Stargazing

Looking at you do to meWhat stargazing does to my mindThat’s what makes it my favorite hobby!! soultxt Advertisements

Advertisements

ಹೂವು ಅರಳುವ ಮುನ್ನ!

ಮಲ್ಲಿಗೆಯ ಮೊಗ್ಗುಗಳು ಅರಳಿಲ್ಲವೆಂದುನುತಸಿಡುಕಿದರೆ ಹೂವಾಯ್ತೆ, ಗಂಧ ಬಂತೆ?ಅವಳ ದಾರಿಯ ಕಾದು ಕುಳಿತ ಪ್ರೇಮಿಯ ಜಗಕೆಮುನಿಸು ಬಂದರೆ ಪ್ರೇಮ ಉಳಿಯದಂತೆ! ತಡವಾದರೇನಂತೆ ಬಂದಳಲ್ಲಾ ಎನುತಅಡಗಿಸಿಹ ಹೂಗಳನು ನೀಡಬೇಕು;ಬೇಗ ಹೋಗುವೆನೆಂಬ ಅವಳ ಮಾತಿನ ನಡುವೆಹೊಸತು ಪದಗಳ ಪದ್ಯ ಕಟ್ಟಬೇಕು. ಕತ್ತಲಿನ ಕಾರ್ಮೋಡ ಸುತ್ತಲೂ ಬಂದಾಗನಗೆಯ ಮಿಂಚುಗಳನ್ನು ಹರಡಬೇಕು;ತೊರೆವ ಕ್ಷಣದಲಿ ಕಣ್ಣು ಕತ್ತಲೆಯೆ ಆಗುವುದುಪ್ರೇಮದಲಿ ಮೈಮರೆತು ನೆನೆಯಬೇಕು. ಮಲ್ಲಿಗೆಯು ಅರಳುವುದು ತಡವಾದರೇನಂತೆಹಿತವಾದ ಭಾವಗಳು ತಾನೆ ಪ್ರೇಮ?ಸಹಜದಲಿ ದೊರೆತದ್ದು ಮನುಜ ಪುಣ್ಯವು ತಾನೆಹೊಸಕಿದರೆ ಉಳಿದೀತೆ ನಿತ್ಯಕಾಮ!

ಒಂದಿಷ್ಟು ಮಂದಹಾಸ.

ಯೋಚನೆ ಮಾಡಿದಾಗ ಮಂದಹಾಸ ತರುವಂತಹಾ ಸಣ್ಣ ಸಣ್ಣ ವಿಷಯಗಳು ಬಹಳ ಇರುತ್ತವೆ. ಆದರೆ ಇವು ನಮ್ಮ ದೈನಂದಿನ ಬದುಕಿನಲ್ಲಿ ಏನೂ ಅರಿವಿರದಂತೆ ನಡೆಯುವ ಘಟನೆಗಳು. ಕೆಲವೊಂದನ್ನು ಹೇಳ್ತೇನೆ, ನಿಮ್ಮಲ್ಲಿಯೂ ಇಂತಹ ಅನುಭವಗಳಿದ್ದರೆ ಹಂಚಿಕೊಳ್ಳಿ. ೧. ಒಳ್ಳೇ ಇಷ್ಟದ ಉಪ್ಪಿನಕಾಯಿಯನ್ನು ಚಮಚದಿಂದ ತಟ್ಟೆಗೆ ಹಾಕಿಕೊಂಡು, ಆ ಚಮಚದಲ್ಲಿ ಉಳಿದಿರುವ ರಸವನ್ನು ಮೆಲ್ಲಗೆ ಕೈಯ್ಯಿಂದ ಒರೆಸಿ, ನಂತರ ಚಮಚವನ್ನೂ ಕೈಯ್ಯನ್ನೂ ನೆಕ್ಕದಿದ್ದರೆ ಅದೊಂದು ಸಂಪೂರ್ಣವಾದ ಕೆಲಸವಲ್ಲ. ೨. ಊಟವಾದ ಮೇಲೆ, ನೆಲವನ್ನು ಒರೆಸುವಾಗ […]