ಪೊಟ್ಟಣದ ಆಹಾರ (Packed Lunch)

ಶಾಲೆಗಳು ದೂರವಿರುವುದರಿಂದ ಮತ್ತು ಶಾಲಾ ಅವಧಿಯಲ್ಲಿ ಊಟದ ಸಮಯಾವಾಕಾಶ ಕಡಿಮೆ ಇರುವುದರಿಂದ ಪ್ಯಾಕ್ಡ್ ಲಂಚ್, ಶಾಲೆಗೆ ಊಟದ ಡಬ್ಬಿಯನ್ನು ತೆಗೆದುಕೊಂಡು ಹೋಗುವುದು ಮಕ್ಕಳ ಅವಶ್ಯಕತೆಯಾಗಿದೆ. ಮನೆಯಿಂದ ದೂರ ಹೋಗುವ ಮಕ್ಕಳು ಡಬ್ಬಿಯಲ್ಲಿ ತೆಗೆದುಕೊಂಡು ಹೋಗುವ ಆಹಾರವನ್ನು ಪ್ಯಾಕ್ಡ್ ಲಂಚ್ ಅಥವಾ ಪೊಟ್ಟಣದ ಊಟ ಎಂದು ಕರೆಯುತ್ತಾರೆ. ಈ ರೀತಿಯಾಗಿ ತೆಗೆದುಕೊಂಡು ಹೋಗುವ ಆಹಾರವು ಪ್ರಮಾಣದಲ್ಲಿ ಮತ್ತು ಗುಣಮಟ್ಟದಲ್ಲಿ ಸಮರ್ಪಕವಾಗಿರುವುದಿಲ್ಲ. ಮನೆಯಿಂದಲೇ ಆಹಾರ ಕಟ್ಟಿಕೊಂಡು ಹೋಗುವುದು ಪರಿಶ್ರಮವಾದರೂ ಆರೋಗ್ಯ ಕಾಯ್ದುಕೊಳ್ಳುವಲ್ಲಿ ಸಹಕಾರಿಯಾಗಿದೆ. […]

Advertisements