ದೇಗುಲದ ಗಂಟೆ!

ದೇಗುಲದ ಬಾಗಿಲನು ದಾಟಿದರೆ ತೋರುವುದುಆಳೆತ್ತರಕೆ ನಿಂತ ಗಂಟೆಯೊಂದುತೋಳನ್ನು ಮೇಲೆತ್ತಿ ದೇವರನು ನೋಡುತಲಿಗಂಟೆ ಬಾರಿಸುವಾಸೆ ಜನರಿಗಿಂದು! ಹದಿನಾರು ಕಳೆದಿರುವ ತರುಣಿ ಸಾಲಿನೊಳಿಹಳುಫಲ ಪುಷ್ಪ ತಾಂಬೂಲ ಹಿಡಿದುಕೊಂಡುಕಡೆಗಣ್ಣ ನೋಟವು ಚಿಗುರು ಮೀಸೆಯೊಳಿರಲುಬಡಿಯೆ ಎಚ್ಚರವಾಯ್ತು ಗಂಟೆಯೊಂದು! ಹೊರಗಿರುವ ಗಿಡದಲ್ಲಿ ಬೀಳಲೆಣಿಸುವ ಹೂವುಸದ್ದಿನಲಿ ಬಿದ್ದಿತೇ ಸತ್ವವಡಗಿ?ಹಸಿದ ಹಾವಿನ ಬಾಯ್ಗೆ ಕೂಳಾಯ್ತು ಎನ್ನುವೆಡೆಇಲಿಯು ತಾನೋಡಿತದೋ ಗಂಟೆ ಮೊಳಗಿ! ಸಿಡುಕಿನಲಿ ಕೆಲಸದವ ಬಲೆಯ ತೆಗೆಯುತ ಬರಲುಕೋಲು ತಾಗಿದ ಕ್ಷಣಕೆ ಗಂಟೆ ಬಡಿದು;ದೇವನೆದ್ದಾನೇನೋ! ಎನುತ ನಮಿಸುವ ನಗುತಅರಿವಿಲ್ಲದೆಯೆ ಭಾವ, ಭಕ್ತಿ […]

Advertisements

ದೀಪಾವಳಿಯ ಶುಭಾಶಯಗಳು.

ಸಿಂಗರಿಸಿಕೊಂಡವಳು ಕುಂಕುಮವ ಧರಿಸಿ ದೀಪ ಬೆಳಗುವುದಕೆಂದು ಮುಂಗುರುಳ ಸರಿಸಿ ಬತ್ತಿಯೊಳಗಿದ್ದ ಕರಿ ಹಣೆಯ ಮೇಲಾಯ್ತೆನಲು ನನ್ನವಳ ನಗುವಲ್ಲಿ ದೀಪಾವಳಿ! ದೀಪವನು ಕೊಂಡೊಯ್ದು ಹೂಬಾಣ ಹಚ್ಚಿ ಸಿಡಿವ ಭಯದಲಿ ಓಡಿ ಮರೆತು ಕಿವಿ ಮುಚ್ಚಿ ಹಿಂದಿರುಗಿ ಕಡೆಗಣ್ಣ ನೋಟದಲಿ ನೋಡುತಿರೆ ಸಣ್ಣವಳ ಮೊಗದಲ್ಲಿ ದೀಪಾವಳಿ! – ದೀಪಾವಳಿಯ ಶುಭಾಶಯಗಳು.

ಭರವಸೆ

ಕೊಳೆವದಂತೂ ಇಹುದು ನಾಳೆಯೊಳು, ಎಂದಿಗೋ ಕೊರಗುವುದು ಏನಕ್ಕೆ ಮುಂದಿನದಕೆ! ಹೊಳೆವುದಿಂದಿನ ದಿನಕೆ ಬಣ್ಣದಲಿ ಬಿಂಕದಲಿ ನಲಿವಿನಿಂದಿಹುದಲ್ತೆ ದಿನದ ಹರಕೆ