ಮಹಿಳೆ ಮತ್ತು ಆರೋಗ್ಯ -5

ಗೌಟ್( Gout) -ಸಂಧಿವಾತ

ಗೌಟ್ ಸಾಮಾನ್ಯವಾದ ಮತ್ತು ಸಂಕೀರ್ಣವಾದ, ಉರಿಯೂತದ ಸಂಧಿವಾತದ ಒಂದು ರೂಪವಾಗಿದೆ. ಗೌಟ್ ವ್ಯಾಧಿಯು ನಮ್ಮ ದೇಹದಲ್ಲಿ ನಡೆಯುವ ಯೂರಿಕ್ ಆಮ್ಲದ ಪ್ರಕ್ರಿಯೆ ಸರಿಯಾಗಿ ಇಲ್ಲದಿರುವ ಕಾರಣದಿಂದ ಉಂಟಾಗುತ್ತದೆ.  ರಕ್ತದಲ್ಲಿ ಯೂರಿಕ್ ಆಮ್ಲದ ಪ್ರಮಾಣ ಹೆಚ್ಚಾಗಿದ್ದಲ್ಲಿ, ಅವು ಕೀಲುಗಳಲ್ಲಿ ಸಂಗ್ರಹವಾಗುತ್ತದೆ. ಹೀಗೆ ಶೇಖರಣೆಯಾದ ಯೂರಿಕ್ ಆಮ್ಲವು ಹರಳಿನ ರೂಪದಲ್ಲಿ ಕೀಲುಗಳಲ್ಲಿ ಮತ್ತು ಕೀಲುಗಳ ಸುತ್ತಲೂ ಇರುವ ಕೋಶಗಳಲ್ಲಿ ಸೇರಿಕೊಂಡು ಕೀಲುಗಳು ಉಬ್ಬಿಕೊಂಡು ಕದಲಿಸಲು ಕಷ್ಟವಾಗುತ್ತದೆ ಮತ್ತು ಇದರಿಂದ ಕೀಲುಗಳಲ್ಲಿ ಹಠಾತ್ ಮತ್ತು ತೀವ್ರವಾದ ನೋವು ಕಾಣಿಸಿಕೊಳ್ಳುತ್ತದೆ.

ಬದಲಾದ ಜೀವನಶೈಲಿ, ಆಹಾರ ಅಭ್ಯಾಸಗಳಿಂದ ಈ ಸಮಸ್ಯೆ ದಿನೇ ದಿನೆ ಹೆಚ್ಚಾಗುತ್ತಿದ್ದು, ಸ್ತ್ರೀಯರಲ್ಲಿ ಪುರುಷರಿಗಿಂತ ಮೂರು ಪಟ್ಟು ಅಧಿಕವಾಗಿ ಕಾಣಿಸುತ್ತದೆ. 30 ವರ್ಷದ ನಂತರ ಪುರುಷರಲ್ಲಿ ಮತ್ತು ಮುಟ್ಟು ನಿಂತ ಸ್ತ್ರೀಯರಲ್ಲಿ ಈ ಸಮಸ್ಯೆ ಹೆಚ್ಚು.

ಪ್ರಮುಖ ಅಪಾಯಕಾರಿ ಅಂಶಗಳು:

ಸಾಧಾರಣವಾಗಿ ರಕ್ತದಲ್ಲಿ ಯೂರಿಕ್ ಆಮ್ಲವು ಕಿಡ್ನಿಯಿಂದ ಮೂತ್ರದ ಮೂಲಕ ವಿಸರ್ಜನೆಯಾಗುತ್ತದೆ. ಒಂದು ವೇಳೆ ದೇಹದಲ್ಲಿ ಯೂರಿಕ್ ಆಮ್ಲ ಉತ್ಪತ್ತಿಯಾಗುವುದು ಅಧಿಕವಾದಾಗ ಅಥವಾ ಮೂತ್ರದ ಮೂಲಕ ಸರಿಯಾಗಿ ವಿಸರ್ಜನೆ ಆಗದೇ ಇದ್ದಾಗ ರಕ್ತದಲ್ಲಿ ಯೂರಿಕ್ ಆಮ್ಲ ಹಾಗೆಯೇ ಉಳಿದುಕೊಂಡು ಗೌಟ್ ಉಂಟಾಗುತ್ತದೆ.

 • ಪ್ಯೂರಿನ್ ಅಂಶ ಹೆಚ್ಚಾಗಿರುವಂತಹ ಆಹಾರದ ಸೇವನೆ  (ಮಾಂಸ, ಮೊಟ್ಟೆ, ಮೀನು)
 • ಅತಿಯಾದ ಮದ್ಯ ಸೇವನೆ
 • ಫ್ರಕ್ಟೋಸ್ ಹೆಚ್ಚಿರುವಂತಹ ಸಕ್ಕರೆ ಪಾನೀಯಗಳು.
 • ಆಸ್ಪಿರಿನ್, ಡೈಯುರೆಟಿಕ್ಸ್ ಗಳಂತಹ ಔಷಧಿಗಳ ಸೇವನೆ
 • ಬೊಜ್ಜು
 • ಅಧಿಕ ರಕ್ತದೊತ್ತಡ, ಮಧುಮೇಹ, ಅಧಿಕ ಕೊಲೆಸ್ಟರೋಲ್
 • ಅನುವಂಶಿಕತೆ
 • ಅತಿಯಾದ ಸೀಸ ಬಳಕೆ
 • ಕಿಡ್ನಿಗೆ ಸಂಬಂಧಪಟ್ಟ ಕೆಲವು ಕಾಯಿಲೆಗಳಿಂದ ಯೂರಿಕ್ ಆಮ್ಲದ ವಿಸರ್ಜನೆ ಪ್ರಕ್ರಿಯೆಯಲ್ಲಿ ಲೋಪ ಉಂಟಾದಾಗ ಗೌಟ್ ಬರುವ ಸಾಧ್ಯತೆ ಇರುತ್ತದೆ.

ರೋಗಲಕ್ಷಣಗಳು:

 • ಕಾಲಿನ ಹೆಬ್ಬೆರಳಿನಲ್ಲಿಯೇ ಮೊದಲು ಕಾಣಿಸಿಕೊಳ್ಳುವುದು. ಗೌಟ್ ವ್ಯಾಧಿ ಬೇರೆ ಬೇರೆ ಕೀಲುಗಳಿಗೆ ಹರಡುವುದು, ಪಾದಗಳು, ಪಾದದ ಕೀಲುಗಳು, ಮೊಣಕಾಲು, ಮೊಣಕೈಗಳು, ಬೆರಳುಗಳು ಮತ್ತು ಮಣಿಗಂಟುಗಳಲ್ಲಿ ಕೂಡ ಕಾಣಬಹುದು.
 • ಕೆಲವು ಬಾರಿ ಗೌಟ್‌ನಿಂದಾಗಿ ಚಿಕ್ಕ ಗಂಟುಗಳು ಕೈಗಳಲ್ಲಿ, ಮೊಣಕೈ ಹತ್ತಿರ, ಕಿವಿಗಳ ಹತ್ತಿರ ಕಾಣಿಸಿಕೊಳ್ಳುತ್ತದೆ.
 • ರಾತ್ರಿಯ ವೇಳೆ ಅಥವಾ ಮುಂಜಾನೆಯ ಸಮಯದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಚರ್ಮ ಎಷ್ಟು ಸೂಕ್ಷ್ಮವಾಗಿರುತ್ತದೆ ಎಂದರೆ ತೆಳುವಾದ ಬಟ್ಟೆ ತಗುಲಿದಲ್ಲೂ ತಡೆಯಲು ಆಗದಂತಹ ನೋವು ಉಂಟಾಗುತ್ತದೆ.
 • ಬಾಧಿತ ಕೀಲುಗಳಲ್ಲಿ ಮತ್ತು ಅದರ ಸುತ್ತ ವಿಪರೀತ ನೋವು
 • ಬಾಧಿತ ಕೀಲುಗಳಲ್ಲಿ ವಿಪರೀತ ನೋವು, ಊತ, ಉರಿ, ಬಿಸಿಯಾಗುವುದು ಮತ್ತು ಚರ್ಮ ಕೆಂಪಗಾಗುವುದು
 • ಬಾಧಿತ ಕೀಲುಗಳಲ್ಲಿ ತುರಿಕೆ, ಚರ್ಮ ಸುಲಿಯುವುದು ಮತ್ತು ಪದರದಂತೆ ಚರ್ಮ ಕಾಣುವುದು
 • ಕೀಲುಗಳ ದ್ರವದಲ್ಲಿ ಯೂರಿಕ್ ಆಸಿಡ್ ಹರಳುಗಳು ಪತ್ತೆಯಾಗುವುದು.

 

ಗೌಟ್: ಚಿಕಿತ್ಸೆ, ಪೋಷಣೆ:

ತೆಗೆದುಕೊಳ್ಳಬೇಕಾದ ಆಹಾರ

 • ಚೆರ್ರಿ ಹಣ್ಣುಗಳು ಆಂಥೋಸಯಾನಿಡ್ ಹೊಂದಿದ್ದು, ಇದು ಯೂರಿಕ್ ಆಸಿಡ್ ಮಟ್ಟವನ್ನು ಕಡಿಮೆಮಾಡವಲ್ಲಿ ಸಹಕಾರಿ. ಪ್ರತಿ ದಿನ ಒಂದು ಕಪ್ ತಾಜಾ ಅಥವಾ ಪೂರ್ವಸಿದ್ಧ ಚೆರ್ರಿಗಳನ್ನು ಸೇವಿಸಿ. ಸ್ಟ್ರಾಬೆರಿಗಳು ಮತ್ತು ನೀಲಿಬೆರಿಹಣ್ಣುಗಳು ಸಹ ಒಳ್ಳೆಯದು
 • ಆಪಲ್ ಸೈಡರ್ ವಿನೆಗರ್, ನಿಂಬೆ ರಸ, ಅರಿಶಿನ, ಶುಂಠಿ, ಬಾಳೆಹಣ್ಣು, ಅನಾನಸ್, ಬೆರ್ರಿಗಳು, ಪಾರ್ಸ್ಲಿ, ಮತ್ತು ಸೆಲರಿ ಬೀಜಗಳು ಗೌಟ್ ವಿರೋಧಿ ಅಂಶಗಳನ್ನು ಒದಗಿಸುತ್ತದೆ.
 • ಡೈರಿ ಉತ್ಪನ್ನಗಳು, ಬಾಳೆಹಣ್ಣು ಅಥವಾ ಕಿತ್ತಳೆ ರಸವನ್ನು ಒಳಗೊಂಡಂತೆ ಪೊಟ್ಯಾಶಿಯಂ ಹೆಚ್ಚಿರುವ ಆಹಾರಗಳನ್ನು ಸೇವಿಸಿ.
 • ಪ್ಯೂರಿನ್-ಸಮೃದ್ಧ ತರಕಾರಿಗಳಾದ ಪಾಲಕ್ ಸೊಪ್ಪು, ಹೂಕೋಸು, ಅಣಬೆ, ದ್ವಿದಳ ಧಾನ್ಯಗಳನ್ನು ಮಿತವಾಗಿ ಬಳಸಿ.
 • ಡೈರಿ ಉತ್ಪನ್ನಗಳು, ವಿಶೇಷವಾಗಿ ಕಡಿಮೆ-ಕೊಬ್ಬು ಉತ್ಪನ್ನಗಳು (ಕಡಿಮೆ-ಕೊಬ್ಬಿನ ಮೊಸರು ಮತ್ತು ಕೆನೆರಹಿತ ಹಾಲು), ಗೌಟ್ ಬರುವುದನ್ನು ತಡೆಗಟ್ಟಬಹುದು. .
 • ಸಂಪೂರ್ಣ ಧಾನ್ಯಗಳು, ಕಂದು ಅಕ್ಕಿ, ಓಟ್ಸ್, ಮತ್ತು ಕಾಳುಗಳು ಮುಂತಾದ ಸಂಕೀರ್ಣ ಕಾರ್ಬೋಹೈಡ್ರೇಟ್ ಗಳನ್ನು ಹೊಂದಿರುವ ಆಹಾರಗಳನ್ನು ತೆಗೆದುಕೊಳ್ಳಬಹುದು

ತ್ಯಜಿಸಬೇಕಾದ ಆಹಾರ

 • ಮಾಂಸಾಹಾರ ಹಾಗೂ ಮಾಂಸದಿಂದ ಮಾಡಿದ ಖಾದ್ಯಗಳಾದಂತಹ ಸಾರು ಅಥವಾ ಸೂಪ್ ಅನ್ನು ಸಂಪೂರ್ಣ ತ್ಯಜಿಸುವುದು ಉತ್ತಮ.
 • ಸಮುದ್ರ ಮೂಲದ ಆಹಾರಗಳು ಮತ್ತು ಈಸ್ಟ್ ನಿಂದ ತಯಾರಿಸಿದ ಬೇಕರಿ ಪದಾರ್ಥಗಳು.
 • ಮದ್ಯಪಾನ.
 • ಕೆಫೀನ್ ಪದಾರ್ಥಗಳನ್ನು ಸೇವಿಸದಿರಿ
 • ಅತಿಯಾದ ಸಕ್ಕರೆಯ ಉಪಯೋಗ.
 • ಸಂಸ್ಕರಿಸಿದ ಮತ್ತು ಕರಿದ ಎಣ್ಣೆ ಪದಾರ್ಥಗಳು .

 


Written By : Chaitra R Rao|Nutritionist

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: