ಹೇಯ್ ಆಟೋ!

ನಸುಬೆಳಗು ಎದ್ದು ಆಟೋವನ್ನು ಒರೆಸಿ ಕನ್ನಡಿಯನ್ನು ನೋಡಿ ಫಳ್ ಎಂದು ಹಲ್ಕಿರಿದು ಬಾಡಿಗೆದಾರರಿಗಾಗಿ ಆಚೀಚೆ ನೋಡುತ್ತಿದ್ದ. ಬಹಳ ಬಿರುಸಾಗಿ ಬಂದಾಂತನೊಬ್ಬ ಹೊರಡು ಮೆಜೆಸ್ಟಿಕ್ಕಿಗೆ ಎಂದು ಆಜ್ಞಾಪಿಸಿದ.ಸರಿ, ಸಾರ್ ಕೂತ್ಕಳ್ಳಿ. ಮೀಟರ್ ಮೇಲೆ ಐವತ್ತು ಕೊಡಿಆಯ್ತು ಕಣ್ರೀ, ಬೇಗ ಹೋಗಿ.. ಯಶವಂತಪುರದಿಂದ ಹತ್ಬೇಕಿತ್ತು ಟ್ರೈನು.. ಇನ್ನು ಹತ್ನಿಮಿಷ ಇರೋದು.. ಮೆಜೆಸ್ಟಿಕ್ಕಿಂದ ಹತ್ತಿದ್ರಾಯ್ತು.. ಬೇಗ ಹೊರಡಿ.~ಮೆಜೆಸ್ಟಿಕ್ ಆಟೋಗಳ ಪಾಲಿಗೆ ಸ್ವರ್ಗ. ಬೆಳಗ್ಗಿನ ಬೋಣಿಯೇ ನೂರಾ ಇಪ್ಪತ್ತು ರುಪಾಯಿ.ಆಟೋ.. ಆಟೋ..ಹ್ಮ್ಂ.. ಎಲ್ಲಿಗೆ ಮೇಡಂ?ಇಂಡಿಯನ್ ಎಕ್ಸ್’ಪ್ರೆಸ್ […]

Advertisements

ಒಂದು ನೋಟಿನ ಕತೆ.

ಸೂರ್ಯನ ಬೆಳಕು ಇನ್ನೂ ಬಂದಿಲ್ಲ. ಎಲ್ಲಿಂದಲೋ ಎದ್ದು ಬಂದ ಒಬ್ಬ ದಢೂತಿ ಮನುಷ್ಯ ನನ್ನನ್ನು ಅನಾಮತ್ತಾಗಿ ಎತ್ತಿಕೊಂಡು ನಡೆದ. ಮೊದಲ ಟ್ರಿಪ್ಪಿನ ಖುಷಿಯಲ್ಲಿದ್ದ ಬಸ್ಸು ರಸ್ತೆಯ ಖುಷಿಯನ್ನು ಹಾರಿ ಹಾರಿ ಅನುಭವಿಸುತ್ತಿತ್ತು. ಸಿಡುಕು ಮೋರೆಯ ಕಂಡಕ್ಟರ್ ಟಿಕೇಟ್ ಕೇಳಿದಾಗ ನನ್ನನ್ನೊಮ್ಮೆ ತಡವಿದಂತಾಯ್ತು. ನಿನ್ನೆಯ ಹಳಸಲು ಘಮದ ನಡುವೆ ಇಂದಿನ ಹೊಸಾ ಹೂಗಳ ಪರಿಮಳ, ತರಕಾರಿ ಸೊಪ್ಪುಗಳ ತಾಜಾತನದ ಗಂಧ ಘಮಿಸುವಾಗಲೇ ಮಾರುಕಟ್ಟೆ ತಲುಪಿದ್ದು ತಿಳಿಯಿತು. ದಡೂತಿ ಮನುಷ್ಯ ನನ್ನನ್ನು ತರಕಾರಿ […]

ನಮ್ಮಲ್ಲಿರುವ ಎರಡು ತಪ್ಪುಗಳು

ಶುಭಾ ಗಿರಣಿಮನೆ ಒಂದು ಸಮಾರಂಭಕ್ಕೋ, ಅಥವಾ ಸ್ನೇಹಿತರ ಜೊತೆಗೋ ಇದ್ದಾಗ ಇದೊಂದು ಮಾತು ಆಗಾಗ ಕೇಳುತ್ತೇವೆ. ಆ ದೇವರು ಒಳ್ಳೆಯವರಿಗೆ ಜಾಸ್ತಿ ಕಷ್ಟ ಕೊಡ್ತಾನೆ ಅಂತ. ಇನ್ನೊಂದು ನಾವು ಎಷ್ಟು ಒಳ್ಳೆತನದಲ್ಲಿ ಇದ್ದರೂ ನಮಗೆ ಯಾಕೆ ಈ ಜನ ಕೆಟ್ಟವನನ್ನಾಗಿ ಬಿಂಬಸ್ತಾರೋ ಅಂತ. ಇದು ಎಲ್ಲರ ಪ್ರಶ್ನೆ. ನಾವು ದೇವರ ಪೂಜೆ ಮಾಡ್ತೇವೆ. ದಾನ ಧರ್ಮಾದಿಗಳನ್ನು ಮಾಡ್ತೇವೆ. ನಮ್ಮ ಹಿರಿಯರನ್ನು ಚೆನ್ನಾಗಿ ನೋಡಿಕೊಂಡಿದ್ದೇವೆ. ಹಿರಿಯರು ಮಾಡಿಟ್ಟ ಸಂಪತ್ತಿಗಿಂತ ಈಗ ದುಪ್ಪಟ್ಟು […]