ಕೇದಗೆ/ಕೇತಕಿ/ಸುರಹೊನ್ನೆ ಎಂಬ ಬೆರಗು.

ಕೇದಗೆ ಎಂಬ ಹೂವುಗಳನ್ನು ನೋಡದವರು ಇದ್ದರೂ ಅದರ ಗಂಧವನ್ನು ಅರಿಯದವರು ಯಾರು? ಮಾದಕದ ಗಂಧವನ್ನು ಹರಡುವ ಈ ಹೂವುಗಳನ್ನು ಮಡಚಿ ಮುಡಿಯುವ ಸುಖವನ್ನು ಅನುಭವಿಸಿದವರು ಸ್ವಲ್ಪ ಹಿಂದಿನವರು. ಇಂತಹಾ ಕೇದಿಗೆಯ ಹೂವುಗಳು ಮುಳ್ಳಾದ ಪೊದೆಯಲ್ಲಿ ಅಡಗಿಕೊಂಡಿರುತ್ತವೆ. ಇವುಗಳನ್ನು ಕೊಯ್ಯುವುದೇ ಒಂದು ಸವಾಲು. ಆದರೆ ಇದರ ಇರವನ್ನು ಬಹುಬೇಗ ಕಂಡುಹಿಡಿಯಬಹುದು.. ಅಷ್ಟು ಗಾಢವಾದ ಗಂಧವಿದೆ. ಹೂಗಳು ಒಣಗಿದ್ದಾಗಲೂ ಬಹಳ ಸೊಗಸಾದ ಗಂಧ. “ಕೇತಕಿಯ ಬನಗಳಲಿ ಸಂಚರಿಸದಿರು ಚೆಲುವೆ, ಸರ್ಪಮಂದಿರವಂತೆ ತಂಪಿನೊಡಲು ” […]

Advertisements

ಯಾಕೆ ರನ್ನನ ಭೀಮಸೇನ ಕಾಡುತ್ತಾನೆ?

ಕೆಲವೊಂದು ಕಾವ್ಯದ ಭೀಮನನ್ನು ಓದಿಯೂ ಮಹಾಕವಿ ರನ್ನನ ಭೀಮನೇ ಮನಸ್ಸಿನಲ್ಲಿ ಉಳಿಯುತ್ತಾನೆ. ಕುಮಾರವ್ಯಾಸನ ಭೀಮನೂ ಭೀಮನೇ. ಪಾತ್ರವೈಭವದಲ್ಲಿ ಕುಮಾರವ್ಯಾಸನ ಭೀಮನಿಗೆ ಬಹಳವಾದ ಜಾಗ ಸಿಕ್ಕಿದೆ. ಹುಟ್ಟಿನಿಂದ, ಬಾಲಕ್ರೀಡೆಯ ಸಮಯದಲ್ಲಿ, ಹಿಡಿಂಬಾ ಪ್ರಕರಣ, ಬಕಾಸುರ ಪ್ರಕರಣ, ಕೀಚಕ.. ಇತ್ಯಾದಿಯಾಗಿ ಕುಮಾರವ್ಯಾಸನ ಭೀಮ ಬಹಳ ಚೆನ್ನಾಗಿ ಬೆಳೆಯುತ್ತಾನೆ. ಯುದ್ಧದ ಸಂದರ್ಭದಲ್ಲಿ (ಸುಪ್ರತೀಕ- ಆನೆಯನ್ನು ಕೊಲ್ಲುವ ಸಂದರ್ಭದ್ದು) ಮಾತ್ರ ಸೊಗಸಾಗಿದೆ ಅಲ್ಲಿ. ರನ್ನನ ಭೀಮನು ಪ್ರತಿಜ್ಞೆಗಳಿಂದ, ಮಾತುಗಳಿಂದ ಬಹಳವಾಗಿ ವೀರ. ಸಾಹಸಭೀಮ ವಿಜಯಂ ಎನ್ನುವ […]

ಅರೆಬಿರಿದ ಪಾರಿಜಾತ

ಅರೆಬಿರಿದ ಪಾರಿಜಾತಬರಹೇಳು ನಲ್ಲೆಯನ್ನುಮೊಗ್ಗೊಡೆದ ಜಾಜಿಮಲ್ಲೆಇರಹೇಳು ಅವಳನಿನ್ನು! ಬಿರಿದಂತೆ ಪಾರಿಜಾತಅಳುಕೇಕೊ ಮೂಡುತಿಹುದುಅರಳಿರುವ ಮಲ್ಲೆಹೂವುಸಂಜೆಗೇ ಮುದುಡಬಹುದು ಇರಲೆನ್ನ ಪಾರಿಜಾತನಸುನಗುತ ಎಂದೂ ಹೀಗೆಸೊಗಸೆನ್ನ ಮಲ್ಲೆಹೂವುಉಳಿಯುವುದು ಗಂಧ ಜೊತೆಗೆ.

ಸೊಗಸಾದ ಒಂದು ಕಗ್ಗ

ಕನ್ನಡ ನಾಡಿನ ಅತ್ಯಂತ ದೊಡ್ಡ ಸೌಭಾಗ್ಯವೆಂದರೆ ಡಿವಿಜಿಯವರು ಬರೆದ ಮಂಕುತಿಮ್ಮನ ಕಗ್ಗವನ್ನು ಹೊಂದಿರುವುದು. ಕನ್ನಡದ ಭಗವದ್ಗೀತೆಯೆಂದೇ ಉದ್ಘೋಷಿಸಲ್ಪಟ್ಟ ಚೌಪದಿಗಳ ಸಂಗ್ರಹ. ವಸ್ತು, ವೇದಾಂತ, ವಿಷಯ ಎಲ್ಲವೂ ಸಮಗ್ರವಾಗಿ ನಾಲ್ಕು ಸಾಲುಗಳಲ್ಲಿ ಹಿಡಿದಿಟ್ಟುಕೊಂಡು, ಓದಿದಂತೆ ಒಂದೊಂದು ಚೌಪದಿಯೂ ಒಂದೊಂದು ಲೇಖನವಾಗುವಷ್ಟು ವಿಸ್ತಾರವನ್ನು ಹೊಂದಿದೆ ಎಂದರೆ ಅತಿಷಯೋಕ್ತಿಯಲ್ಲ. ಎಲ್ಲಿಯೂ ಗೊಂದಲವಿಲ್ಲ. ಯಾವುದೂ ಅಪೂರ್ಣವಲ್ಲ. ಎಲ್ಲಾ ವಿಚಾರಗಳಿಗೂ ಉಪಸಂಹಾರವನ್ನು ಕೊಡುವಂತಹ ಕಗ್ಗ. ಪ್ರತಿದಿನ ಎಲ್ಲಾದರೂ ಒಂದು ಕಡೆ ಕಗ್ಗದ ಒಂದಾದರೂ ಸಾಲನ್ನು ನೋಡಬಹುದು. ವಾರ್ತಾಪತ್ರಿಕೆಗಳಲ್ಲಿ, […]

ಬದುಕಿನ ತಿರುವು.

ನಡೆವ ದಾರಿಯ ಬದಿಗೆ ಇರುವಂತ ಕೊನೆಯ ಮನೆಕೊನೆಯೆಂದರೇನೆಂದು ಹೇಳಲಿಲ್ಲಕೊನೆಯೆನುವ ಮಾತಿನಲಿ ಒಂದಷ್ಟು ಮರುಗಿದೆನುದಾರಿ ನಡೆಯುವುದೆಂತು ತಿಳಿಯಲಿಲ್ಲ. ಇಲ್ಲೊಂದು ಹೊಸಹೂವು ಹುಟ್ಟಿಹುದು, ಕೊಯ್ಯಲೇಘಮವಿಹುದೆ ಮೂಸಲೇ? ಬಿಟ್ಟು ಬಿಡಲೆ?ನಿನ್ನೆ ಮೂಡಿದ ಬೀಜ ಇನ್ನೊಂದು ದಿನದಲ್ಲಿಮೊಳಕೆಯೊಡೆಯುವುದೆಂದು ಹೆಮ್ಮೆ ಪಡಲೆ? ದಾರಿಬದಿಯಲಿ ಹುಣಸೆ ಬೀಜ ಮರವಾಗಿಹುದುಮತ್ತೊಂದು ಕೊಂಬೆಯಲಿ ಬಂದಣಿಕೆಯುತೇಗಿ ತೇಲುವ ತೊಗಟೆ ನಾಳೆ ಮಣ್ಣಾಗುವುದುಎಂಬ ಕವಿಮಾತಿಗೆ ಪೊಳ್ಳುಕಿವಿಯು. ಬಂತು ಸವಾರಿಯಿದು, ಯಾರ ಹರಕೆಗೆ ಬಲಿಯುಎಂದೆಲ್ಲ ದನಿಗಳದೊ ಕೇಳುತಿಹುದುಮನೆಗೆ ಹೋಗಲೆ ನಾನು? ಬಾಗಿಲನು ಬಡಿಯಲೇಯಾರು ತೆಗೆಯುವರೆಂಬ ಶಂಕೆ […]