ಮಾತು-ಮೌನ

ಹೂವು ಹೇಳುವ ಮಾತು ಕಿವಿಗೆಂದೂ ಕೇಳಿಸದು ಕಿವಿಗೆ ಕೇಳುವುದೆಲ್ಲ ಮಾನವನದು; ಮಾನವನ ಮಾತುಗಳ ಆಲಿಸಿದೆ ಮಲ್ಲಿಗೆಯು ಈಗೀಗ ಮಾತುಗಳ ಕಲಿಯುತಿಹುದು. ಹೀಗೆನಲು ಮಲ್ಲಿಗೆಯ ಮುಡಿದವಳು ಕೇಳಿದಳು ಮೌನ ಮಲ್ಲೆಯ ಮಾತು ಕೇಳ್ದೆನೆಂದು; ಮಲ್ಲಿಗೆಯ ಮುಡಿಸಿದವ ಮಾತು ಬಿಟ್ಟಾನೆಂದು ಮಲ್ಲಿಗೆಯು ನೆಪವಾಯ್ತು ಅವಳಿಗಿಂದು.