ದೋಸೆ

ಚುಂಮ್ ಚುಂಮ್ ಜಳಿಯಲಿ ಚುಂಯಿ ಚುಂಯಿ ದೋಸೆ ಹೊಯ್ಯುವಾಗಲೇ ಚುಂಯಿ ಚುಂಯಿ ಸಂಗೀತ ಹೊರಡಿಸುವ ದೋಸೆ ತಿಂದಮೇಲೆಯೂ ಸಂಗೀತ ಹೊರಡಿಸುವುದೇ? ಅದು ದೋಸೆಯೊಂದಿಗೆ ತಿನ್ನುವ ಪಲ್ಯದ ಮೇಲೆ ಅವಲಂಬಿತವಾಗಿರುತ್ತದೆ. ದೋಸೆ ಎನ್ನುವಾಗ ಬಾಲ್ಯದ ನೆನಪಾಗುತ್ತದೆ. ಅಂದು ಚಳಿಗಾಲದಲ್ಲಿ, ಬೆಳಗ್ಗೆ ಅಮ್ಮ ಬೇಗನೆ ಎದ್ದು ಒಲೆಯ ಮೇಲೆ ಕಾವಲಿ ಇಟ್ಟು ಚೊಂಯ್ಯ್ ಎಂದು ದೋಸೆ ಹೊಯ್ಯಲು ನಿದ್ರೆಯಲ್ಲಿದ್ದ ನಾವೆಲ್ಲ ಎದ್ದು ಅಮ್ಮನ ಹತ್ತಿರ ಒಲೆ ಮುಂದೆ ಕುಳಿತು ಕೊಳ್ಳುತ್ತಿದ್ದೆವು.ಹೊಯ್ದ ದೋಸೆಗಳನ್ನೆಲ್ಲ ಸರದಿಯಂತೆ […]

Advertisements

ಕೈ ಕೆಸರಾದರೆ …. ಒಂದು ವಿಡಂಬನೆ

ಕೈ ಕೆಸರಾದರೆ …. ಒಂದು ವಿಡಂಬನೆ “ಅಮ್ಮ ಇವತ್ತು ಟೀಚರ್, ಗಾದೆಯ ಬಗ್ಗೆ ಬರೆಯಲು ಹೇಳಿದ್ದಾರೆ.” “ಹೌದಾ ಯಾವ ಗಾದೆ? ಕೈ ಕೆಸರಾದರೆ ಬಾಯಿ ಮೊಸರು” “ಅಂದ್ರೆ” “ಬಾಯಿ ಮೊಸರಾಗ ಬೇಕಾದರೆ ಕೈ ಕಸರಾಗ ಬೇಕಂತೆ” “ಯಾರು ಹೇಳಿದ್ರು?” “ಪ್ರಂಡ್ ಹೇಳಿದ್ದು” “ಅವನಿಗೆ ಬುದ್ಧಿಯಿಲ್ಲ. ವಿಷಯ ಕೊಡುವ ಟೀಚರಿಗೆಚಾದರೂ ಬುದ್ಧಿ ಬೇಡವಾ? ಕೆಸರು ಅಂದರೇನು ಗೊತ್ತಾ ನಿಂಗೆ?” “ಇಲ್ಲ ಮಮ್ಮಿ” “ಮಡ್ಡ್.: ಮಡ್ಡ್. ಡರ್ಟಿ ಮಡ್ಡ್. ಅದನ್ನು ಕೈಯಲ್ಲಿ ಮುಟ್ಟಿದರೆ […]

ಚಿತ್ರವ ಬಿಡಿಸುವ ಚಂದಿರ ಬಾನೊಳು

ಚಿತ್ರವ ಬಿಡಿಸುವ ಚಂದಿರ ಬಾನೊಳು ಸೂರ್ಯನ ಕಿರಣದಿ ಕುಂಚವ ಮಾಡಿ ಆಗಸ ಬಿಳಿಯೆನೆ ಕರಿಯನು ಒಡ್ಡುತ ಕರಿಯಾಯ್ತೆನುತಿರೆ ಬಿಳಿಯೆಳೆಯ ಕೆಂಪು ನೀಲಿಗಳ ಬಣ್ಣಗಳೆಲ್ಲಿದೆ? ದೂರುವ ವಿಕೃತಿಯ ಮಾಡುವ ತಿಳಿಯ! ಬಳಿಯೊಳು ತೇಲುವ ಕಪ್ಫಿನ ಅಂಗಿಯ ಮೋಡದ ಕೊಳೆಯನು ಹೊರಗೆಸೆದು ನೆಲವದು ಕರಿಯೆನೆ ಭ್ರಾಂತಿಯ ಬರಿಸುವ ಮೋಡವೆ ಮನಸೆನೆ, ಆಗಿದೆ ಹೊಳೆದು. ಗೆಳೆಯನ ಖಾರವ ಎದೆಯೊಳಗಾಡಿಸಿ ಶಾಂತಿಯ ಮಾತುಗಳಾಡುವೊಲು! ಸೂರ್ಯನ ಬಿಸಿಯನು ನಮ್ಮೆದೆಗಿಳಿಸುವ ಚಂದಿರ ಚಿತ್ರಕ, ನಮಗಿಂ ಮಿಗಿಲು. By : […]

ಹಾಡೆಷ್ಟನೋ ಬರೆದ ಕವಿ

ಹಾಡೆಷ್ಟನೋ ಬರೆದ ಕವಿ ಓದಿದರು ಹಲವರು ಕವಿಗಾಗಿ ಹಾಡಿದವರ್ಯಾರು? ಇರದ ಭಾವನೆಗಳನು ಎಳೆದು ತುಂಬಿದ ಅವನು ಅವನ ಭಾವವ ಅರಿತರ್ಯಾರು? ಮರವು ಎಲೆಗಳನುಳಿದು ದೇಹಗಾಯದ ನಡುವೆ ಮೊಗ್ಗುಗಳ ಹೊರದೂಡಲೇಕೆ? ಹೂವರಳಿ ನಿಂತಾಗ ಚಿಟ್ಟೆಗೋ ಹಸಿವಾಯ್ತು ಮೊಳಕೆಯಾದಿತೆ ಕಾಯಿ ಮಳೆಗಾಲಕೆ? ಹುಳದ ರಕ್ಷಣೆಕವಚ ರೇಶ್ಮೆಯಾಗುವುದೆಂತೊ ಕವಿಗಿಲ್ಲ ಅವನೊಲಿದ ಭಾವ ಯಾವುದೋ ಹೊದಿಕೆಯಲಿ ಯಾರದೋ ಕನಸಿರಲು ಜಿಗಣೆ ಕಳೆಯಿತು ರಾತ್ರಿ ಹಸಿವ! ನೋಡಿ ಸುಮ್ಮನೆ ನಗಲು, ನಕ್ಕಂತೆ ನಟಿಸಿರಲು ಜಗವು ಖುಷಿಪಟ್ಟರದು ಪಡಲಿ; […]

ಹೈಸ್ಕೂಲ್ ದಿನಗಳು – ಭಾಗ ೨

10ನೇಯ ಸರದಿ. ಶಿಕ್ಷಕರು ಹೆಸರು ಕರೆದರು. ಉತ್ತರ ಪತ್ರಿಕೆ ಪಡೆಯಲು ಹೊರಟವರನ್ನು. ಅಲ್ಲೇ ನಿಲ್ಲಲು ಹೇಳಿದರು ಶಿಕ್ಷಕರು. ಉತ್ತರ ಪತ್ರಿಕೆಯನ್ನು ತೆರೆದು ಓದಲು ಆರಂಬಿಸಿದರು. ಪ್ರಶ್ಬೆ: ಹಾಸಿಗೆ ಇದ್ದಷ್ಟು ಕಾಲು ಚಾಚು ಈ ಗಾದೆಯನ್ನು ವಿವರಿಸಿ. ಉತ್ತರ: ಬಸವ ಮನೆಗೆ ಬಂದಾಗ ಬಂಗಾರಿ. ಹಾಸಿಗೆಯಲ್ಲಿ ಮಲಗಿ ನಿದ್ರಿಸುತ್ತಿದ್ದಳು. ಅವಳು ಕಾಲನ್ನು ಹಾಸಿಗೆಯಿಂದ ಹೊರಗೆ ಚಾಚಿದ್ದಳು. ಇದನ್ನು ನೋಡಿ ಬಸವನಿಗೆ ಕೋಪ ಬಂತು. ಹಾಸಿಗೆಯಿದ್ದಷ್ಟು ಕಾಲು ಚಾಚು ಎಂದು ಬಸವನು ಬಂಗಾರಿಯನ್ನುಬೈದನು. […]