ನಮ್ಮಲ್ಲಿರುವ ಎರಡು ತಪ್ಪುಗಳು

ಶುಭಾ ಗಿರಣಿಮನೆ ಒಂದು ಸಮಾರಂಭಕ್ಕೋ, ಅಥವಾ ಸ್ನೇಹಿತರ ಜೊತೆಗೋ ಇದ್ದಾಗ ಇದೊಂದು ಮಾತು ಆಗಾಗ ಕೇಳುತ್ತೇವೆ. ಆ ದೇವರು ಒಳ್ಳೆಯವರಿಗೆ ಜಾಸ್ತಿ ಕಷ್ಟ ಕೊಡ್ತಾನೆ ಅಂತ. ಇನ್ನೊಂದು ನಾವು ಎಷ್ಟು ಒಳ್ಳೆತನದಲ್ಲಿ ಇದ್ದರೂ ನಮಗೆ ಯಾಕೆ ಈ ಜನ ಕೆಟ್ಟವನನ್ನಾಗಿ ಬಿಂಬಸ್ತಾರೋ ಅಂತ. ಇದು ಎಲ್ಲರ ಪ್ರಶ್ನೆ. ನಾವು ದೇವರ ಪೂಜೆ ಮಾಡ್ತೇವೆ. ದಾನ ಧರ್ಮಾದಿಗಳನ್ನು ಮಾಡ್ತೇವೆ. ನಮ್ಮ ಹಿರಿಯರನ್ನು ಚೆನ್ನಾಗಿ ನೋಡಿಕೊಂಡಿದ್ದೇವೆ. ಹಿರಿಯರು ಮಾಡಿಟ್ಟ ಸಂಪತ್ತಿಗಿಂತ ಈಗ ದುಪ್ಪಟ್ಟು […]

Advertisements

“ನೆಗೆಟಿವ್ ಥಿಂಕಿಂಗ”ನ್ನು ದೀಪದ ಜ್ವಾಲೆಯಲ್ಲಿ ಸುಟ್ಟುಬಿಡೋಣ!

ಶುಭಾ ಗಿರಣಿಮನೆ ಒಂದು ಚೆಂದದ ಮನೆ. ಗೇಟಿನ ಪಕ್ಕದಲ್ಲಿ ನಿಂತು ನೋಡಲು ಮನಸ್ಸು ಸಹಜವಾಗಿ ಅರಳಿ ನಿಂತುಬಿಡುತ್ತದೆ. ಆ ಮನೆಯ ಒಳಗಡೆ ಹಾಗೆ ಹೆಜ್ಜೆ ಹಾಕಿದರೆ ಅಲ್ಲೊಂದು ಸಾವಿನ ಮನೆಯಂತೆ ಸೃಷ್ಟಿಸಿಕೊಳ್ಳುತ್ತದೆ. ಅರೇ ಇದೇನಿದು ಹಾರರ ಕಥೆಯಂತೆ ಹೇಳ್ತಿದ್ದಾರಲ್ಲ ಅಂದುಕೊಳ್ಳಬೇಡಿ. ನಮ್ಮ ಮನಸ್ಸಿನಿಂದ ನಾವು ಬದುಕುವ ರೀತಿ ಇದೆಯಲ್ಲ ಅದೇ ಆ ಮನೆಯ ಒಳಗಡೆಯ ವಾತಾವರಣವು ಇರುತ್ತದೆ. ಸಾಮಾನ್ಯ ಎಲ್ಲರಿಗೂ ನೆಗೆಟಿವ್ ಥಿಂಗ್ ಮಾಡುವುದು ಅಂದರೆ ಅದೇನು ಇಷ್ಟವೋ ಗೊತ್ತಿಲ್ಲ. […]

ಮನಸ್ಸಿನ ಸಮತೋಲನಕ್ಕೆ ಒಂದು ನಿಮಿಷದ ಧ್ಯಾನ

ಶುಭಾ ಗಿರಣಿಮನೆ ಒಮ್ಮೆ ಕಣ್ಣು ಮುಚ್ಚಿ ಕುಳಿತುಕೊಳ್ಳಿ. ನಮ್ಮ ತಲೆಯಲ್ಲಿ ಯಾವೆಲ್ಲ ಚಿತ್ರಗಳು ಓಡುತ್ತವೆ ಎಂದು ವೀಕ್ಷಿಸಿ. ಬೆಳಗ್ಗೆ ಎದ್ದಾಗ ಹಲ್ಲು ತಿಕ್ಕುವುದರಿಂದ ಹಿಡಿದು ತಿಂಡಿ, ಊಟ, ಟಿವಿ ಪರದೆಯಲ್ಲಿಯ ಕಥೆ, ಪ್ರೀತಿಸಿದ ಮಗು, ಜಗಳ ಕಾಯ್ದ ಗೆಳೆಯ, ಉಂಡ ಸಾರಿನ ಪರಿಮಳವೂ ನೆನಪಿನ ಸುಳಿಯಲ್ಲಿ ಸುತ್ತಿ ತಟ್ಟನೆ ಕಣ್ಣುಬಿಡುವಂತೆ ಮಾಡುತ್ತದೆ. ಇದಕ್ಕೆ ಕಾರಣ ನಮ್ಮಲ್ಲಿ ಏಕಾಗ್ರತೆ ಇಲ್ಲದಿರುವುದು. ಏಕಾಗ್ರತೆಯನ್ನು ಇಂದಿನ ಕಾಲದಲ್ಲಿ ಮಾರಿಬಿಟ್ಟಿದ್ದೇವೆ. ಏಕಾಗ್ರತೆ ನಮ್ಮ ಸ್ವತ್ತು ಎನ್ನುವುದನ್ನು […]

ಶುಭನುಡಿ – ಮನಸ್ಸಿಗೆ ಹಾಕಿರುವ ಪರದೆ ಸರಿಸಿರಿ.

ಶುಭಾ ಗಿರಣಿಮನೆ ಮನುಷ್ಯ ಬುದ್ದಿವಂತ ಜೀವಿ. ಅವನಿಗೆ ಬುದ್ಧಿಶಕ್ತಿ ಎಲ್ಲ ಪ್ರಾಣಿ ವರ್ಗಕ್ಕಿಂತ ಹೆಚ್ಚಿಗೆ ಹೇಗಿದೆಯೋ ಹಾಗೆ ಮನಸ್ಸು ಎನ್ನುವ ಭಾವನಾ ಲೋಕವೂ ಅವನಲ್ಲಿ ಅಗಾಧವಾಗಿ ತುಂಬಿಕೊಂಡಿದೆ. ಮನಸ್ಸಿಗೆ ಸಿಗುವ ಖುಷಿ ಹಾಗು ದುಃಖವೇ ಜೀವನ ಎಂದುಕೊಂಡು ಮನುಷ್ಯ ಬದುಕುವವನಾಗಿದ್ದಾನೆ. ಆ ಮನಸ್ಸು ತನ್ನಲ್ಲಿ ಎಷ್ಟು ಸದೃಢವಾಗಿದೆ ಎಂದು ಒಂದು ಕ್ಷಣ ಯೋಚಿಸುವ ಪ್ರಯತ್ನವೊಂದನ್ನು ಬಿಟ್ಟು ಉಳಿದೆಲ್ಲಕಡೆ ಮನಸ್ಸಿನ ಭಾವನೆಯನ್ನು ವ್ಯಕ್ತಪಡಿಸಿಕೊಳ್ಳುತ್ತಾ ಸಾಗುತ್ತಾನೆ. ನನ್ನ ಗೆಳೆಯ ಇಂದು ಕಾರಣವಿಲ್ಲದೆ ತನ್ನ […]