ನಿನ್ನ ಇರುವಿಕೆಯೆನುವ ಸೊಗಸಾದ ಭಾವದಲಿ.

ನಿನ್ನ ಇರುವಿಕೆಯೆನುವ ಸೊಗಸಾದ ಭಾವದಲಿನಿನ್ನ ಮೇಲೊಂದಿಷ್ಟು ಮುನಿಸು ತೋರಿಅಲ್ಲಿಗೋ ಎಲ್ಲಿಗೋ ನೀನು ತೆರಳುವ ಸಮಯಮುನಿಸಿಗೂ ಹೂವಹುದು ಒಲವು ಹೀರಿ! ಒಮ್ಮೆ ಸಿಡಿಮಿಡಿಯಾಗಿ ಮತ್ತೊಮ್ಮೆ ಮಗುವಾಗಿಹಾಗೊಮ್ಮೆ ಹೀಗೊಮ್ಮೆ ಕಟುಮಾತು ಬೈದುನಾ ನಿನಗೆ ಹೇಳಿದೆನೋ ನನ್ನೊಳಗೆ ಒದರಿದೆನೊಎನುತ ಮಲಗಿತು ಮಾತು, ಮೌನ ಹೊದ್ದು.ನಮ್ಮಿಬ್ಬರಲಿ ಕೂಡ ಮಾತು ಸಾಯುವುದಿಲ್ಲಮೌನ ಬದುಕುವುದಿಲ್ಲ ದೀರ್ಘವಾಗಿ ಒಂದೆರಡು ಹನಿಕಟ್ಟಿ ಕಣ್ಣೀರು ಜಾರುವುದುಹನಿಮಳೆಗೆ ಅಣೆಕಟ್ಟು ಭಾರವೇನೇ?ಸೋಲುವುದು ಹಿತವಹುದು ಗೆಲ್ಲುವುದು ಸೋಲಲ್ತೆ?ನಾವು ಸೋಲುವುದಿಲ್ಲ ಜಗದ ಮುಂದೆ;ಗೆದ್ದರಾಯಿತು ಪ್ರೇಮ ನಮ್ಮಿಬ್ಬರೊಳಗಿಂತು ಹೂವರಳಿ ಬೆಳಗುವುದು […]

Advertisements

ಬಾಳದಾರಿ

ನಿನ್ನ ನಗುವಿನ ಹಿಂದೆ ನೋವುಗಳ ಸರಮಾಲೆ ಇದ್ದೀತು ಬೇಸರವು ನಲಿವು ನುಂಗಿ! ಬೇಸಿಗೆಯು ಉರಿಸೀತು; ಮಳೆಯೋ ಕೊಳೆಸೀತು ಕಾಯದಿರು ನೋಯದಿರು ಕಳೆದು ಭಂಗಿ. ಪುಣ್ಯಪುರುಷರು ಇಲ್ಲ ಪಾಪಿಗಳೂ ಇಲ್ಲಿಲ್ಲ ಸಿದ್ಧ ಔಷಧಿಯಿಲ್ಲ ನೋವುಜ್ವರಕೆ ಗಟ್ಟಿಯಾಗಲೆ ಬೇಕು ಬಿಸಿಲಿಗೂ ಮಳೆಗಳಿಗೂ ಬದುಕು ಹಸನಾಗುವುದು ತನ್ನತನಕೆ! ಇಂಥ ಬರಗಾಲದಲು ತನ್ನೊಡಲ ಚಿಗಿಯುತಿಹ ಮರದ ಬಳಿ ತೋರಿಕೊಳು ನಿನ್ನ ಗೋಳು! ಬರಿಯ ಜೀವರು ನಾವು, ನಮಗೆ ಸ್ವಾರ್ಥವೆ ಮುಖ್ಯ ಮಳೆಗಾಲಕ್ಕೊಂದೆ ಬೆಳೆ ಹೆಸರು ಕಾಳು. […]