ಮಳೆಯೆಂಬವಳಿಗೆ.

ನಿನಗೆ ಬಾಲ್ಯದ ನೆನಪು; ಮೋಡದುಯ್ಯಾಲೆಯಲಿ
ತೂಗುತಲಿ ಬಾಗುತಲಿ ಆಡುತಿರುವೆ;
ಮುತ್ತಿನಲಿ ಸಿಂಗರಿಸಿ ಇಟ್ಟ ತೊಟ್ಟಿಲಿನಿಂದ
ಒಡೆದು ಹನಿಗಳ ತೆರನೆ ಚಿಮ್ಮುತಿರುವೆ.
 
ಸಂಜೆಯಲಿ ತಂಗಾಳಿ ಹೀಗೆ ಹನಿಗಳ ಸವರಿ
ಎದೆಗೆ ಮುಟ್ಟಿಸಬಹುದೆ, ಹೇಳು ನಲ್ಲೆ;
ಒಂದಿಷ್ಟು ತಡೆದುಕೋ ಬಿರುಸಾಗಿ ಬರಲಿ ಮಳೆ
ನದಿಯ ಸೇರುವ ವರೆಗೆ ಕಾಯಬಲ್ಲೆ.
 
ಹಸಿನೆಲದ ಮೇಲಿಷ್ಟು ನಡೆದಾಡಿ ಪುಲಕದಲಿ
ಮನದ ಕೆಸರನು ಇಳೆಗೆ ದೂಡುವಾಸೆ;
ಮೇಲುನೋಟಕನಾಗಿ ಮಳೆಗೆ ಕಣ್ಣೀರಿಡಲು
ಇಳಿಯದಂತೆಯೆ ತಡೆವ ಮೊಗದ ಮೀಸೆ!
 
ಅದೆಷ್ಟೊ ಸೊರಗಿರುವ ತರುಲತೆಯ ಮೈದಡವಿ
ಮತ್ತೆ ಚಿಗುರಿಸುವಂತೆ ಮಾಡುವವಳೆ;
ತಬ್ಬಿಕೊಳ್ಳಲು ಬೇಡ, ತೊಳೆದುಬಿಡು ಪೂರ್ಣದಲಿ
ಸವಿದುಬಿಡು ನನ್ನನ್ನು ಮೋಹದಮ(ವ)ಳೆ.
water dew photography
Photo by Achilles Kastanas on Pexels.com

By : Ishwara Bhat K

Advertisements

2 Comments on “ಮಳೆಯೆಂಬವಳಿಗೆ.

  1. ಸುಂದರ ಭಾವಗೀತ… ಈಶ್ವರ ಭಟ್.
    ಗೆಳೆಯ ಶಶಿಕಿರಣ ಆನೆಕಾರ ಈ ಗೀತಕ್ಕೆ ಉದಯರವಿಚಂದ್ರಿಕೆ (ಶುದ್ಧಧನ್ಯಾಸಿ) ರಾಗವನ್ನಾಧರಿಸಿ ಸ್ವರಸಂಯೋಜನೆ ಮಾಡಿ ಹಾಡಿರುವುದನ್ನೂ ನಿನ್ನೆ ಕೇಳಿದೆ.

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: