ಯಾಕೆ ರನ್ನನ ಭೀಮಸೇನ ಕಾಡುತ್ತಾನೆ?

ಕೆಲವೊಂದು ಕಾವ್ಯದ ಭೀಮನನ್ನು ಓದಿಯೂ ಮಹಾಕವಿ ರನ್ನನ ಭೀಮನೇ ಮನಸ್ಸಿನಲ್ಲಿ ಉಳಿಯುತ್ತಾನೆ. ಕುಮಾರವ್ಯಾಸನ ಭೀಮನೂ ಭೀಮನೇ. ಪಾತ್ರವೈಭವದಲ್ಲಿ ಕುಮಾರವ್ಯಾಸನ ಭೀಮನಿಗೆ ಬಹಳವಾದ ಜಾಗ ಸಿಕ್ಕಿದೆ. ಹುಟ್ಟಿನಿಂದ, ಬಾಲಕ್ರೀಡೆಯ ಸಮಯದಲ್ಲಿ, ಹಿಡಿಂಬಾ ಪ್ರಕರಣ, ಬಕಾಸುರ ಪ್ರಕರಣ, ಕೀಚಕ.. ಇತ್ಯಾದಿಯಾಗಿ ಕುಮಾರವ್ಯಾಸನ ಭೀಮ ಬಹಳ ಚೆನ್ನಾಗಿ ಬೆಳೆಯುತ್ತಾನೆ. ಯುದ್ಧದ ಸಂದರ್ಭದಲ್ಲಿ (ಸುಪ್ರತೀಕ- ಆನೆಯನ್ನು ಕೊಲ್ಲುವ ಸಂದರ್ಭದ್ದು) ಮಾತ್ರ ಸೊಗಸಾಗಿದೆ ಅಲ್ಲಿ. ರನ್ನನ ಭೀಮನು ಪ್ರತಿಜ್ಞೆಗಳಿಂದ, ಮಾತುಗಳಿಂದ ಬಹಳವಾಗಿ ವೀರ. ಸಾಹಸಭೀಮ ವಿಜಯಂ ಎನ್ನುವ […]

Advertisements