ಕಾಲ್ಸಂಕವೂ ಚಪ್ಪಲಿಯೂ

ಒಂದಾನೊಂದು ಊರಿನಲ್ಲಿ ಸಣ್ಣ ಹಳ್ಳಕ್ಕೆ (ತೋಡು) ಅಡ್ಡಲಾಗಿ ಈಚಲುಮರದ ಸಂಕವೊಂದು(ಸೇತುವೆ) ಇತ್ತು. ಸಂಕದ ಎರಡೂ ಬದಿಗೆ ಮರದ ಗೇಟುಗಳು (ತಡಮ್ಮೆ) ಬಹಳ ಚೆನ್ನಾಗಿ ಹೊಂದಿಕೊಂಡು, ಸಂಕದಲ್ಲಿ ನಡೆಯುವವರು ಮನುಷ್ಯಪ್ರಾಣಿಗಳಾಗಿರಬೇಕು ಎನ್ನುವುದನ್ನು ಸಾರಿ ಹೇಳುತ್ತಿದ್ದವು. ಬರೀ ನಾಲ್ಕೈದು ತಿಂಗಳ ಉಪಯೋಗಕ್ಕಾಗಿ ಬಳಸುವ ಈ ಸಂಕ, ಪ್ರತೀ ವರ್ಷವೂ ಬೇರೆ ಬೇರೆ ಮರಗಳಿಂದ ಅಲಂಕೃತವಾಗುತ್ತಿತ್ತು. ಪೂರ್ವಜನ್ಮದ ಸುಕೃತದ ಫಲವಾಗಿ ಕೆಲವೊಂದು ವರ್ಷ ಒಳ್ಳೇ ಮರಗಳೂ, ಪಾಪದ ಪ್ರಾಯಶ್ಚಿತ್ತಕ್ಕಾಗಿ ಟೊಳ್ಳು ಮರಗಳೂ ಸಂಕವಾಗಿ ಜನರ […]

Advertisements

ಮನಸೆಂಬ ಮಾಯದ ಕನ್ನಡಿ – ಬಿಂಬ ೭

ಅಮ್ಮ… ಶಾಮತ್ತೆ ಬರ್ತಿದ್ದಾರಾ ? ಚೈತ್ರ ಅಮ್ಮನ ಕೇಳಿದಳು. ಅದ್ಯಾಕೋ ಚೈತ್ರಂಗೆ ಶ್ಯಾಮಲತ್ತೆ ಅಂದ್ರೆ ಒಂಥರಾ. ಅಮ್ಮನ ಅಣ್ಣನ ಹೆಂಡತಿ, ಸೋದರತ್ತೆ ಅವರು. ಆ ಕಾಲದಲ್ಲಿ ಅತ್ಯಂತ ಸುಂದರಿ. ಅಚ್ಚ ಹಾಲು ಬಿಳುಪು ಬಣ್ಣ. ದೊಡ್ಡ ಅನುಕೂಸ್ಥರ ಮನೆಯವರು. ಎಲ್ಲವೂ ಸೇರಿ ಜಂಭವೂ ಹಾಗೇ ಇತ್ತು ! ಚೈತ್ರ ಅವಳ ಅಪ್ಪನ ಥರ ! ಅಮ್ಮನ ಅಚ್ಚ ಬಣ್ಣ ಬಂದಿಲ್ಲ. ಸ್ವಲ್ಪ ಎಣ್ಣೆಗಪ್ಪು ಬಣ್ಣ. ಆದರೆ ಲಕ್ಷಣವಾದ ಹೆಣ್ಣುಮಗಳು. ಶ್ಯಾಮಲತ್ತೆಗೆ […]

ಮನಸೆಂಬ ಮಾಯದ ಕನ್ನಡಿ – ಬಿಂಬ ೬

ರೂಮಿಗೆ ಕಾಲಿಟ್ಟ ನಾರಾಯಣರಾಯರು ಒಂದು ಕ್ಷಣ ಅವಾಕ್ಕಾದರು ! ಮಂಚದ ಸುತ್ತ ಹೂವಿನ ಅಲಂಕಾರ, ಸಣ್ಣನೆ ಲೈಟ್, ಊದುಬತ್ತಿಯ ಘಮ ತುಂಬಿರೋ ರೂಮು. ಮಕ್ಕಳ ಕೆಲಸವೇ ಇದು ! ಕೋತಿ ಮುಂಡೇವು ! ನಗುತ್ತಲೇ ಬೈದುಕೊಂಡರು. ಹಾಗೇ ದಿಂಬಿಗೆ ಒರಗಿಕೊಂಡರು. ಅರವತ್ತನೇ ವರ್ಷದ ಶಾಂತಿ ಇವತ್ತು. ಅದೆಷ್ಟು ಸಂಭ್ರಮ ! ಶಾಂತಾ ಅದೆಷ್ಟು ಮುದ್ದಾಗಿ ಕಾಣ್ತಿದ್ದಳು ಇವತ್ತು ! ಮುಖದಲ್ಲಿ ನಸುನಗೆ ಮೂಡಿತು. ಭಗವಂತನ ದಯೆ ನಮ್ಮ ಮೇಲೆ ಸಾಕಷ್ಟಿದೆಯೇನೋ […]

ಅಮ್ಮ ಹೇಳಿದ ಜಯನ ಕತೆ

ಬೆಂಗಳೂರಿಂದ ಮನೆಗೆ ವಾಪಸ್ಸು ಹೋಗುತ್ತಿರುವ ಖುಷಿ. ಹೆಚ್ಚಾಗಿ ಎಲ್ಲರೂ ವಾಪಸ್ಸು ಹೋಗುವುದುಸಾಮಾನ್ಯವಾದರೂ ನಾನು ಹಾಗಲ್ಲ. ಬೆಂಗಳೂರಿಗೆ ಬಂದುಸುಮಾರು ಒಂದು ವರುಷವೂ ಐದಾರು ತಿಂಗಳುಗಳೂಕಳೆದಾದ ಮೇಲೆ ಈಗ ವಾಪಸ್ಸು ಹೋಗುತ್ತಿರುವುದು. ಸಮಯ ಸಿಕ್ಕಿರಲಿಲ್ಲ ಎನ್ನುವುದಕ್ಕಿಂತ ಕೆಲಸದ ಒತ್ತಡದಿಂದಪ್ರತಿ ಶನಿವಾರವಾಗಲೀ ಆದಿತ್ಯವಾರವಾಗಲೀ ಊರಿಗೆಹೋಗುವ ಯೋಚನೆ ಬಂದರೂ ಆಗುವುದಿಲ್ಲ. ಏನೋಒಂದು ಸಬೂಬು ಹೇಳಿ ಮಲಗುವುದೋ ಇಲ್ಲವೇ ಸಣ್ಣತಿರುಗಾಟವೋ ಮಾಡುವುದನ್ನು ಬಿಟ್ಟರೆ ಊರಿಗೆ ಹೋಗುವದೊಡ್ಡ ಆಸೆ ಇರುತ್ತಿರಲಿಲ್ಲ. ಊರಿನ ಆತ್ಮೀಯ ಸ್ನೇಹಿತರೆಲ್ಲಾ ಇಂದು ನೆನಪಾಗುತ್ತಿದ್ದಾರೆ, ಹೇಗಿದ್ದಾರೋ? […]

ಎರಡು ದಿಂಬಿನ ಕತೆ

ಒಂದನೇ ದಿಂಬು :ಯಾಕೆ ಇವ್ಳು ಅರ್ಥ ಮಾಡ್ಕೊಳ್ಳಲ್ಲ -ಮೊನ್ನೆ ತಾನೇ ಹೋಗ್ಬಂದಿದ್ದೀಯಲ್ಲೇ? ಮತ್ತೆ ಯಾಕ್ ಹೋಗ್ತಾ ಇದೀಯಾ? ಅಯ್ಯೋ, ನಿಮ್ಗೊತ್ತಾಗಲ್ಲ. ಹೋಗ್ಲೇ ಬೇಕು. ಸ್ವಲ್ಪ ಅರ್ಜೆಂಟ್ ಕೆಲ್ಸ ಇದೆ ಊರಲ್ಲಿ. -ಅಲ್ಲಾ, ನಂಗೆ ಇಲ್ಯಾರಿದ್ದಾರೆ? ಅಯ್ಯೋ.. ಹತ್ವರ್ಷ ಒಬ್ರೇ ಇದ್ರಿ, ಈಗೇನ್ ಒಂದ್ ದಿನಕ್ಕೆ ಹೀಗೆಲ್ಲಾ ಹೇಳೋದು? -ಅದಲ್ವೇ, ನೀನು ಇಲ್ದಿದ್ರೆ ಏನಾಗಲ್ಲ. ಊಟಕ್ಕೆ ಸಾಂಬಾರು, ಸಾರು ಏನಾದ್ರು ಮಾಡೋದಕ್ಕೆ.. ಹೇಳ್ದೆ. ಅದ್ಕೇನು, ಹೇಳ್ಕೊಡ್ತೀನಿ. -ಹ್ಮ್ಂ, ಹೇಳು. ಒಂದೂವರೆ ಚಮಚ […]