Article 2:
ಶಾಲಾ ಮಕ್ಕಳ ಆಹಾರ ಮಾರ್ಗಸೂಚಿ:
ಶಾಲಾ ವಯಸ್ಸಿನ ಅವಧಿಯು ಸ್ಥಿರವಾದ ಬೆಳವಣಿಗೆಯ ಹಂತವಾಗಿದೆ. ಹಸಿವಿನ ಸ್ವಾಭಾವಿಕ ಹೆಚ್ಚಳವು ಆಹಾರ ಸೇವನೆಯ ಹೆಚ್ಚಳಕ್ಕೆ ಕಾರಣವಾಗಿದೆ. ಬೆಳೆಯುತ್ತಿರುವ ಸ್ವಾತಂತ್ರ್ಯವು ಆಹಾರ ಆಯ್ಕೆಯ ನಿಯಂತ್ರಣವನ್ನು ಕ್ರಮೇಣ ಪೋಷಕರಿಂದ ಮಗುವಿಗೆ ವರ್ಗಾಯಿಸಲು ಕಾರಣವಾಗುತ್ತದೆ.

  1. ಹೆಚ್ಚುತ್ತಿರುವ ಚಟುವಟಿಕೆ ಮತ್ತು ಬೆಳವಣಿಗೆಗಾಗಿ, ಅನಾರೋಗ್ಯ ಅಥವಾ ಇತರೆ ಗಾಯಗಳಿಂದಾಗುವ ನಷ್ಟವನ್ನು ಪೂರೈಸಲು ವಿಶೇಷ ಪೌಷ್ಟಿಕಾಂಶದ ಅಗತ್ಯವಿರುತ್ತದೆ.
  2. ಮಕ್ಕಳು ಸಾಮಾನ್ಯವಾಗಿ ಪ್ರಕ್ಷುಬ್ಧರಾಗಿರುತ್ತಾರೆ ಮತ್ತು ತಿನ್ನುವುದಕ್ಕಾಗಿ ಮೇಜಿನ ಬಳಿ ಹೆಚ್ಚು ಸಮಯ ಕಳೆಯಲು ಇಚ್ಛಿಸುವುದಿಲ್ಲ. ಇದಲ್ಲದೆ ಬೆಳಿಗ್ಗೆ ಸಮಯಕ್ಕೆ ಸರಿಯಾಗಿ ತರಗತಿಗೆ ತಲುಪಬೇಕಾದ್ದರಿಂದ ಧಾವಂತದಲ್ಲಿರುತ್ತಾರೆ ಆದ್ದರಿಂದ ಭೋಜನವು ತ್ವರಿತವಾಗಿ ತಿನ್ನಲು ಮತ್ತು ಪೌಷ್ಟಿಕಾಂಶವನ್ನು ತೃಪ್ತಿ ಪಡಿಸುವ ಭಕ್ಷ್ಯಗಳನ್ನು ಒದಗಿಸಬೇಕು.
  3. ಮಕ್ಕಳು ಸುಲಭವಾಗಿ ಬೇಸರಗೊಳ್ಳುತ್ತಾರೆ ಆದ್ದರಿಂದ ಆಹಾರದಲ್ಲಿ ಬಣ್ಣ ಮತ್ತು ವಿನ್ಯಾಸದ ಮೂಲಕ ಹೆಚ್ಚು ವೈವಿಧ್ಯತೆಯನ್ನು ನೀಡಬೇಕು.
  4. ಹವಮಾನ ಪರಿಸ್ಥಿತಿಗಳು ಸಹ ಮುಖ್ಯವಾದ ಪರಿಗಣನೆಯಾಗಿದೆ. ಬೇಸಿಗೆಯಲ್ಲಿ ಹೆಚ್ಚುವರಿ ದ್ರವಗಳು ಮತ್ತು ಲವಣಗಳನ್ನು ನೀಡಬೇಕಾಗುತ್ತದೆ ಏಕೆಂದರೆ ಮಕ್ಕಳು ಸಾಮಾನ್ಯವಾಗಿ ಸರಳ ನೀರನ್ನು ಕುಡಿಯಲು ಇಚ್ಛಿಸುವುದಿಲ್ಲ.
  5. ಶಾಲಾ ಮಕ್ಕಳು ನಿಗದಿತ ಭೋಜನ ವೇಳೆಯ ಮಧ್ಯದಲ್ಲಿ ಕೆಲವು ಆಹಾರಗಳನ್ನು ಸೇವಿಸಲು ಇಷ್ಟಪಡುತ್ತಾರೆ. ಹಣ್ಣುಗಳಾದ ಸೇಬು, ಬಾಳೆ, ನೆಲ್ಲಿಕಾಯಿ, ಕಿತ್ತಳೆ, ಹುರಿದ ಕಡಲೆಕಾಯಿ ಬೀಜ, ಬಟಾಣಿ ಇವುಗಳನ್ನು ಇಷ್ಟಪಟ್ಟು ಶಾಲೆಯ ವೇಳೆಯ ಮಧ್ಯದಲ್ಲಿ ತಿನ್ನುತ್ತಾರೆ. ಇವು ರುಚಿ-ಶುಚಿಯಿಂದ ಕೂಡಿದರೆ ಅವುಗಳಿಂದ ಒಳ್ಳೆಯ ಪೋಷಕಾಂಶಗಳು ಮತ್ತು ಕ್ಯಾಲೋರಿಗಳು ದೊರೆಯುತ್ತದೆ.
  6. ಕುಟುಂಬದೊಟ್ಟಿಗೆ ಆಹಾರ ಸೇವಿಸಲು ಮಕ್ಕಳು ಸಿದ್ಧರಿರುವುದರಿಂದ ಮತ್ತು ಕುಟುಂಬದ ಸದಸ್ಯರ ನಡುವಿನ ಸಂವಹನವು ಸಾಮಾನ್ಯ ಬೆಳವಣಿಗೆಯ ಭಾಗವಾಗಿರುವ ಕಾರಣ ಚಿಕ್ಕ ಮಗುವನ್ನು ಕುಟುಂಬದ ಉಳಿದವರೊಂದಿಗೆ ತಿನ್ನಲು ಪ್ರೋತ್ಸಾಹಿಸಬೇಕು.
  7. ಮಗುವಿಗೆ ತರಕಾರಿಗಳು(ಸಲಾಡ್) ಇಷ್ಟವಾಗದಿದ್ದಲ್ಲಿ ಅವುಗಳನ್ನು ಸ್ಯಾಂಡ್‍ವಿಚ್ ಮೂಲಕ ಕೊಡಬಹುದು.
  8. ಶಾಲೆಯಿಂದ ಹಿಂದಿರುಗಿದ ನಂತರ ಸೇವಿಸುವ ಆಹಾರವು, ಆಹಾರ ಕ್ರಮಕ್ಕೆ ಸಕಾರಾತ್ಮಕ ಕೊಡುಗೆ ನೀಡುತ್ತದೆ. ಹಣ್ಣುಗಳು ಮತ್ತು ಒಣ ಹಣ್ಣುಗಳನ್ನು ಲಘು ಆಹಾರವಾಗಿ ನೀಡಬಹುದು.

ಮೊದಲನೇ ಭಾಗ – https://hummingviews.com/2020/01/08/ಪೊಟ್ಟಣದ-ಆಹಾರ-packed-lunch/

Advertisements

Leave a Reply

This site uses Akismet to reduce spam. Learn how your comment data is processed.