ಚಂದ್ರ_ಕಡಲು

ಹೌದು ನೀ ನನಗೆ ಎನಾಗಬೇಕು..ಇಬ್ಬರಲ್ಲು ಉತ್ತರವಿಲ್ಲ, ಈ ಪ್ರಶ್ನೆಯು ,ಪ್ರಶ್ನೆಯಾಗಿಯೇ ಉಳಿಯುತ್ತದೆ ಬದುಕಿನ ಕೊನೆಯವರೆಗೆ ಎನ್ನುವ ಆತಂಕ. ಕೆಲವೊಂದಕ್ಕೆ ಉತ್ತರಗಳೇ ಇಲ್ಲವೇನೋ ,ಇಲ್ಲ ತೀರ ಕೆದಕಬಾರದು ಬಿಡು.. ಹೌದು ನೀ ಸಿಕ್ಕ ಈ ಬದುಕು ಅದೆಷ್ಟು ಖುಷಿಯಾಗಿತ್ತು ನೋಡು, ನಿನ್ನ ನೆನೆದಾಗಲೆಲ್ಲ ತುಟಿ ಅಂಚಲಿ ಮಂದಹಾಸ ನನ್ನ ಅರಿವಿಗೆ ಬಾರದೆ ಮಿಂಚುತಿತ್ತು, ಕನಸುಗಳು ಬಿದ್ದರೆ ಅದು ನಿನ್ನದೇ ಆಗಿರುತಿತ್ತು, ಪ್ರತಿ ಮುಂಜಾವಿನಲ್ಲು ಪ್ರೀತಿಯಿಂದ ಕಿತ್ತ ಒಂದೊಂದೆ ಹೂ ದಾರಕ್ಕೆ ಬೆಸೆದು […]

Advertisements

ಒಂದೆರಡು ದಿನವಿದ್ದು ಹೋಗಬಾರದು ಏಕೆ ?

ಒಂದೆರಡು ದಿನವಿದ್ದು ಹೋಗಬಾರದು ಏಕೆ ಮೊನ್ನೆಯೋ ಮಳೆಗಾಲ;ಬಹಳ ನೀರು ಬೆಂಬಿಡದೆ ಕಾಡುತಿದೆ ಇಂದು ವಿರಹದ ಬೇಗೆ ನೀಡಬಾರದೆ ಚೂರು ಒಲವ ಹಸಿರು. ಸುಳಿವುದದು ಬಿರುಗಾಳಿ ಮೈಗೆ ಕಿಚ್ಚನು ಹಚ್ಚಿ ಬೆಂಕಿಯಾಡುವ ಮನವು ಹುಚ್ಚಾಗಿದೆ ತೆಗಳುವುದು ಸರಿಯೇನು? ಈ ಬಿಸಿಯ ಗಾಳಿಯನು ನಿನ್ನೊಲವ ಕಾಯುವುದು ಹೆಚ್ಚಾಗಿದೆ. ಯಾವುದೋ ಧಾಟಿಯಲಿ ಯಾವುದೋ ರಾಗದಲಿ ಹಾಡುವಾತನ ಕೊರಳು ದಣಿದುಹೋಗಿ ನಿನ್ನ ಪ್ರೀತಿಯ ಸ್ವಲ್ಪ ಪಡೆದು ಬಾ ಎನುತಲಿದೆ ಬರೆವ ಪದಗಳ ಸಾಲು ಮರವೆಯಾಗಿ ನಾಳೆದಿನ […]