ಮಲ್ಲಿಗೆ ಮಾಲೆ

ಮಲ್ಲಿಗೆಯ ಹೂವನ್ನು ದಾರಿಯಲಿ ಕಂಡವರುನಿಡಿದಾದ ಉಸಿರೆಳೆದು ಹೋದರಂತೆ;ಕಣ್ಣು ಹಿರಿದಾಗಿಸುವ ವಿದ್ಯೆಯನು ಕಲಿತವಳುಜಾಣತುಟಿಯಲಿ ನಗಲು ಮರೆತು ಚಿಂತೆ! ಒಂದೆರಡು ಮುಷ್ಟಿಯಲಿ ಹೂವ ಕೊಟ್ಟಳು ಅವಳುತೂಕದಲಿ ಹಾಕಿಲ್ಲ, ಏನಕೆಂದೆ?ಗಂಧವನು ತೂಕದಲಿ ಹಿಡಿಯಲಾಗುವುದಿಲ್ಲಮಲ್ಲಿಗೆಯ ಬೀಳಿಸದೆ ಸಾಗು ಮುಂದೆ. ಮೊಣಕೈಯ್ಯ ಭಾರದಲಿ ಬಾಗಿಲನು ದೂಡಿದರೆಒಳಗಿದ್ದ ಮನೆಯವಳು ಕೆರಳಿ ಬಂದು;ಬೇಗ ಬರುವೆನು ಎಂದು ಹೋದವರು ತಡವೇಕೆ?ಹೂ ಮುಖವ ನೋಡಿದಳು ಕೋಪ ತಿಂದು! ಹೂವ ಕಟ್ಟುವ ಅವಳ ಕೈಯ್ಯ ನೋಡುವುದೇನುಬೆರಳುಗಳ ನಡುವಿರುವ ದಾರವನ್ನೇ;ಆಗೊಮ್ಮೆ ಈಗೊಮ್ಮೆ ಹಣೆಯ ತುರಿಸುವ ತೋಳುಮಾಲೆಯನು […]

ಹರಟೆಮಲ್ಲರ ಹರಟೆ

ಹರಟೆಮಲ್ಲರ ತಂಡ ದೇಗುಲದ ಜಗಲಿಯಲಿಸಂಜೆಯಲಿ ಸೇರುವರು ಮಾತಿಗಾಗಿ;ಊರು ಪರವೂರುಗಳ ಸುದ್ಧಿಯನು ಬೆರೆಸುವರುಸುಮ್ಮನುರಿವುದು ಮಾತು ತಣ್ಣಗಾಗಿ. ದೇಗುಲದ ಅರ್ಚಕರು ಪೂಜೆ ಮಿತಿಮಾಡುವರುಇವರ ಮಾತಿನ ಸುಳಿಗೆ ಮೋಹಗೊಂಡುನಂದಿಬಟ್ಟಲ ಹೂವು ಹಿತವಾಗಿ ಅರಳುವುದುಈ ಮಾತನೆಲ್ಲವನು ಹೀರಿಕೊಂಡು! ಒಣಮರದ ಎದುರಿದ್ದ ಮನೆಯ ಆ ಹಿರಿಮಗಳುಗಾಡಿಯಲಿ ಓಡಾಡುತಿದ್ದ ಬಗೆಯಹೊಸದಾಗಿ ಬಂದಿರುವ ದಂಪತಿಗಳೂ ಸೊಗಸುಗಂಡ ಬಲು ಜೋರಿಹನು ಕುಡುಕರೊಡೆಯ! ದೂರದೂರಿನ ರೈತ ಬೆಳೆದಿದ್ದ ಕುಂಬಳವನಮ್ಮೂರ ಜನರೂನು ಬೆಳೆಯಬೇಕು;ಹೊಸರೋಗ ಎಂದೇನು ಕಳವಳವೆ ಬೇಕಿಲ್ಲನಿಂಬೆರಸ ಬೇವುಗ‌ಳ ತಿನ್ನಬೇಕು. ಚೀಟಿದುಡ್ಡೆಲ್ಲವೂ ಚಿಟ್ಟೆಯಂತೆಯೆ ಹಾರಿಹೊಸದು […]