ತೆನಲು
ನನ್ನವಳ ನಗುವಲ್ಲಿ ದೀಪಾವಳಿ!

ದೀಪವನು ಕೊಂಡೊಯ್ದು ಹೂಬಾಣ ಹಚ್ಚಿ
ಸಿಡಿವ ಭಯದಲಿ ಓಡಿ ಮರೆತು ಕಿವಿ ಮುಚ್ಚಿ
ಹಿಂದಿರುಗಿ ಕಡೆಗಣ್ಣ ನೋಟದಲಿ ನೋಡುತಿರೆ
ಸಣ್ಣವಳ ಮೊಗದಲ್ಲಿ ದೀಪಾವಳಿ!


ದೀಪಾವಳಿಯ ಶುಭಾಶಯಗಳು.

Leave a Reply

This site uses Akismet to reduce spam. Learn how your comment data is processed.