ಹೇಯ್ ಆಟೋ!

ನಸುಬೆಳಗು ಎದ್ದು ಆಟೋವನ್ನು ಒರೆಸಿ ಕನ್ನಡಿಯನ್ನು ನೋಡಿ ಫಳ್ ಎಂದು ಹಲ್ಕಿರಿದು ಬಾಡಿಗೆದಾರರಿಗಾಗಿ ಆಚೀಚೆ ನೋಡುತ್ತಿದ್ದ. ಬಹಳ ಬಿರುಸಾಗಿ ಬಂದಾಂತನೊಬ್ಬ ಹೊರಡು ಮೆಜೆಸ್ಟಿಕ್ಕಿಗೆ ಎಂದು ಆಜ್ಞಾಪಿಸಿದ.ಸರಿ, ಸಾರ್ ಕೂತ್ಕಳ್ಳಿ. ಮೀಟರ್ ಮೇಲೆ ಐವತ್ತು ಕೊಡಿಆಯ್ತು ಕಣ್ರೀ, ಬೇಗ ಹೋಗಿ.. ಯಶವಂತಪುರದಿಂದ ಹತ್ಬೇಕಿತ್ತು ಟ್ರೈನು.. ಇನ್ನು ಹತ್ನಿಮಿಷ ಇರೋದು.. ಮೆಜೆಸ್ಟಿಕ್ಕಿಂದ ಹತ್ತಿದ್ರಾಯ್ತು.. ಬೇಗ ಹೊರಡಿ.~ಮೆಜೆಸ್ಟಿಕ್ ಆಟೋಗಳ ಪಾಲಿಗೆ ಸ್ವರ್ಗ. ಬೆಳಗ್ಗಿನ ಬೋಣಿಯೇ ನೂರಾ ಇಪ್ಪತ್ತು ರುಪಾಯಿ.ಆಟೋ.. ಆಟೋ..ಹ್ಮ್ಂ.. ಎಲ್ಲಿಗೆ ಮೇಡಂ?ಇಂಡಿಯನ್ ಎಕ್ಸ್’ಪ್ರೆಸ್ […]

Advertisements

ಒಂದು ನೋಟಿನ ಕತೆ.

ಸೂರ್ಯನ ಬೆಳಕು ಇನ್ನೂ ಬಂದಿಲ್ಲ. ಎಲ್ಲಿಂದಲೋ ಎದ್ದು ಬಂದ ಒಬ್ಬ ದಢೂತಿ ಮನುಷ್ಯ ನನ್ನನ್ನು ಅನಾಮತ್ತಾಗಿ ಎತ್ತಿಕೊಂಡು ನಡೆದ. ಮೊದಲ ಟ್ರಿಪ್ಪಿನ ಖುಷಿಯಲ್ಲಿದ್ದ ಬಸ್ಸು ರಸ್ತೆಯ ಖುಷಿಯನ್ನು ಹಾರಿ ಹಾರಿ ಅನುಭವಿಸುತ್ತಿತ್ತು. ಸಿಡುಕು ಮೋರೆಯ ಕಂಡಕ್ಟರ್ ಟಿಕೇಟ್ ಕೇಳಿದಾಗ ನನ್ನನ್ನೊಮ್ಮೆ ತಡವಿದಂತಾಯ್ತು. ನಿನ್ನೆಯ ಹಳಸಲು ಘಮದ ನಡುವೆ ಇಂದಿನ ಹೊಸಾ ಹೂಗಳ ಪರಿಮಳ, ತರಕಾರಿ ಸೊಪ್ಪುಗಳ ತಾಜಾತನದ ಗಂಧ ಘಮಿಸುವಾಗಲೇ ಮಾರುಕಟ್ಟೆ ತಲುಪಿದ್ದು ತಿಳಿಯಿತು. ದಡೂತಿ ಮನುಷ್ಯ ನನ್ನನ್ನು ತರಕಾರಿ […]

ಕಂಪೌಂಡಿನಾಚೆಗೆ ಎಲ್ಲವೂ ಚೆನ್ನಾಗಿರುತ್ತದೆ.

ದೂರದ ಬೆಟ್ಟವು ಕಣ್ಣಿಗೆ ನುಣ್ಣಗೆ ಎನ್ನುವ ಗಾದೆ ಪ್ರಪಂಚದ ಎಲ್ಲ ಭಾಷೆಗಳಲ್ಲಿಯೂ ಕಾಣುವ ಗಾದೆ. ಅನುಭವ ಜನ್ಯವಾದ್ದರಿಂದ ಇಂತಹ ಗಾದೆಗಳಿಗೆ ಭಾಷೆಯ, ಊರಿನ ಹಂಗಿಲ್ಲ. ಬೆಟ್ಟಗಳನ್ನೇ ಕಾಣದ ಈಗಿನವರಿಗೆ ಈ ಮಾತುಗಳನ್ನು ಗಾದೆಯನ್ನು ಬಳಸಿಕೊಳ್ಳಬಹುದು. ಹೆಚ್ಚಾಗಿ ನಾವು ಬೇರೆಯವರ ಸುಖವನ್ನು ಅಂದಾಜಿಸಿಯೇ ಕರುಬುತ್ತೇವೆ. ಪಕ್ಕದ ಮನೆಯವರ ಸಾರಿನ ಘಮ ನಮ್ಮ ಅಡುಗೆಗಿಂತಲೂ ಚೆನ್ನಾಗಿರುತ್ತದೆ. ಕಂಪೌಂಡಿನ ಆಚೆಯ ಮನೆಗೆ ಯಾವುದೋ ಹಬ್ಬದ ಊಟಕ್ಕೆ ಹೋದಾಗ ಮಾಡಿದ ಸಾರು/ಸಾಂಬಾರಿನ ರುಚಿ ನಮ್ಮ ಮನೆಯದಕ್ಕೆ […]

ಚಂದ್ರ_ಕಡಲು

ಹೌದು ನೀ ನನಗೆ ಎನಾಗಬೇಕು..ಇಬ್ಬರಲ್ಲು ಉತ್ತರವಿಲ್ಲ, ಈ ಪ್ರಶ್ನೆಯು ,ಪ್ರಶ್ನೆಯಾಗಿಯೇ ಉಳಿಯುತ್ತದೆ ಬದುಕಿನ ಕೊನೆಯವರೆಗೆ ಎನ್ನುವ ಆತಂಕ. ಕೆಲವೊಂದಕ್ಕೆ ಉತ್ತರಗಳೇ ಇಲ್ಲವೇನೋ ,ಇಲ್ಲ ತೀರ ಕೆದಕಬಾರದು ಬಿಡು.. ಹೌದು ನೀ ಸಿಕ್ಕ ಈ ಬದುಕು ಅದೆಷ್ಟು ಖುಷಿಯಾಗಿತ್ತು ನೋಡು, ನಿನ್ನ ನೆನೆದಾಗಲೆಲ್ಲ ತುಟಿ ಅಂಚಲಿ ಮಂದಹಾಸ ನನ್ನ ಅರಿವಿಗೆ ಬಾರದೆ ಮಿಂಚುತಿತ್ತು, ಕನಸುಗಳು ಬಿದ್ದರೆ ಅದು ನಿನ್ನದೇ ಆಗಿರುತಿತ್ತು, ಪ್ರತಿ ಮುಂಜಾವಿನಲ್ಲು ಪ್ರೀತಿಯಿಂದ ಕಿತ್ತ ಒಂದೊಂದೆ ಹೂ ದಾರಕ್ಕೆ ಬೆಸೆದು […]