ಮಲ್ಲಿಗೆಯ ಹಾಡು

ಈ ದಾರಿಯಲಿ ಬರುವ ಜನಕೆಲ್ಲ ಗೊತ್ತಿಹುದು ಇಲ್ಲಿ ಹೂವಿನ ಹಾಡು ಕೇಳುತಿತ್ತು; ನಲ್ಲೆಗೋ ನಲ್ಲನಿಗೋ ಮಲ್ಲಿಗೆಯ ಮಾತುಗಳು ಮೆಲ್ಲ ಪಿಸುದನಿಗಳಲಿ ತಿಳಿಯುತಿತ್ತು. ನಸುಬೆಳಗು ಅರಳಿರುವ ಮಲ್ಲೆ ಹೂಬನದಿಂದ ಗಾಳಿಯಲಿ ಬೆರೆತು ಹೊಸ ಕಂಪು ನೀಡಿ, ಹಾದಿಹೋಕನ ಮನಸು ಪ್ರೀತಿಯಿಂದಲಿ ಬೆಳಗಿ ದಾರಿ ನಲಿವಾದುದು ನೋವು ದೂಡಿ. ಸಂಜೆಯಾಗುತ ಹೀಗೆ ನಲ್ಲನಲ್ಲೆಯರೆಲ್ಲ ಈ ದಾರಿಯನು ಹಿಡಿದು ನಡೆಯಬೇಕು ಮಲ್ಲೆ ಹೂವಿನ ಹಾಡು ಕೇಳಬೇಕೆನ್ನುವರೆ ಮೊದಲು ಹೂವಿನ ಬಳ್ಳಿ ಬೆಳೆಸಬೇಕು. Advertisements

Advertisements

ಅಂಟಿಕೊಳ್ಳದ ನೀರು.

ಹಿಡಿದಿಟ್ಟುಕೊಳ್ಳುವುದು ಬಲುಸುಲಭವೆಂದರೂಉಳಿಯದಂತೆಯೆ ಹಿಡಿವ ಕಲೆ ಬಹಳ ಕಷ್ಟಎಲ್ಲವನು ಬಿಟ್ಟರೂ ಉಳಿದ ತಂಪಿನ ನೆನಪುನೆನಪು ನಿಲ್ಲಿಸಬಹುದೆ? ಕಾಂಡ ಪುಷ್ಟ.

ಹೊಸ ಹೂವು!

ದಾರಿಯೊಲವಿನ ಗಂಧ; ತೊರೆಯದಿರು ನನ್ನಿಂದದೂರದಾರಿಯ ನಡೆಯೆ ಬೇಕೊಂದು ಬಂಧಗಮ್ಯವಿಲ್ಲದೆ ಹೀಗೆ ಸಾಗಿ ಹೋಗುವ ದಿನಕೆನೀ ಜೊತೆಗೆ ಇರದಿರಲು ಏನು ಚಂದ?