ಉಪನಿಷತ್ತಿನ ವಿಶೇಷ.

ಸಹ ನೌ ಯಶಃ| ಸಹ ನೌ ಬ್ರಹ್ಮವರ್ಚಸಾಮ್|…… ಇದು ತೈತ್ತೀರಿಯ ಉಪನಿಷತ್ತಿನ ಮೂರನೇ ಅನುವಾಕದ ಪ್ರಾರಂಭದ ಮಾತುಗಳು. ತೈತ್ತೀರಿಯ ಉಪನಿಷತ್ತಿನ ಬಗೆಗಿನ ಕತೆಯೇ ಬಹಳ ಸ್ವಾರಸ್ಯವಾಗಿದೆ. ಕೃಷ್ಣಯಜುರ್ವೇದದಲ್ಲಿ ಬರುವ ಈ ಉಪನಿಷತ್ತನ್ನು ವ್ಯಾಸರು ವೈಶಂಪಾಯನರಿಗೆ ಹೇಳಿದ್ದು. ನಂತರ ವೈಶಂಪಾಯನರು ಇದನ್ನು ಯಾಜ್ಞವಲ್ಕ್ಯರಿಗೆ ಹೇಳಿದರಂತೆ. ಯಾವುದೋ ಒಂದು ವೈಮನಸ್ಸು ಬಂದಾಗ, ವೈಶಂಪಾಯನರು ನಾನು ಕಲಿಸಿದ ಈ ಉಪನಿಷತ್ತನ್ನು ವಾಪಸ್ಸು ಕೊಡು ಎಂದು ಕೇಳಿದಾಗ ಯಾಜ್ಞವಲ್ಕ್ಯರು ಕಲಿತದ್ದನ್ನು ವಾಂತಿ ಮಾಡಿದರಂತೆ. ಈ ಹೊರಬಂದ […]

Advertisements

ಜಗದೇಕರಾಷ್ಟ್ರ – (ಡಿವಿಜಿ – ರಾಜ್ಯಶಾಸ್ತ್ರ)

ಭೂಲೋಕವೆಲ್ಲ ಈಗ ಒಂದು ದೇಶವಾಗುತ್ತಿದೆ. ಒಂದು ರಾಜ್ಯಕ್ಕಾದ ಆಪತ್ತು, ಒಂದು ಸಮಾಜಕ್ಕಾದ ಕ್ಷೋಭೆ, ಎಲ್ಲ ರಾಜ್ಯಗಳಿಗೂ ಎಲ್ಲ ಸಮಾಜಗಳಿಗೂ ವ್ಯಾಪಿಸುತ್ತಿದೆ. ಈಗ ಕ್ಷೇಮವೆಂದರೆ ಏಕವ್ಯಕ್ತಿ ಕ್ಷೇಮವಲ್ಲ, ಏಕ ರಾಜ್ಯ ಕ್ಷೇಮವಲ್ಲ; ಹಾಗೆಯೇ ಶಾಂತಿಯೆಂದರೆ ಏಕವ್ಯಕ್ತಿ ಶಾಂತಿಯಲ್ಲ, ಏಕಸಮಾಜ ಶಾಂತಿಯಲ್ಲ. ಈ ಹೊತ್ತು ಶಾಂತಿಯೂ ಕ್ಷೇಮವೂ ಭೂಪ್ರದೇಶಗಳ ಗಡಿಮೇರೆಗಳನ್ನು ಮೀರಿ ಸಮಸ್ತ ದೇಶಗಳಿಗೂ ಒಂದೇ ಆಗಿದೆ. …. ರಾಷ್ಟ್ರವಿರಾಷ್ಟ್ರಗಳ ಸಂಬಂಧವು ಈ ಕಾಲದಲ್ಲಿ ಹೀಗೆ ಎಲ್ಲರ ಕ್ಷೇಮಸಮಾಧಾನಗಳಿಗೂ ಕ್ಷಣೇ ಕ್ಷಣೇ ಅತ್ಯಂತ […]

ತಾಯಂದಿರ ದಿನ.

ಹೆಚ್ಚಾಗಿ ಮದರ್ಸ್ ಡೇ ಎನ್ನುವ ಆಚರಣೆಯಲ್ಲಿ ತಾಯಿಯ ಕಷ್ಟನಷ್ಟಗಳನ್ನ, ಪ್ರೀತಿಯನ್ನ ಕೊಂಡಾಡುವುದೇ ಜಾಸ್ತಿ. ತಪ್ಪೇನಲ್ಲ, ತಾಯಿಯು ಮಗುವನ್ನು ಬೆಳೆಸುವ ಪ್ರಯತ್ನಗಳು, ಕೆಲಸಗಳು ಎಲ್ಲವೂ ಕಷ್ಟವೇ, ಆಕೆಗೆ ನಷ್ಟವೇ. ಅದನ್ನು ಒಂದು ಸುಕುಮಾರಭಾವದಿಂದ ತಾಯಿ ನಿರ್ವಹಿಸುತ್ತಾಳೆ. ಆದರೆ, ತಾಯಿಯ ಸೌಭಾಗ್ಯ ಎಂತಹದ್ದು? ಆಕೆಗೆ ಸಿಗುವಂತಹಾ ದೊಡ್ಡ ದೊಡ್ಡ ಆನಂದದ ಭಾಗ್ಯಗಳು ತಂದೆಗೂ, ಪುರುಷರಿಗೂ, ತಾಯಿಯಲ್ಲದವರಿಗೂ ಸಿಗುವುದಿಲ್ಲ. ತಾಯಿ ಆಗುವುದಕ್ಕೆ ಗರ್ಭಧಾರಣೆ ಮಾಡಿ ಮಗುವನ್ನು ಹೆರಬೇಕೆಂದಿಲ್ಲ, ಬರೀ ಹೆಣ್ಣಿನ ಮನಸ್ಸಿದ್ದರೆ ಸಾಕು ಎನ್ನುವ […]

Being alone is not loneliness

Getting away from everything for a while is goodIt makes you realize what you’re actually missing and who is missing youIt gives you clarity as to how to proceed with your life and an opportunity to set your priorities straight!!Being alone is not loneliness, it’s a tool!! ©soultxt

ನಮ್ಮಲ್ಲಿರುವ ಎರಡು ತಪ್ಪುಗಳು

ಶುಭಾ ಗಿರಣಿಮನೆ ಒಂದು ಸಮಾರಂಭಕ್ಕೋ, ಅಥವಾ ಸ್ನೇಹಿತರ ಜೊತೆಗೋ ಇದ್ದಾಗ ಇದೊಂದು ಮಾತು ಆಗಾಗ ಕೇಳುತ್ತೇವೆ. ಆ ದೇವರು ಒಳ್ಳೆಯವರಿಗೆ ಜಾಸ್ತಿ ಕಷ್ಟ ಕೊಡ್ತಾನೆ ಅಂತ. ಇನ್ನೊಂದು ನಾವು ಎಷ್ಟು ಒಳ್ಳೆತನದಲ್ಲಿ ಇದ್ದರೂ ನಮಗೆ ಯಾಕೆ ಈ ಜನ ಕೆಟ್ಟವನನ್ನಾಗಿ ಬಿಂಬಸ್ತಾರೋ ಅಂತ. ಇದು ಎಲ್ಲರ ಪ್ರಶ್ನೆ. ನಾವು ದೇವರ ಪೂಜೆ ಮಾಡ್ತೇವೆ. ದಾನ ಧರ್ಮಾದಿಗಳನ್ನು ಮಾಡ್ತೇವೆ. ನಮ್ಮ ಹಿರಿಯರನ್ನು ಚೆನ್ನಾಗಿ ನೋಡಿಕೊಂಡಿದ್ದೇವೆ. ಹಿರಿಯರು ಮಾಡಿಟ್ಟ ಸಂಪತ್ತಿಗಿಂತ ಈಗ ದುಪ್ಪಟ್ಟು […]