ಮಹಿಳೆ ಮತ್ತು ಆರೋಗ್ಯ – ೪

ಇಂದಿನ ಜಡ ಜೀವನ ಶೈಲಿ ಹಾಗೂ ರಾಸಾಯನಿಕಯುಕ್ತ, ಸಂಸ್ಕರಿಸಿದ ಆಹಾರಗಳ ಮತ್ತು ಜಂಕ್ ಫುಡ್‍ಗಳ ಸೇವನೆ ಹೆಚ್ಚುತ್ತಿರುವ ಕಾರಣ ಮಧುಮೇಹ, ಸ್ಥೂಲಕಾಯ, ಕ್ಯಾನ್ಸರ್ (ಅರ್ಭುದ),ಹೃದಯ ಸಂಬಂಧಿ ಕಾಯಿಲೆಗಳು, ಸಂಧಿವಾತದಂತಹ ಹಲವಾರು ವ್ಯಾಧಿಗಳು ವಯಸ್ಸಿನ ಬೇಧವಿಲ್ಲದೆ ಎಲ್ಲರಲ್ಲೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ.

ಇಂತಹ ಸಂದರ್ಭದಲ್ಲಿ, ಆರೋಗ್ಯ ಸುಧಾರಣೆಯ ಕ್ರಾಂತಿಯಂತೆ ಮನೆ ಮನೆಯಲ್ಲೂ ಪ್ರಚಲಿತಗೊಂಡಿದ್ದು ಹತ್ತು ಸಾವಿರ ವರ್ಷ ಇತಿಹಾಸವಿರುವ ಹುಲ್ಲಿನ ಪ್ರಬೇಧದ ಸಣ್ಣ ಬೀಜದ ಧಾನ್ಯ. ಮೇವು ಮತ್ತು ಮಾನವನ ಆಹಾರಕ್ಕಾಗಿ ಏಕದಳ ಬೆಳೆಗಳು ಅಥವಾ ಧಾನ್ಯಗಳಂತೆ ಪ್ರಪಂಚದಾದ್ಯಂತ ವ್ಯಾಪಕವಾಗಿ ಬೆಳೆಯಲಾಗುತ್ತಿರುವ, ಹಿತಮಿತವಾದ ಬಳಕೆಯಿಂದ ಬದುಕು ಹಸನಾಗಿಸಬಲ್ಲ ಸಿರಿಧಾನ್ಯ. ಮಾನವ ಸಮುದಾಯ ಅಡುಗೆಗೆ ಬಳಸಿದ ಮೊಟ್ಟ ಮೊದಲ ಆಹಾರಧಾನ್ಯ ಎಂಬ ಹೆಗ್ಗಳಿಕೆ ಸಿರಿಧಾನ್ಯಗಳದು. ಹಿಂದಿನ ಕಾಲದಿಂದಲೂ ನಮ್ಮ ಆಹಾರ ಪದ್ಧತಿಯಲ್ಲಿ ಸಿರಿಧಾನ್ಯಗಳ ಬಳಕೆ ಕಂಡುಬರುತ್ತದೆ ಮತ್ತು ಧಾನ್ಯಗಳು ಪ್ರಪಂಚದ ಅನೇಕ ಭಾಗಗಳಿಗೆ ಸ್ಥಳೀಯವಾಗಿವೆ.

ಲಭ್ಯವಿರುವ ಸಿರಿಧಾನ್ಯಗಳು:

Barnyard Millet ಊದಲು  1
Kodo Millet ಹಾರಕ

 

 2
Little Millet ಸಾಮೆ  3
Foxtail Millet ನವಣೆ 4
Finger Millet ರಾಗಿ  5
Proso Millet ಬರಗು  6
Pearl Millet ಸಜ್ಜೆ 7
Sorghum (Great Millet)

 

ಬಿಳಿ ಜೋಳ  8

 

ಸಿರಿಧಾನ್ಯಗಳ ವಿಶೇಷತೆ ಮತ್ತು ಉಪಯೋಗ:

“ಅಕ್ಕಿ ತಿಂದವ ಹಕ್ಕಿ,ಜೋಳ ತಿಂದವ ತೋಳ” ಎಂಬ ಜನಪದರಿಂದ ಬಿರುದು ಪಡೆದ ಸಿರಿಧಾನ್ಯ ಜೋಳ. “ಬೇಕು ಅಂದ್ರೆ ಒಳ್ಳೆ ನಿದ್ದೆ ನುಂಗ್ಬೇಕಣ್ಣ ರಾಗಿ ಮುದ್ದೆ” ಎಂದು ಹೊಗಳಿಸಿಕೊಂಡ ರಾಗಿಯನ್ನು ರಾಮಧಾನ್ಯ ಎಂದು ಕನಕದಾಸರು ಬಣ್ಣಿಸಿದ್ದಾರೆ. ಎಲ್ಲ ಹವಾಮಾನಕ್ಕೂ ಹೊಂದಿಕೊಂಡು, ಕೀಟ ಮತ್ತು ರೋಗಗಳ ಬಾಧೆ ಇಲ್ಲದೆ, ರಾಸಯನಿಕವನ್ನು ಬಳಸದೆ, ನಿಸರ್ಗಕ್ಕೆ ಹಾನಿ ಮಾಡದಂತೆ ಸಿರಿಧಾನ್ಯಗಳನ್ನು ಬೆಳೆಯಬಹುದು. ಸಿರಿಧಾನ್ಯಗಳಾದ ರಾಗಿ, ನವಣೆ, ಸಾವೆ, ಸಜ್ಜೆ, ಊದಲು, ಬರಗು, ಹಾರಕ ಮತ್ತು ಜೋಳದಂತಹ ಬೆಳೆಗಳು “ಗಾತ್ರದಲ್ಲಿ ಕಿರಿದು, ಗುಣದಲ್ಲಿ ಹಿರಿದು”.ಭತ್ತ ಅಥವಾ ಗೋಧಿಯಂತೆ ಸಿರಿಧಾನ್ಯದ ಬೆಳೆಗೆ ಹೆಚ್ಚು ನೀರಿನ ಅವಶ್ಯಕತೆ ಇಲ್ಲ. ಒಣಭೂಮಿಯಲ್ಲೂ ಹುಲುಸಾಗಿ ಬೆಳೆಯುತ್ತವೆ ಮತ್ತು ಬರಗಾಲವನ್ನು ಎದುರಿಸಿ ನಿಲ್ಲುತ್ತವೆ. ಅಕ್ಕಡಿ ಪದ್ಧತಿಯ ಹತ್ತಾರು ಬೆಳೆಗಳನ್ನು ತನ್ನ ಒಡಲಲ್ಲಿಟ್ಟುಕೊಂಡು ಪೋಷಿಸುವ ಕೃಷಿ ವೈವಿಧ್ಯದ ಜೀವನಾಡಿ. ಅತ್ಯಧಿಕ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಸಿರಿಧಾನ್ಯಗಳಲ್ಲಿ ನಾರು ಹೆಚ್ಚಾಗಿದ್ದು ಗ್ಲೂಟೆನ್ ಮುಕ್ತವಾಗಿದೆ.

ಆದಕಾರಣ ಇದರಲ್ಲಿರುವ ಸತ್ವವು ಜೀರ್ಣಾಂಗವ್ಯೂಹದಲ್ಲಿ ಚೆನ್ನಾಗಿ ಹೀರಲ್ಪಡುತ್ತವೆ. ಅವು ಕ್ಯಾಲ್ಸಿಯಂ, ಕಬ್ಬಿಣ, ರಂಜಕ, ಮುಂತಾದವುಗಳನ್ನು ಹೊಂದಿದ್ದು, ಸೂಕ್ಷ್ಮ ಪೋಷಕಾಂಶಗಳ ಖಣಜವಾಗಿದೆ. ಈ ಧಾನ್ಯಗಳು ನಿಧಾನವಾಗಿ ಜೀರ್ಣವಾಗುವ ಕಾರಣ ಊಟದ ನಂತರ  ರಕ್ತದಲ್ಲಿನ ಸಕ್ಕರೆಯ ಪ್ರಮಾಣದ ಶೀಘ್ರ ಏರಿಕೆಯನ್ನು ತಡೆಗಟ್ಟುತ್ತದೆ. ಹಾಗಾಗಿಯೇ ಮಧುಮೇಹಿಗಳಿಗೆ ಇದೊಂದು ವರವಾಗಬಹುದು.

ಮತ್ತಷ್ಟು ಉಪಯೋಗಗಳು ಇಂತಿವೆ:

  • ದೇಹವನ್ನು ನಿರ್ವಿಷಗೊಳಿಸುವಲ್ಲಿ ಲಾಭದಾಯಕ
  • ಕೆಟ್ಟ ಕೊಲೆಸ್ಟರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ
  • ಸ್ತನ ಕ್ಯಾನ್ಸರ್ನ ಆಕ್ರಮಣವನ್ನು ತಡೆಯುತ್ತದೆ
  • ರಕ್ತದೊತ್ತಡ ಮತ್ತು ಮಧುಮೇಹವನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿ
  • ಹೃದಯ ಸಂಬಂಧೀ ಕಾಯಿಲೆಗಳನ್ನು ಸಶಕ್ತವಾಗಿ ತಡೆಗಟ್ಟಬಲ್ಲದು
  • ಮೂತ್ರಪಿಂಡ, ಪಿತ್ತಜನಕಾಂಗ ಮತ್ತು ರೋಗನಿರೋಧಕ ವ್ಯವಸ್ಥೆಯ ಆರೋಗ್ಯವನ್ನು ಉತ್ತಮಗೊಳಿಸುವಲ್ಲಿ ಸಹಾಯ ಮಾಡುತ್ತದೆ.
  • ಜಠರದ ಹುಣ್ಣುಗಳು ಅಥವಾ ದೊಡ್ಡ ಕರುಳಿನ ಕ್ಯಾನ್ಸರ್ ನಂತಹ ಜಠರಗರುಳಿನ ಅಪಾಯದ ಪರಿಸ್ಥಿತಿಗಳನ್ನು ಕಡಿಮೆಗೊಳಿಸುತ್ತದ.
  • ಮಲಬದ್ಧತೆ ಮತ್ತು ಹೊಟ್ಟೆ ಉಬ್ಬರದಂತಹ ಸಮಸ್ಯೆಯನ್ನು ನಿವಾರಿಸುತ್ತದೆ.
  • ತೂಕ ಕಡಿಮೆ ಮಾಡಿಕೊಳ್ಳಲು ಸಹಾಯಕ

 

ಏನೇನು ಮಾಡಬಹುದು?

ಅಕ್ಕಿಯನ್ನು ಉಪಯೋಗಿಸಿ ಅನ್ನ ಮಾಡಿದಂತೆ ಸಿರಿಧಾನ್ಯಗಳಲ್ಲೂ ಮಾಡಬಹುದು. ಇದಲ್ಲದೆ ದೋಸೆ ಇಡ್ಲಿ ಉಪ್ಪಿಟ್ಟು ಪೊಂಗಲ್ ಮತ್ತು ಪುಲಾವ್ ನಂತಹ ರುಚಿರುಚಿಯಾದ ತಿನಿಸುಗಳನ್ನು ತಯಾರಿಸಬಹುದು. ಲಡ್ಡು ಐಸ್ಕ್ರೀಮ್ ಜಾಮೂನ್ ರೀತಿಯಲ್ಲೂ ಸೇವಿಸಬಹುದು ಇದಷ್ಟೇ ಅಲ್ಲದೆ ಬೇಕ್ ಮಾಡಿಯೂ ಪದಾರ್ಥಗಳನ್ನು ತಯಾರಿಸಬಹುದು.

ಒಟ್ಟಿನಲ್ಲಿ “ಕುಟ್ಟುವ ಕಷ್ಟ ಏಕೆ? ಕಾಳುಗಳೆ ಸಾಕು! ಎಂಬಂತೆ ಇಡೀ ಕಾಳುಗಳಲ್ಲಿ ನಾರಿನಾಂಶ ಹೆಚ್ಚಾಗಿದ್ದು ಸಿರಿಧಾನ್ಯಗಳ ಪೋಷಣೆಯಿಂದಾಗುವ ಆರೋಗ್ಯ ಲಾಭಗಳು ಅಧಿಕ. ಇಂತಹ ಸಿರಿಧಾನ್ಯಗಳ ಬೆಳೆ ಮತ್ತು ಬಳಕೆಗಳ ಉತ್ತೇಜನಕ್ಕಾಗಿ ಭಾರತ ಸರ್ಕಾರವು 2018ನೇ  ವರ್ಷವನ್ನು “ರಾಷ್ಟ್ರೀಯ ಸಿರಿಧಾನ್ಯಗಳ ವರ್ಷ” ಮತ್ತು ಸಿರಿಧಾನ್ಯಗಳನ್ನು “ಪೌಷ್ಠಿಕ ಧಾನ್ಯ” ಎಂದು ಘೋಷಿಸಿದೆ ಇದರ ಪ್ರಯುಕ್ತ ರಾಷ್ಟ್ರಾದ್ಯಂತ ಸಿರಿಧಾನ್ಯ ಮೇಳಗಳು, ಪ್ರದರ್ಶನಗಳು ನಡೆಯುತ್ತಿವೆ.


Written By : Chaitra R Rao|Nutritionist

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: