ಬದುಕಿನ ತಿರುವು.

ನಡೆವ ದಾರಿಯ ಬದಿಗೆ ಇರುವಂತ ಕೊನೆಯ ಮನೆಕೊನೆಯೆಂದರೇನೆಂದು ಹೇಳಲಿಲ್ಲಕೊನೆಯೆನುವ ಮಾತಿನಲಿ ಒಂದಷ್ಟು ಮರುಗಿದೆನುದಾರಿ ನಡೆಯುವುದೆಂತು ತಿಳಿಯಲಿಲ್ಲ. ಇಲ್ಲೊಂದು ಹೊಸಹೂವು ಹುಟ್ಟಿಹುದು, ಕೊಯ್ಯಲೇಘಮವಿಹುದೆ ಮೂಸಲೇ? ಬಿಟ್ಟು ಬಿಡಲೆ?ನಿನ್ನೆ ಮೂಡಿದ ಬೀಜ ಇನ್ನೊಂದು ದಿನದಲ್ಲಿಮೊಳಕೆಯೊಡೆಯುವುದೆಂದು ಹೆಮ್ಮೆ ಪಡಲೆ? ದಾರಿಬದಿಯಲಿ ಹುಣಸೆ ಬೀಜ ಮರವಾಗಿಹುದುಮತ್ತೊಂದು ಕೊಂಬೆಯಲಿ ಬಂದಣಿಕೆಯುತೇಗಿ ತೇಲುವ ತೊಗಟೆ ನಾಳೆ ಮಣ್ಣಾಗುವುದುಎಂಬ ಕವಿಮಾತಿಗೆ ಪೊಳ್ಳುಕಿವಿಯು. ಬಂತು ಸವಾರಿಯಿದು, ಯಾರ ಹರಕೆಗೆ ಬಲಿಯುಎಂದೆಲ್ಲ ದನಿಗಳದೊ ಕೇಳುತಿಹುದುಮನೆಗೆ ಹೋಗಲೆ ನಾನು? ಬಾಗಿಲನು ಬಡಿಯಲೇಯಾರು ತೆಗೆಯುವರೆಂಬ ಶಂಕೆ […]

Advertisements