Being peaceful..

Being peaceful is being at-home with oneself Advertisements

Advertisements

ಟೊಂಯ್ಕ ಉವಾಚ

ಚೆನ್ನಾಗಿ ಮಳೆ ಬರಲಿ ಎಂದು ತೆಂಗಿನ ತೋಟದ ಮಾಲೀಕ ಆಶಿಸಿದ್ರೆ, ತಲೆ ಸುಡುವ ಬಿಸಿಲಾಗಲಿ ಎಂದು ಎಳನೀರು ಮಾರುವವನ ಹರಕೆ. ಜಗತ್ತೇ ಹೀಗೆ.

ಒಂದೇ ರೀತಿಯ ಎರಡು ಹೂಗಳು!

ಒಂದೇ ರೀತಿಯ ಎರಡು ಹೂಗಳುಬಳ್ಳಿಯಲಿತ್ತು, ಅರಳಿತ್ತು!ಒಂದನು ಕೊಯ್ದಳು ಮಲ್ಲಿಗೆ ಮಗಳುಇನ್ನೊಂದಲ್ಲಿಯೆ ಉಳಿದಿತ್ತು. ಕೊಯ್ದಿಹ ಹೂವಿಗೆ ದಾರವು ಸೇರಿಹೂವಿನ ಮಾಲೆ! ಹೆಸರಾಯ್ತುಬಳ್ಳಿಯೊಳುಳಿದ ಘಮಿಸುವ ಹೂವುಸಂಜೆಯವರೆಗೂ ನಗುತಿತ್ತು. ದೇವರಿಗಿಟ್ಟಳು, ಮುಡಿಯೊಳಗಿಟ್ಟಳುಹೂವಿನ ಮನಸಿನ ನಗೆಯವಳು!ರಾತ್ರಿಯ ಇಬ್ಬನಿ ಬಳ್ಳಿಯ ಹೂವಿನಮೆಲ್ಲನೆ ಹೀರುತ ಕೊಳೆಸಿದಳು. ಒಂದೇ ಭಾವದ ಜನರು ಬೆರೆತರೂಹೊಂದಿಕೆಯಾಗದೆ ಬದುಕಿದರು!ಜತೆಗೆ ಸೇರಿದರೂ, ಜೊತೆಗೆ ಬಾಳಿದರೂತೆರಳುವ ದಿನದಲಿ ಅಗಲಿದರು.

ಮಲ್ಲಿಗೆಯ ಹಾಡು

ಈ ದಾರಿಯಲಿ ಬರುವ ಜನಕೆಲ್ಲ ಗೊತ್ತಿಹುದು ಇಲ್ಲಿ ಹೂವಿನ ಹಾಡು ಕೇಳುತಿತ್ತು; ನಲ್ಲೆಗೋ ನಲ್ಲನಿಗೋ ಮಲ್ಲಿಗೆಯ ಮಾತುಗಳು ಮೆಲ್ಲ ಪಿಸುದನಿಗಳಲಿ ತಿಳಿಯುತಿತ್ತು. ನಸುಬೆಳಗು ಅರಳಿರುವ ಮಲ್ಲೆ ಹೂಬನದಿಂದ ಗಾಳಿಯಲಿ ಬೆರೆತು ಹೊಸ ಕಂಪು ನೀಡಿ, ಹಾದಿಹೋಕನ ಮನಸು ಪ್ರೀತಿಯಿಂದಲಿ ಬೆಳಗಿ ದಾರಿ ನಲಿವಾದುದು ನೋವು ದೂಡಿ. ಸಂಜೆಯಾಗುತ ಹೀಗೆ ನಲ್ಲನಲ್ಲೆಯರೆಲ್ಲ ಈ ದಾರಿಯನು ಹಿಡಿದು ನಡೆಯಬೇಕು ಮಲ್ಲೆ ಹೂವಿನ ಹಾಡು ಕೇಳಬೇಕೆನ್ನುವರೆ ಮೊದಲು ಹೂವಿನ ಬಳ್ಳಿ ಬೆಳೆಸಬೇಕು.