ಅನುದಿನವು ಮನದೊಳಗೆ ಸೆಳೆಯುತಿದೆ ನೋಡು
ಬೆಳಕೆನುವ ಪಾಡು
ಕತ್ತಲಿನ ಸೆರೆಯಲ್ಲಿ ಕರಗಿಹುದು ಹಾಡು,
ಪದಗಳದೆ ಜಾಡು.
ಇರುಳು ಕಳೆಯಿರಿ ಎನುತ ಹಗಲು ಚಿಂತೆಯ ಕೊಟ್ಟೆ
ಮೌನ ಕೊರೆಯಲು ಮಾತು ಬುತ್ತಿಗಳನು
ಶಾಂತ ನಿದ್ದೆಯ ತೊರೆದು ಎಚ್ಚರಿಕೆ ಎನ್ನುತಲಿ
ಬೆಳಕನುರಿಸುವ ಹುಚ್ಚು ಬಯಕೆಗಳನು
ಬೆಳಕು ಹೆಚ್ಚಿಸುವಾಸೆ , ಮೇಣ ಬತ್ತಿಯದೊಂದು
ಎರಡು ಕಡೆಗಳಿಗೀಗ ಬೆಂಕಿಯಿಟ್ಟು
ಬೇಗ ಕರಗಿತು ಮೇಣ, ಬೆಳಕಿಗಿಲ್ಲವು ತ್ರಾಣ
ಕುಳಿತಿಹೆನು ಕತ್ತಲಲಿ ಕಣ್ಣನಿಟ್ಟು
ಬೆಳಕು ಕತ್ತಲೆಯೆನುವ ತರ್ಕ ಸಂತೆಯ ನಡುವೆ
ಸರಳ ಬದುಕಿನ ರೀತಿ ನೆಮ್ಮದಿಯಿದೆ.
ಇನ್ನೊಂದು ಹಗಲಿಹುದೆ? ಮತ್ತೆ ರಾತ್ರಿಯು ಬಹುದೆ?
ಬೆಳಕಿನಾಸೆಯ ಮನಸು ಸುಮ್ಮನಿಹುದೆ?

night television tv video
Photo by Tookapic on Pexels.com

By : Ishwara Bhat K

2 thoughts on “ಬೆಳಕಿನಿಂದ ಕತ್ತಲೆಯೆಡೆಗೆ.”

  1. ಅರ್ಥಗರ್ಭಿತ ಕವನ !! ಚಂದ ಇದ್ದು ಕಿರಣ !!

Leave a Reply

This site uses Akismet to reduce spam. Learn how your comment data is processed.