Article 2:
ಶಾಲಾ ಮಕ್ಕಳ ಆಹಾರ ಮಾರ್ಗಸೂಚಿ:
ಶಾಲಾ ವಯಸ್ಸಿನ ಅವಧಿಯು ಸ್ಥಿರವಾದ ಬೆಳವಣಿಗೆಯ ಹಂತವಾಗಿದೆ. ಹಸಿವಿನ ಸ್ವಾಭಾವಿಕ ಹೆಚ್ಚಳವು ಆಹಾರ ಸೇವನೆಯ ಹೆಚ್ಚಳಕ್ಕೆ ಕಾರಣವಾಗಿದೆ. ಬೆಳೆಯುತ್ತಿರುವ ಸ್ವಾತಂತ್ರ್ಯವು ಆಹಾರ ಆಯ್ಕೆಯ ನಿಯಂತ್ರಣವನ್ನು ಕ್ರಮೇಣ ಪೋಷಕರಿಂದ ಮಗುವಿಗೆ ವರ್ಗಾಯಿಸಲು ಕಾರಣವಾಗುತ್ತದೆ.
- ಹೆಚ್ಚುತ್ತಿರುವ ಚಟುವಟಿಕೆ ಮತ್ತು ಬೆಳವಣಿಗೆಗಾಗಿ, ಅನಾರೋಗ್ಯ ಅಥವಾ ಇತರೆ ಗಾಯಗಳಿಂದಾಗುವ ನಷ್ಟವನ್ನು ಪೂರೈಸಲು ವಿಶೇಷ ಪೌಷ್ಟಿಕಾಂಶದ ಅಗತ್ಯವಿರುತ್ತದೆ.
- ಮಕ್ಕಳು ಸಾಮಾನ್ಯವಾಗಿ ಪ್ರಕ್ಷುಬ್ಧರಾಗಿರುತ್ತಾರೆ ಮತ್ತು ತಿನ್ನುವುದಕ್ಕಾಗಿ ಮೇಜಿನ ಬಳಿ ಹೆಚ್ಚು ಸಮಯ ಕಳೆಯಲು ಇಚ್ಛಿಸುವುದಿಲ್ಲ. ಇದಲ್ಲದೆ ಬೆಳಿಗ್ಗೆ ಸಮಯಕ್ಕೆ ಸರಿಯಾಗಿ ತರಗತಿಗೆ ತಲುಪಬೇಕಾದ್ದರಿಂದ ಧಾವಂತದಲ್ಲಿರುತ್ತಾರೆ ಆದ್ದರಿಂದ ಭೋಜನವು ತ್ವರಿತವಾಗಿ ತಿನ್ನಲು ಮತ್ತು ಪೌಷ್ಟಿಕಾಂಶವನ್ನು ತೃಪ್ತಿ ಪಡಿಸುವ ಭಕ್ಷ್ಯಗಳನ್ನು ಒದಗಿಸಬೇಕು.
- ಮಕ್ಕಳು ಸುಲಭವಾಗಿ ಬೇಸರಗೊಳ್ಳುತ್ತಾರೆ ಆದ್ದರಿಂದ ಆಹಾರದಲ್ಲಿ ಬಣ್ಣ ಮತ್ತು ವಿನ್ಯಾಸದ ಮೂಲಕ ಹೆಚ್ಚು ವೈವಿಧ್ಯತೆಯನ್ನು ನೀಡಬೇಕು.
- ಹವಮಾನ ಪರಿಸ್ಥಿತಿಗಳು ಸಹ ಮುಖ್ಯವಾದ ಪರಿಗಣನೆಯಾಗಿದೆ. ಬೇಸಿಗೆಯಲ್ಲಿ ಹೆಚ್ಚುವರಿ ದ್ರವಗಳು ಮತ್ತು ಲವಣಗಳನ್ನು ನೀಡಬೇಕಾಗುತ್ತದೆ ಏಕೆಂದರೆ ಮಕ್ಕಳು ಸಾಮಾನ್ಯವಾಗಿ ಸರಳ ನೀರನ್ನು ಕುಡಿಯಲು ಇಚ್ಛಿಸುವುದಿಲ್ಲ.
- ಶಾಲಾ ಮಕ್ಕಳು ನಿಗದಿತ ಭೋಜನ ವೇಳೆಯ ಮಧ್ಯದಲ್ಲಿ ಕೆಲವು ಆಹಾರಗಳನ್ನು ಸೇವಿಸಲು ಇಷ್ಟಪಡುತ್ತಾರೆ. ಹಣ್ಣುಗಳಾದ ಸೇಬು, ಬಾಳೆ, ನೆಲ್ಲಿಕಾಯಿ, ಕಿತ್ತಳೆ, ಹುರಿದ ಕಡಲೆಕಾಯಿ ಬೀಜ, ಬಟಾಣಿ ಇವುಗಳನ್ನು ಇಷ್ಟಪಟ್ಟು ಶಾಲೆಯ ವೇಳೆಯ ಮಧ್ಯದಲ್ಲಿ ತಿನ್ನುತ್ತಾರೆ. ಇವು ರುಚಿ-ಶುಚಿಯಿಂದ ಕೂಡಿದರೆ ಅವುಗಳಿಂದ ಒಳ್ಳೆಯ ಪೋಷಕಾಂಶಗಳು ಮತ್ತು ಕ್ಯಾಲೋರಿಗಳು ದೊರೆಯುತ್ತದೆ.
- ಕುಟುಂಬದೊಟ್ಟಿಗೆ ಆಹಾರ ಸೇವಿಸಲು ಮಕ್ಕಳು ಸಿದ್ಧರಿರುವುದರಿಂದ ಮತ್ತು ಕುಟುಂಬದ ಸದಸ್ಯರ ನಡುವಿನ ಸಂವಹನವು ಸಾಮಾನ್ಯ ಬೆಳವಣಿಗೆಯ ಭಾಗವಾಗಿರುವ ಕಾರಣ ಚಿಕ್ಕ ಮಗುವನ್ನು ಕುಟುಂಬದ ಉಳಿದವರೊಂದಿಗೆ ತಿನ್ನಲು ಪ್ರೋತ್ಸಾಹಿಸಬೇಕು.
- ಮಗುವಿಗೆ ತರಕಾರಿಗಳು(ಸಲಾಡ್) ಇಷ್ಟವಾಗದಿದ್ದಲ್ಲಿ ಅವುಗಳನ್ನು ಸ್ಯಾಂಡ್ವಿಚ್ ಮೂಲಕ ಕೊಡಬಹುದು.
- ಶಾಲೆಯಿಂದ ಹಿಂದಿರುಗಿದ ನಂತರ ಸೇವಿಸುವ ಆಹಾರವು, ಆಹಾರ ಕ್ರಮಕ್ಕೆ ಸಕಾರಾತ್ಮಕ ಕೊಡುಗೆ ನೀಡುತ್ತದೆ. ಹಣ್ಣುಗಳು ಮತ್ತು ಒಣ ಹಣ್ಣುಗಳನ್ನು ಲಘು ಆಹಾರವಾಗಿ ನೀಡಬಹುದು.
ಮೊದಲನೇ ಭಾಗ – https://hummingviews.com/2020/01/08/ಪೊಟ್ಟಣದ-ಆಹಾರ-packed-lunch/