ಶಾಲೆಗಳು ದೂರವಿರುವುದರಿಂದ ಮತ್ತು ಶಾಲಾ ಅವಧಿಯಲ್ಲಿ ಊಟದ ಸಮಯಾವಾಕಾಶ ಕಡಿಮೆ ಇರುವುದರಿಂದ ಪ್ಯಾಕ್ಡ್ ಲಂಚ್, ಶಾಲೆಗೆ ಊಟದ ಡಬ್ಬಿಯನ್ನು ತೆಗೆದುಕೊಂಡು ಹೋಗುವುದು ಮಕ್ಕಳ ಅವಶ್ಯಕತೆಯಾಗಿದೆ. ಮನೆಯಿಂದ ದೂರ ಹೋಗುವ ಮಕ್ಕಳು ಡಬ್ಬಿಯಲ್ಲಿ ತೆಗೆದುಕೊಂಡು ಹೋಗುವ ಆಹಾರವನ್ನು ಪ್ಯಾಕ್ಡ್ ಲಂಚ್ ಅಥವಾ ಪೊಟ್ಟಣದ ಊಟ ಎಂದು ಕರೆಯುತ್ತಾರೆ. ಈ ರೀತಿಯಾಗಿ ತೆಗೆದುಕೊಂಡು ಹೋಗುವ ಆಹಾರವು ಪ್ರಮಾಣದಲ್ಲಿ ಮತ್ತು ಗುಣಮಟ್ಟದಲ್ಲಿ ಸಮರ್ಪಕವಾಗಿರುವುದಿಲ್ಲ. ಮನೆಯಿಂದಲೇ ಆಹಾರ ಕಟ್ಟಿಕೊಂಡು ಹೋಗುವುದು ಪರಿಶ್ರಮವಾದರೂ ಆರೋಗ್ಯ ಕಾಯ್ದುಕೊಳ್ಳುವಲ್ಲಿ ಸಹಕಾರಿಯಾಗಿದೆ. ಮನೆಯಿಂದಲೇ ಆಹಾರವನ್ನು ತೆಗೆದುಕೊಂಡು ಹೋಗುವುದು ಕಡಿಮೆ ವೆಚ್ಚದಾಯಕ, ಹೆಚ್ಚು ಅನುಕೂಲಕರ, ಹೆಚ್ಚು ಆರೋಗ್ಯಕರ ಮತ್ತು ವೈಯಕ್ತಿಕ ಅವಶ್ಯಕತೆಗಳನ್ನು ಪೂರೈಸುತ್ತದೆ.

ಪ್ಯಾಕ್ ಮಾಡಿದ ಊಟವನ್ನು ಯೋಜಿಸುವಾಗ ಪರಿಗಣಿಸಬೇಕಾದ ಅಂಶಗಳು:

 1. ಡಬ್ಬಿಯಲ್ಲಿ ತೆಗೆದುಕೊಂಡು ಹೋಗುವ ಆಹಾರ ಮಗುವಿನ ಏಕಾಗ್ರತೆಯನ್ನು ಮತ್ತು ಶಕ್ತಿಯನ್ನು ಹೆಚ್ಚಿಸುವಂತಿರಬೇಕು- ಕ್ಯಾಲೋರಿಗಳು, ಪ್ರೋಟಿನ್ ಮತ್ತು ಇತರ ಪೋಷಕಾಂಶಗಳ 1/3ನೇ ದೈನಂದಿನ ಅಗತ್ಯವನ್ನು ಪೂರೈಸಬೇಕು.
 2. ಭಕ್ಷ್ಯಗಳ ಸಂಖ್ಯೆ ಕಡಿಮೆ ಇದ್ದರು ಎಲ್ಲಾ ಐದು ಆಹಾರ ಗುಂಪುಗಳನ್ನು ಒಳಗೊಂಡಿರಬೇಕು.
 3. ಸೊಪ್ಪುಗಳನ್ನು ಸೇವಿಸುವುದರಿಂದ ಅವಶ್ಯಕವಿರುವ ಅನೇಕ ಜೀವಸತ್ವಗಳ ಮತ್ತು ಖನಿಜಗಳ 1/3ನೇ ಅಗತ್ಯವನ್ನು ನೋಡಿಕೊಳ್ಳಲಾಗುತ್ತದೆ.
 4. ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಸೇರಿಸುವುದರಿಂದ ಉತ್ತಮ ಗುಣಮಟ್ಟದ ಪ್ರೋಟಿನ್ ಅನ್ನು ನೀಡಿದಂತಾಗುತ್ತದೆ. ಅಥವಾ ಧಾನ್ಯಗಳು ಮತ್ತು ಬೇಳೆಕಾಳುಗಳಂತಹ ಸಂಯೋಜನೆಯನ್ನು ನೀಡಬಹುದು.
 5. ಮೊಟ್ಟೆಯನ್ನು ನೀಡುವುದರಿಂದ ಪ್ರೋಟಿನ್ ಗುಣಮಟ್ಟವು ಸುಧಾರಿಸುತ್ತದೆ.
 6. ಆಹಾರವನ್ನು ಆಕರ್ಷಕÀವಾಗಿಸಲು ಹಣ್ಣು, ಬಾಟಲಿಯಲ್ಲಿ ಮಜ್ಜಿಗೆಯನ್ನು ಸೇರಿಸಬಹುದು. ಏಕತಾನತೆಯನ್ನು ತಪ್ಪಿಸಲು ಬೆಳಗಿನ ಉಪಹಾರಕ್ಕಿಂತ ಭಿನ್ನವಾದುದನ್ನು ಡಬ್ಬಿಯಲ್ಲಿ ಕಳಿಸಿದರೆ ಉತ್ತಮ.
 7. ಆಹಾರವು ಸರಿಯಾದ ಸ್ಥಿರತೆಯನ್ನು ಹೊಂದಿರಬೇಕು. ತುಂಬಾ ನೀರಿರುವ ವಸ್ತುಗಳು ಸೋರಿಕೆಯಾಗಬಹುದು ಮತ್ತು ತುಂಬಾ ಒಣ ಆಹಾರವು ಮಗುವಿಗೆ ತಿನ್ನಲು ಕಷ್ಟವಾಗಬಹುದು. ಈ ಕಾರಣದಿಂದಾಗಿ ಮಕ್ಕಳು ಡಬ್ಬಿಯ ಆಹಾರವನ್ನು ನಿರಾಕರಿಸುವ ಸಾಧ್ಯತೆಯಿರುತ್ತದೆ.
 8. ಊಟದ ಡಬ್ಬಿಯ ಯೋಜನೆ, ತಯಾರಿಕೆ ಅಥವಾ ಪ್ಯಾಕಿಂಗ್ ಅಲ್ಲಿ ಮಗುವನ್ನು ತೊಡಗಿಸಿಕೊಳ್ಳಿ.
 9. ಹೆಚ್ಚಿನ ಮಕ್ಕಳಿಗೆ ಆಟದ ಮೇಲೆ ಗಮನವಿರುವುದರಿಂದ ತ್ವರಿತವಾಗಿ ಊಟ ಮಾಡುತ್ತಾರೆ. ಆದ್ದರಿಂದ ಆಹಾರವು ಆದಷ್ಟು ಸರಳವಾಗಿರಲಿ.
 10. ಆಹಾರವು ಸರಳವಾಗಿದ್ದಲ್ಲಿ ಮಕ್ಕಳು ಅದನ್ನು ಸಂಪೂರ್ಣವಾಗಿ ತಿನ್ನುತ್ತಾರೆ.
  ಕೆಲವು ಸುಲಭವಾದ ಪೊಟ್ಟಣದ ಆಹಾರ:
  • ತರಕಾರಿ ಪುಲಾವ್, ಮೊಟ್ಟೆ, ಟೊಮಾಟೊ ಪಚಡಿ ಮತ್ತು ಒಂದು ಕಿತ್ತಳೆ ಹಣ್ಣು.
  • ಮೆಂತ್ಯೆ ಚಪಾತಿ, ದಾಲ್ ಮತ್ತು ಮಜ್ಜಿಗೆ.
  • ಚಪಾತಿ, ಉಸುಳಿ ಮತ್ತು ಕೊಸಂಬರಿ.
  • ಚೀಸ್ ಸ್ಯಾಂಡ್ವಿಚ್ ಅಥವಾ ಪನೀರ್ ಸ್ಯಾಂಡ್ವಿಚ್ ಜೊತೆಗೆ ಒಂದು ಸೀಬೆ ಹಣ್ಣು.
  • ಇಡ್ಲಿ ಮತ್ತು ತರಕಾರಿ ಗೊಜ್ಜು.
  • ಕಿಚಡಿ/ಪೊಂಗಲ್, ಚಟ್ನಿ ಮತ್ತು ಮಜ್ಜಿಗೆ.
  • ದೋಸೆ/ ರೊಟ್ಟಿ ಮತ್ತು ಪಲ್ಯ

Leave a Reply

This site uses Akismet to reduce spam. Learn how your comment data is processed.