ನಿನ್ನ ಒಲವು ಎಂಬ ಮಲ್ಲಿಗೆಯ ಮಾಲೆಯಿರೆ
ಬೇರೆ ಹೂಗಳದೇಕೆ ಹೇಳು ನೀನೆ
ನೋವೆನುವ ಎಲೆಗಳೋ ಶಂಕೆ ಕನಕಾಂಬರವೊ
ಈ ಮಾಲೆಯೊಳಗಿಲ್ಲ ಅಲ್ಲವೇನೆ
ಎಲ್ಲ ದಿಕ್ಕಿನ ಕಡೆಗೆ ಮಲ್ಲೆ ನಗುತಿರುವಂತೆ
ಒತ್ತಾಗಿ ಮುತ್ತಾಗಿ ಕಟ್ಟುತಿರುವೆ
ಸಂಸಾರ ದಾರದಲಿ ಬಿಗಿಯಾಗಿ ಸುಖವಾಗಿ
ಜಾರದಂತೆಯೆ ತಡೆದು ಬಂಧಿಸಿರುವೆ
ಮಾಲೆ ಕಟ್ಟುವುದೇನು, ಬಹು ಸುಲಭ ಎನ್ನುವರು,
ಕೆಲರು ಹಾರವೆ ಬೇಡ ಎನ್ನುತಿಹರು
ಇನ್ನೊಂದು ಗುಂಪಿನಲಿ ಇಂಥ ರಗಳೆಯೆ ಇಲ್ಲ,
ಬರಿಯ ಬಿಡಿಹೂಗಳನೆ ಪಡೆಯುತಿಹರು
ಗಂಧವೋ ಚಂದವೋ ಎಂದೆನುವ ಗೊಂದಲಕೆ
ಮಲ್ಲಿಗೆಯ ಬಂಧವೇ ಹಿತವೆನಿಸಿದೆ
ನಮ್ಮ ಬಾಳಿನ ತುಂಬ ಸಿಕ್ಕ ಹೂಗಳನಾಯ್ದು
ನಾ ಕೊಡುವೆ, ನೀ ಕಟ್ಟು. ನಂಬಿಕೆಯಿದೆ.
By: Ishwara Bhat K
ನೈಸ್ ಭಟ್ಟರೇ
Very well written Ishwar