ಜಗತ್ತಿನಲ್ಲಿ ಅತ್ಯಂತ ಹೆಚ್ಚು ಹಣ ಇದ್ದೋರು ಸುಖವಾಗಿದ್ದಾರೆಂದು ಬಡವರೂ, ಬಡವರೇ ಸುಖವಾಗಿದ್ದಾರೆಂದು ಶ್ರೀಮಂತರೂ ನಂಬಿದ್ದಾರೆ. ಇದು ಸತ್ಯವೋ ಸುಳ್ಳೋ ಎಂದು ತಿಳಿಯದೇ ಮಧ್ಯಮವರ್ಗದವರು ಕೆಲವೊಂದು ಸಂದರ್ಭ ಬಡವರಾಗಿಯೂ, ಕೆಲವೊಂದು ಸಂದರ್ಭ ಶ್ರೀಮಂತರಾಗಿಯೂ ದ್ವಂದ್ವಯುದ್ಧ ಮಾಡುತ್ತಿರುತ್ತಾರೆ.

ಸುಖವೆಂದರೆ ಏನು ಎನ್ನುವ ಯೋಚನೆಯಲ್ಲಿಯೇ ಮನುಷ್ಯ ತಾನು ಬದುಕಿರುವ ರಸಮಯ ಸಮಯಗಳನ್ನು ಮರೆಯುತ್ತಾನೆ. ಇನ್ನೊಬ್ಬನ ಸಂತೋಷದ ಕ್ಷಣಗಳನ್ನು ನೋಡಿ ಅದನ್ನು ತುಲನೆ ಮಾಡಿ ತನ್ನನ್ನು ಅಳೆಯುತ್ತಾನೆ. ಮನುಷ್ಯನ ಸಹಜ ಸ್ವಭಾವ ಇದು.

ಯಶ್ಚ ಮೂಢತಮೋ ಲೋಕೇ ಯಶ್ಚ ಬುದ್ಧೇ ಪರಂ ಗತಃ 
ತಾವುಭೌ ಸುಖಮೇಧತೇ ಕ್ಲಿಶ್ಯತ್ಯಂತರಿತೋ ಜನಃ
- ಭಾಗವತ.

ಹೀಗೊಂದು ಒಳ್ಳೆಯ ಮಾತಿದೆ ಭಾಗವತದಲ್ಲಿ. ಇದರ ಅರ್ಥ ಬಹಳ ಸುಂದರವಾದುದು. ಜಗತ್ತಿನಲ್ಲಿ ಯಾರು ಅತ್ಯಂತ ಮೂರ್ಖರೋ, ಮತ್ತು ಯಾರು ಅಮಿತವಾದ ಬುದ್ಧಿಮತ್ತೆಯನ್ನು ಹೊಂದಿದ್ದಾರೋ ಇವರಿಬ್ಬರೇ ಅತ್ಯಂತ ಸುಖಿಗಳು. ಈಗ ಅತ್ಯಂತ ಮೂರ್ಖರನ್ನು ಮತ್ತೆ ಅತ್ಯಂತ ಬುದ್ಧಿವಂತರನ್ನು ಹುಡುಕುವುದು ಹೇಗೆ?

Leave a Reply

This site uses Akismet to reduce spam. Learn how your comment data is processed.