Life..

“The more we are at ease with our inner world the more at ease we will be in the outside world with all its imperfections” Advertisements

Advertisements

ಅತ್ತಕಡೆಯಿಂದ ಬರುವಾಗ ಇನ್ನೊಮ್ಮೆ

ಅತ್ತಕಡೆಯಿಂದ ಬರುವಾಗ ಇನ್ನೊಮ್ಮೆ ಇಣುಕಿ ನೋಡದೆ ಹೋಗಳೆನ್ನ ಚೆಲುವೆ ಸುತ್ತಮುತ್ತಲು ಯಾರೂ ಇರದಂತ ವೇಳೆಯಲಿ ಕೆಣಕು ಮಾತಲಿ ನನ್ನ ಕರೆಯದಿಹಳೆ? ಬಾಗಿಲಿನ ಬಳಿಯಲ್ಲಿ ನಿಂದು ಬಳಿ ಕರೆದಂತೆ ಬಳೆಯ ದನಿಯನು ಮಾಡಿ ಓಡುತಿಹಳೇ ಅಲ್ಲೆಲ್ಲೋ ಕಾಣಿಸುತ, ಇನ್ನೆಲ್ಲೋ ಮಾಯದಲಿ ಬಳಿಗೆ ಬಂದರೆ ಮೂಕ, ಮತ್ತೆ ಅವಳೇ! ಹಬ್ಬದಲಿ ಜಾತ್ರೆಯಲಿ ಪೇಟೆಯಲಿ ಬೀದಿಯಲಿ ಅವಳ ಹೆಜ್ಜೆಯ ಹುಡುಕಿ ನಡೆವೆ ಎಂದು ಅವಳೋ ಬಲುಜಾಣೆ, ನನಗಿಂತ ಬಲುಚುರುಕು ಗುರುತುಗಳನಿಟ್ಟಿಹಳು, ನಾ ಬರುವೆನೆಂದು!

ರೆಂಜೆ ಹೂವು.

ಇತ್ತೀಚೆಗೆ ಒಮ್ಮೆ ಯಾವುದೋ ಉದ್ಯಾನದಲ್ಲಿ ನಡೆಯುವಾಗ ಒಂದು ವಿಲಕ್ಷಣವಾದ ಘಮಲು ಮೂಗಿಗೆ ಬಡಿಯಿತು. ಬಹಳವಾಗಿ ಪರಿಚಯವಿರುವ ಆದರೆ ಹೆಸರನ್ನು ಮರೆತಂತಿರುವ ಹಳೇ ಮಿತ್ರರನ್ನು ನೋಡಿದಂತಹಾ ಭಾವ. ಬೇರೇನೂ ತಲೆಯೊಳಗೆ ಹೋಗಲಿಲ್ಲ, ನೇರ ಗಂಧವನ್ನು ಹಿಡಿದುಕೊಂಡು ಅನ್ವೇಷಣೆಗೆ ಹೊರಟೆ. ಪಾರಿಜಾತದ ಹೂವು ಅಸಲಿಗೆ ಹೂವೇ ಅಲ್ಲ. ಇಡೀ ಗಂಧವನ್ನೇ ಮುದ್ದೆಗಟ್ಟಿ ಎಸಳುಗಳಂತೆ ಮಾಡಿದ್ದು ಅದು. ಬೇರೆ ಇದ್ಯಾವುದೋ ಹೂವು ನಾನು ಹುಡುಕಿದ ಈ ಪರಿಮಳವಲ್ಲ. ಇದ್ಯಾವುದೋ ಮರ, ಈ ಸೊಗಸಲ್ಲ. ನಡೆವಷ್ಟು […]