ತಾಯಿಯ ಹಾಲು ಮತ್ತು ಶೈಶಾವಸ್ಥೆ
ಪ್ರತೀ ವರ್ಷವೂ, ಸೆಪ್ಟೆಂಬರ್ ತಿಂಗಳನ್ನು ವಿಶ್ವ ಪೌಷ್ಠಿಕ ತಿಂಗಳನ್ನಾಗಿ ಆಚರಿಸುತ್ತಾರೆ. ಈ ವರ್ಷವೂ ಸಹ ಎಂದಿನಂತೆ, “Go Further with Food” ಎಂಬ ಧ್ಯೆಯವನ್ನಿಟ್ಟುಕೊಂಡು ಅದರಲ್ಲೂ ಮುಖ್ಯವಾಗಿ ಶೈಶಾವಸ್ಥೆಯಲ್ಲಿ (ಹುಟ್ಟಿದ ಸಾವಿರ ದಿನಗಳ ಒಳಗಿನ ಮಕ್ಕಳಲ್ಲಿ) ಕಂಡು ಬರುವ ಅ ಪೌಷ್ಟಿಕತೆಯನ್ನು ನೀಗಿಸುವ ಉದ್ದೇಶದೊಂದಿಗೆ ವಿಶ್ವ ಪೌಷ್ಟಿಕ ಮಾಸಾಚರಣೆ ನಡೆಸಲಾಯಿತು.
ಶೈಶಾವಸ್ಥೆಯಲ್ಲಿ ಮಕ್ಕಳ ಬೆಳವಣಿಗೆ ಅತೀ ಶೀಘ್ರವಾಗಿ ಮುಂದುವರೆಯುತ್ತದೆ. ಆರೊಗ್ಯವಂತ ಶಿಶುವಿಗೆ ೬ ತಿಂಗಳುಗಳು ತುಂಬುವುದರಲ್ಲಿ ಅದರ ಹುಟ್ಟಿನ ತೂಕವು ಸರಾಸರಿ ಎರಡು ಪಟ್ಟು ಹೆಚ್ಚಾಗುವುದು ಮತ್ತು ಒಂದು ವರ್ಷದಲ್ಲಿ ಮೂರರಷ್ಟು ಹೆಚ್ಚಾಗುವುದು. ಉದ್ದದಲ್ಲಿಯೂ ಹೆಚ್ಚಾಗುವುದರಿಂದ ದೇಹದಲ್ಲಿಯ ಪ್ರಮಾಣವೂ ಸಹ ಬದಲಾಗುತ್ತದೆ.
ಶೈಶವ್ಯದ ಮೊದಲ ಹಂತದಲ್ಲಿ, ತಾಯಿಯ ಹಾಲು ಎಲ್ಲಾ ಬೇಡಿಕೆಯನ್ನು ಪೂರೈಸುತ್ತದೆ. ಮತ್ತು ಶಿಫಾರಸ್ಸು ಮಾಡಿದ ಆಹಾರಾಂಶಗಳು ಹಾಲಿನಲ್ಲಿರತಕ್ಕ ಸಂಯುಕ್ತ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ.
ಮಗು ಹುಟ್ಟಿದ ಆರು ತಿಂಗಳುಗಳ ಕಾಲ ಕಡ್ಡಾಯವಾಗಿ ಸ್ತನ್ಯಪಾನ ಮಾಡಿಸಬೇಕು. ಇದನ್ನು “Exclusive breast Feeding” ಎಂದು ಕರೆಯುತ್ತಾರೆ. ತಾಯಿಯ ಎದೆ ಹಾಲು ಮಗುವಿಗೆ ಉತ್ತಮವಾದ ಪರಿಪೂರ್ಣ ಆಹಾರ. ಮಗು ಜನಿಸಿದ ಅರ್ಧಗಂಟೆಯ ಒಳಗೆ ಎದೆ ಹಾಲು ನೀಡಬೆಕು. ಸಿಸೇರಿಯನ್ ಹೆರಿಗೆಯ ಸಂದರ್ಭಗಳಲ್ಲಿ ೪ ಗಂಟೆಗಳ ಒಳಗಾಗಿ ಎದೆ ಹಾಲು ಉಣಿಸಬೇಕು. ನವಜಾತ ಶಿಶುವಿಗೆ ಎದೆ ಹಾಲನ್ನಲ್ಲದೆ ಇನ್ನಾವುದೇ ಆಹಾರ- ಜೇನುತುಪ್ಪ, ಸಕ್ಕರೆ ನೀರು ಇತ್ಯಾದಿಗಳನ್ನು ನೀಡಬಾರದು (ಕೆಲವು ಕಠಿಣ ಸಂದರ್ಭಗಳನ್ನು ಹೊರತುಪಡಿಸಿ). ಇದರಿಂದ ಮಗುವಿನ ಆರೋಗ್ಯವನ್ನಷ್ಟೆ ಅಲ್ಲದೇ ತಾಯಿಯ ಆರೋಗ್ಯವನ್ನು ಕಾಪಿಟ್ಟುಕೊಳ್ಳಬಹುದು. ಹೆರಿಗೆಯಾದ ನಂತರ ಅಥವಾ ಎರಡು ಮೂರು ದಿನಗಳಲ್ಲಿ ಸ್ರವಿಸುವ ಗಿಣ್ಣು ಅಥವಾ ಕೊಲೆಸ್ಟ್ರಮ್ ಎಂದು ಕರೆಯಲ್ಪಡುವ ಹಳದಿ ಬಣ್ಣದ ಹಾಲು ಮಗುವಿನ ಪೂರ್ಣಾಯುಷ್ಯದ ಆರೊಗ್ಯಕ್ಕೆ ಬಹಳ ಸಹಾಯಕಾರಿ. ಕೆಲವರು ಹಾಲು ಹಳದಿ ಬಣ್ಣ ಇರುವುದರಿಂದ ಮಗುವಿಗೆ ಕಾಮಾಲೆ ಖಾಯಿಲೆ ಬರಬಹುದೆಂದು ಇದನ್ನು ಕುಡಿಸದೇ ಚೆಲ್ಲುತ್ತಾರೆ. ಹೀಗೆ ಚೆಲ್ಲದೆ ಇದನ್ನು ಮಗುವಿಗೆ ನೀಡಿದಲ್ಲಿ ಪಕ್ವವಾದ ಸಸಾರಜನಕ ಮತ್ತು ಇತರ ಗುಣಗಳಿಂದ ಮಗುವಿನಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು.
ಸ್ತನ್ಯಪಾನದ ಪ್ರಮುಖ ಅನುಕೂಲತೆಗಳು:
ಸ್ತನ್ಯಪಾನವು ಶಿಶುವಿಗೆ ಹೆಚ್ಚು ಉಪಯುಕ್ತ ಅಲ್ಲದೆ ತಾಯಿಗೂ ಸಹ ಸಹಾಯಕಾರಿ. ಇದರ ಅನುಕೂಲತೆಗಳು ಈ ಕೆಳಗಿನಂತಿವೆ.
ಹುಟ್ತಿದ ಆರು ತಿಂಗಳುಗಳು ಕಡ್ಡಾಯವಾಗಿ ಸ್ತನ್ಯಪಾನ ಮಾಡಿಸಬೇಕು. ಆರು ತಿಂಗಳ ನಂತರ ಸ್ತನ್ಯಪಾನದ ಜೊತೆಗೆ ಮಕ್ಕಳಿಗೆ ಪೂರಕ ಆಹಾರಗಳನ್ನು ಕೊಡಬೇಕು. ಹಾಲಿರುವ ತನಕ ಅಥವಾ ಎರಡು ವರ್ಷಗಳ ಕಾಲ ಮಕ್ಕಳಿಗೆ ಸ್ತನ್ಯಪಾನ ಮಾಡಿಸಬಹುದು.
ಎದೆಹಾಲನ್ನು ವೃದ್ಧಿಗೊಳಿಸಲು ಬಳಸಬಹುದಾದ ಆಹಾರ ಪದಾರ್ಥಗಳು:
ಬೆಳ್ಳುಳ್ಳಿ,
ಮೆಂತ್ಯ(ಮೊಳಕೆ ಕಟ್ಟಿದ್ದು), ಜೀರಿಗೆ, ಸೋಂಪು, ಎಳ್ಳು
ಮೆಂತ್ಯೆ ಸೊಪ್ಪು, ಸಬ್ಬಸಿಗೆ ಸೊಪ್ಪು,
ಸೋರೆಕಾಯಿ
ಹಾಲು ಮತ್ತು ಹಾಲಿನ ಉತ್ಪನ್ನಗಳು,
ಬಾದಾಮಿ
ಶತಾವರಿ.
Written By : Chaitra R Rao|Nutritionist