Category: SERIES

ಶ್ರೀ ಟೊಂಯ್ಕಾನಂದ ಚರಿತೆ. ಭಾಗ 4

ಪುಟ-೮ ಬದಲಾವಣೆಗೆ ಭಾವಗಳು ಸಾಕು. ಯಾರೂ ಹೇಳಬೇಕಿಲ್ಲ, ಯಾರೂ ಒಪ್ಪಿಸಬೇಕಿಲ್ಲ. ಕೆಲವೊಂದು ಕಾರ್ಯಕಾರಣವಿಲ್ಲದೇ ಬಹಳವಾಗಿ ಜೀವನಶೈಲಿ, ವಿಚಾರಗಳು ಹೆಚ್ಚೇಕೆ ನಡೆ ನುಡಿಗಳೂ ಬದಲಾವಣೆಯಾಗುತ್ತದೆ. ಇಂತಹ ಒಂದು ಜೀವನದ ತಿರುವು ಬಂದಿತ್ತು ಟೊಂಯ್ಕಾನಂದರಿಗೆ. ಅದೊಂದು ರಾತ್ರಿ ಹೊಂಚು ಹಾಕಿ ಬಂದ ಬೆಕ್ಕಿನಂತೆ ಬಂತು. ಯಾವುದೋ ಸುಟ್ಟ ಭಾವಗಳಿಗೆ ರೂಪು ಕೊಡುತ್ತಾ ಟೊಂಯ್ಕಾನಂದರು ಮಲಗಿದ್ದರೆ, ಡಿಲೈಟಾನಂದರು ಗೋಡೆಗೆ ಒರಗಿ ಕುಳಿತಿದ್ದರು. ಒಮ್ಮೆಲೇ ಎದ್ದ ಟೊಂಯ್ಕರು…

ಶ್ರೀ ಟೊಂಯ್ಕಾನಂದ ಚರಿತೆ. ಭಾಗ ೩

ಪುಟ-೫ ಕೆಲವೊಂದು ಸಲ ಎರಡು ಆಯ್ಕೆಗಳೂ ತಪ್ಪಲ್ಲವೆನ್ನುವಾಗ ಯಾವುದಾದರೂ ಒಂದು ಆಯ್ಕೆ ಮಾಡಿ ಮತ್ತೊಂದನ್ನ ಆಯ್ಕೆ ಮಾಡಬಹುದಿತ್ತು ಎನ್ನುವ ಪರಿತಾಪ ಉಂಟಾಗುತ್ತದೆ. ಅಂತಹ ಒಂದು ಪರಿತಾಪ, ಗೊಂದಲದ ನಡುವೆ ಮಲ್ಲಪ್ಪನವರು ಆಗಲಿ, ನೋಡೋಣ ಎಂದು ಟೊಂಯ್ಕರನ್ನು ಕಳಿಸಿದರು. ಅಂತಿರ್ಪೊಡೆ, ಇದೆಲ್ಲ ಸಮಾಚಾರವೂ ಡಿಲೈಟಾನಂದರ ಕಿವಿಗಳಿಗೆ, ಕಣ್ಣುಗಳಿಗೆ ತಿಳಿಯಲಿಲ್ಲ. ಒಂದು ದಿನ ಶ್ರೀಮಾನ್ ಮಲ್ಲಪ್ಪನವರ ಸಂಸಾರ ಸಮೇತವಾದ ಸವಾರಿ ಗುರುಗಳಿದ್ದಲ್ಲಿಗೆ ಬಂದಾಗ ಡಿಲೈಟಾನಂದರಿಗೆ…

ಹೈಸ್ಕೂಲ್ ದಿನಗಳು – ಭಾಗ ೩

ಭಾಗ – ೩ ಅವಳು ಹಿಂದಿನ ಬೆಂಚಿನಲ್ಲಿ ಕುಳಿತು ಕೊಳ್ಳುತ್ತಿದ್ದಳು. ಹಾಗಂತ ಅವಳು ದಡ್ಡಿಯೇನಲ್ಲ. ಎಲ್ಲರಿಗಿಂತ ಎತ್ತರ ಇದ್ದಳು. ಅದಕ್ಕೆ ಹಿಂದಿನ ಬೆಂಚಿನ ಹುಡುಗಿಯರ ಸಾಲಿಗೆ ಸೇರಿದ್ದಳು. ಅವಳು ಜಾಣೆ. ಬರೆದ ಅಕ್ಷರಗಳ ಚಂದವನ್ನು ನೋಡಲು ಎರಡು ಕಣ್ಣು ಗಳು ಸಾಲದು. ಆದರೆ ಮಿತ ಭಾಷಿ.ಗಟ್ಟಿಯಾಗಿ ಮಾತನಾಡಿದ್ದೇ ಇಲ್ಲ. ಹುಡುಗರ ಕಡೆಗಂತು ನೋಡ್ತಾನೆ ಇರ್ಲಿಲ್ಲ. ಒಟ್ಟಿನಲ್ಲಿ ಆಚಾರ, ಸಂಸ್ಕೃತಿಯ ಪ್ರತಿರೂಪ ಎನಿಸಿದ್ದಳು….

ಶ್ರೀ ಟೊಂಯ್ಕಾನಂದ ಚರಿತೆ. ಭಾಗ ೨

ಪುಟ-೩ ಜಗತ್ತಿನ ಗುರುಗಳನ್ನು ನೋಡಿ ಬಲ್ಲವರು ಟೊಂಯ್ಕರು. ಆದರೆ ಡಿಲೈಟಾನಂದರ ಪೂರ್ವವನ್ನೂ ಉತ್ತರವನ್ನೂ ತಿಳಿಯಲಾರದವರು. ತಾನು ಓರ್ವನೇ ಶಿಷ್ಯ, ಆದರೆ ಗುರುವಿನಿಂದ ಏನನ್ನೂ ಕಲಿಯಲಿಲ್ಲ ಎನ್ನುವ ಒಂದು ಬೇಸರ ಇತ್ತೀಚೆಗೆ ಕಾಡುತ್ತಿತ್ತು. ಮಾಡುವುದಕ್ಕೇನೂ ಕೆಲಸ ಇಲ್ಲದೇ ಕುಳಿತವನೇ ಗುರು? ಬೆಳಗ್ಗೆ ಸೂರ್ಯ ಮೂಡುವ ಮೊದಲೇ ಏಳುತ್ತಿದ್ದ ಡಿಲೈಟರು ದೂರದ ನಡಿಗೆಯನ್ನು ಮುಗಿಸಿ ವಾಪಸ್ಸು ಬರಬೇಕಾದರೆ ಟೊಂಯ್ಕರು ಎದ್ದಿರುತ್ತಿದ್ದರು. ಇತ್ತೀಚೆಗೆ ಯಾರ್ಯಾರೋ ಭಕ್ತರು…

ಹೈಸ್ಕೂಲ್ ದಿನಗಳು – ಭಾಗ ೨

10ನೇಯ ಸರದಿ. ಶಿಕ್ಷಕರು ಹೆಸರು ಕರೆದರು. ಉತ್ತರ ಪತ್ರಿಕೆ ಪಡೆಯಲು ಹೊರಟವರನ್ನು. ಅಲ್ಲೇ ನಿಲ್ಲಲು ಹೇಳಿದರು ಶಿಕ್ಷಕರು. ಉತ್ತರ ಪತ್ರಿಕೆಯನ್ನು ತೆರೆದು ಓದಲು ಆರಂಬಿಸಿದರು. ಪ್ರಶ್ಬೆ: ಹಾಸಿಗೆ ಇದ್ದಷ್ಟು ಕಾಲು ಚಾಚು ಈ ಗಾದೆಯನ್ನು ವಿವರಿಸಿ. ಉತ್ತರ: ಬಸವ ಮನೆಗೆ ಬಂದಾಗ ಬಂಗಾರಿ. ಹಾಸಿಗೆಯಲ್ಲಿ ಮಲಗಿ ನಿದ್ರಿಸುತ್ತಿದ್ದಳು. ಅವಳು ಕಾಲನ್ನು ಹಾಸಿಗೆಯಿಂದ ಹೊರಗೆ ಚಾಚಿದ್ದಳು. ಇದನ್ನು ನೋಡಿ ಬಸವನಿಗೆ ಕೋಪ ಬಂತು….

ಹೈಸ್ಕೂಲ್ ದಿನಗಳು – ಭಾಗ ೧

ಏಳನೇ ಕ್ಲಾಸ್ ಮುಗಿಸಿ 8ನೇ ಕ್ಲಾಸಿಗೆ ಕಾಲಿಟ್ಟಿದ್ದೆ. ಹೆಸರಿನಲ್ಕಿ ಕಾಲೇಜು ಇದ್ದರೂ ಅದು ಹೈಸ್ಕೂಲೇ ಆಗಿತ್ತು. ಕೊನೆಯಲ್ಲಿ ಪೆರಡಾಲ ಅಂತ ಇದ್ದರೂ, ಅದು ಇದ್ದದ್ದು ನೀರ್ಚಾಲಿನಲ್ಲಿ. ನನ್ನ ಕ್ಲಾಸಿನಲ್ಲಿ ಹೊಸಬರು ಹಾಗೆಯೇ ಅನುಭವಿಗಳು ಇದ್ದರು. ಅನುಭವಿಗಳೆಂದರೆ ಹಿಂದಿನ ವರ್ಷ ಇದೇ ಕ್ಲಾಸಿನಲ್ಲಿ ಇದ್ದು ಬೆಂಚಿಗೆ ಅಂಟಿಕೊಂಡವರು ಈ ಅನುಭವಿಗಳೇ. ನಮಗೆ ಅಂದರೆ ಹೊಸಬರಿಗೆ ಮಾರ್ಗದರ್ಶಕರು. ಅಧ್ಯಾಪಕರು ತರಗತಿಗೆ ಬಂದು ತಮ್ಮ ಪರಿಚಯ…

ಶ್ರೀ ಟೊಂಯ್ಕಾನಂದ ಚರಿತೆ. ಭಾಗ ೧

ಪ್ರಮುಖ ಪಾತ್ರಗಳಾದ”ಟೊಂಯ್ಕಾನಂದರು ’ಮತ್ತು”ಡಿಲೈಟಾನಂದರು’, ಇಬ್ಬರು ಸ್ವಾಮಿಗಳಾಗಿದ್ದು ಇವರ ವಿಚಾರವಾಗಿ ಯಾವುದೇ ಪ್ರಸ್ತುತವಿರುವ ದೂರದರ್ಶನಗಳಲ್ಲಿ , ಪತ್ರಿಕೆಗಳಲ್ಲಿ ಬಂದಿರುವುದಿಲ್ಲ. ಇವು ಸಾಮಾನ್ಯ ಮನುಷ್ಯನ ವಿಪರೀತ ಕಲ್ಪನೆಯಾಗಿದ್ದು, ಯಾವುದೇ ಪ್ರಕಾರವಾಗಿ ಯಾರನ್ನೂ ನಕಲಿಸಿರುವುದಿಲ್ಲ. ಆದ್ದರಿಂದ, ಯಾವುದಾದರೂ ರೀತಿಯಲ್ಲಿ ಸಾಮ್ಯ ಕಂಡುಬಂದರೆ ಬರಹಗಾರನ ಮೆದುಳಿಗೇ ಸಲ್ಲಬೇಕು ಹೊರತು ತಲೆಗೆ ಹೊಡೆಯಬಾರದಾಗಿ ವಿನಂತಿ.

%d bloggers like this:
%d bloggers like this:
%d bloggers like this:
%d bloggers like this:
%d bloggers like this:
%d bloggers like this:
%d bloggers like this: