ಹೂವು ಅರಳುವ ಮುನ್ನ!

ಮಲ್ಲಿಗೆಯ ಮೊಗ್ಗುಗಳು ಅರಳಿಲ್ಲವೆಂದುನುತಸಿಡುಕಿದರೆ ಹೂವಾಯ್ತೆ, ಗಂಧ ಬಂತೆ?ಅವಳ ದಾರಿಯ ಕಾದು ಕುಳಿತ ಪ್ರೇಮಿಯ ಜಗಕೆಮುನಿಸು ಬಂದರೆ ಪ್ರೇಮ ಉಳಿಯದಂತೆ! ತಡವಾದರೇನಂತೆ ಬಂದಳಲ್ಲಾ ಎನುತಅಡಗಿಸಿಹ ಹೂಗಳನು ನೀಡಬೇಕು;ಬೇಗ ಹೋಗುವೆನೆಂಬ ಅವಳ ಮಾತಿನ ನಡುವೆಹೊಸತು ಪದಗಳ ಪದ್ಯ ಕಟ್ಟಬೇಕು. ಕತ್ತಲಿನ ಕಾರ್ಮೋಡ ಸುತ್ತಲೂ ಬಂದಾಗನಗೆಯ ಮಿಂಚುಗಳನ್ನು ಹರಡಬೇಕು;ತೊರೆವ ಕ್ಷಣದಲಿ ಕಣ್ಣು ಕತ್ತಲೆಯೆ ಆಗುವುದುಪ್ರೇಮದಲಿ ಮೈಮರೆತು ನೆನೆಯಬೇಕು. ಮಲ್ಲಿಗೆಯು ಅರಳುವುದು ತಡವಾದರೇನಂತೆಹಿತವಾದ ಭಾವಗಳು ತಾನೆ ಪ್ರೇಮ?ಸಹಜದಲಿ ದೊರೆತದ್ದು ಮನುಜ ಪುಣ್ಯವು ತಾನೆಹೊಸಕಿದರೆ ಉಳಿದೀತೆ ನಿತ್ಯಕಾಮ! […]

Advertisements

ಭಾಷೆಯ ಬಳಕೆ ತಂದ ಪೇಚು.

ಹೀಗೇ ಒಂದು ದಿನ ನಾನು ನನ್ನ ಸ್ನೇಹಿತೆ ಇಬ್ಬರೂ ಹುಬ್ಬಳ್ಳಿಯಲ್ಲಿ ಶಾಪಿಂಗ್ ಮಾಡೋಣ ಅಂತ ಹೊರಟೆವು. ಒಂದಷ್ಟು ತಿರುಗಾಡಿದ ಮೇಲೆ ಕಡೆಗೆ ಒಂದು ಅಂಗಡಿ ಹೊಕ್ಕೆವು. ಅದು ನಮಗೆ ಬೇಕಾದ ವಿನ್ಯಾಸ ಬಣ್ಣ ಮತ್ತು ಗುಣಮಟ್ಟ ಎಲ್ಲಾ ಇರೋ ಸೀರೆ ಅಂಗಡಿ ಆಗಿತ್ತು. ಎಲ್ಲ ಸೀರೆಗಳನ್ನು ಒಂದಾದ ನಂತರ ಇನ್ನೊಂದು ಮತ್ತೊಂದು ತಗೆಸಿ ನೋಡಿದೆವು. ಹೆಣ್ಣು ಮಕ್ಕಳ ಸೀರೆ ವ್ಯಾಪಾರದ ಬಗ್ಗೆ ಕೇಳಬೇಕಾ. ಸುಮಾರು ಹೊತ್ತಾದ ಮೇಲೆ ನನ್ನ ಗೆಳತಿ […]

ನಳನು ಹೇಳಿದ ಕತೆ

ಮಗನೊಡನೆ ಪಂದ್ಯದಲಿ ಸೋತಾಯ್ತು ಸುಮ್ಮನೆಗೆದ್ದವನಿಗೊಂದು ಕತೆ ಹೇಳಬೇಕಂತೆ;ನನ್ನದೇ ಕತೆಯನ್ನು ಹೇಳುವೆನು ಅವನಿಗೆಹಳೆಯ ನೆನಪಲಿ ಮಿಂದು ಮಣಿಯುವಂತೆ ಹಂಸಗಳ ದೌತ್ಯದಲಿ ಮದುವೆಯಾಯಿತು ನನಗೆದಮಯಂತಿ ಎಂಬವಳು ನನ್ನ ಮಡದಿ;ದೇವತೆಗಳೈವರನು ತಳ್ಳಿ ಹಾಕಿದಳವಳುದೂಡಿ ಬಂದಳು ನಾಕ ಸಮ್ಮೋಹದಿ! ಕಲಿಗೆ ಏನಾಯಿತೋ ಪುಷ್ಕರನ ಕಾಡಿಸಿದಅವನಿಂದ ಪಗಡೆಯಲಿ ಸೋಲಾಯಿತು.ರಾಜ್ಯ ಹೋಗಲಿ ಮತ್ತೆ ವೈಭೋಗವೂ ನಡೆಯೆಹೆಂಡತಿಯೆ ಪಣವೆನ್ನೆ ಕೋಪ ಬಂತು. ಉಟ್ಟಿರುವ ಬಟ್ಟೆಯಲೆ ದಮಯಂತಿ ಕೈ ಹಿಡಿದುಕಾನನದ ದಾರಿಯಲಿ ನಡೆಯುತಿದ್ದೆ;ಹಂಸಗಳು ವಸ್ತ್ರವನು ಎಳೆದು ನಭಕೇರಿದವುಮಾನಿನಿಯ ಸೆರಗೆಳೆದು ಮಾನ ಹೊದ್ದೆ! […]

ಹರಟೆಮಲ್ಲರ ಹರಟೆ

ಹರಟೆಮಲ್ಲರ ತಂಡ ದೇಗುಲದ ಜಗಲಿಯಲಿಸಂಜೆಯಲಿ ಸೇರುವರು ಮಾತಿಗಾಗಿ;ಊರು ಪರವೂರುಗಳ ಸುದ್ಧಿಯನು ಬೆರೆಸುವರುಸುಮ್ಮನುರಿವುದು ಮಾತು ತಣ್ಣಗಾಗಿ. ದೇಗುಲದ ಅರ್ಚಕರು ಪೂಜೆ ಮಿತಿಮಾಡುವರುಇವರ ಮಾತಿನ ಸುಳಿಗೆ ಮೋಹಗೊಂಡುನಂದಿಬಟ್ಟಲ ಹೂವು ಹಿತವಾಗಿ ಅರಳುವುದುಈ ಮಾತನೆಲ್ಲವನು ಹೀರಿಕೊಂಡು! ಒಣಮರದ ಎದುರಿದ್ದ ಮನೆಯ ಆ ಹಿರಿಮಗಳುಗಾಡಿಯಲಿ ಓಡಾಡುತಿದ್ದ ಬಗೆಯಹೊಸದಾಗಿ ಬಂದಿರುವ ದಂಪತಿಗಳೂ ಸೊಗಸುಗಂಡ ಬಲು ಜೋರಿಹನು ಕುಡುಕರೊಡೆಯ! ದೂರದೂರಿನ ರೈತ ಬೆಳೆದಿದ್ದ ಕುಂಬಳವನಮ್ಮೂರ ಜನರೂನು ಬೆಳೆಯಬೇಕು;ಹೊಸರೋಗ ಎಂದೇನು ಕಳವಳವೆ ಬೇಕಿಲ್ಲನಿಂಬೆರಸ ಬೇವುಗ‌ಳ ತಿನ್ನಬೇಕು. ಚೀಟಿದುಡ್ಡೆಲ್ಲವೂ ಚಿಟ್ಟೆಯಂತೆಯೆ ಹಾರಿಹೊಸದು […]

ನವಮಾಸ ಹೊತ್ತವಳು ಹೆತ್ತಾಗ!

ತಿಂಗಳಾಯಿತು ಮುಂದು, ಅನುಮಾನದಲಿ ಸೊಗಸುಕಳವಳವು ದಿನವುರುಳೆ, ಹಗಲೆ ಇರುಳು;ಇನ್ನೇನು ಇರುವಿಕೆಯ ಒಪ್ಪಿರುವ ಗಳಿಗೆಯಲಿಒಂದು ತಿಂಗಳು ಎಂದು ಹೇಳಿದವಳು! ಏನು ತಿನ್ನುವುದಿನ್ನು? ತಿನ್ನಬಾರದು ಏನು?ಹೇಗೆ ನಡೆದರೆ ಚೆನ್ನ ಎನುತ ಭಯದಿ;ಎರಡು ತಿಂಗಳಿನಲ್ಲಿ ಬದಲಾದಳೋ ಹುಡುಗಿಅಂಜಿಕೆಯ ಭರವಸೆಯ ಉಳಿಸಿ ಮನದಿ! ಮೂರು ತಿಂಗಳು ತುಂಬಿ ಜಗವೆಲ್ಲ ತಿಳಿ ಮಂಜುಊಟ ಕರಗದು, ಹುಳಿಯ ತೇಗು ಗೋಜು;ಇದಕೆ ಉಪ್ಪಿಲ್ಲವೋ, ಇದು ಹುಳಿಯ ಹಿಡಿದಿಲ್ಲಎಂದೆನುವ ಮಾತುಗಳು ಬಹಳ ತೇಜು ನಾಲ್ಕರಲಿ ಬಹಳಿಲ್ಲ, ಯಾವ ನಿಶ್ಚಯವಿಲ್ಲಎಲ್ಲವೂ ಸೋಜಿಗವು ಕಣ್ಣ […]