ರಾಗದ ಪಾದಗಳಿಗೆ

ಅರಳಿಮರದಲಿ ಹೀಗೆ ಪಲ್ಲವಿಸಿ ಹೊಸ ಚಿಗುರುಎಲ್ಲೆಡೆಯು ತೋರುವುದು ರಾಗವನ್ನ;ಮರವನೇರಿದೆಯೇನೆ ಓ ನನ್ನ ಸೊಗಸವಳೆನಿನ್ನ ಪಾದಕೆ ಹೀಗೆ ಬಂತೆ ಬಣ್ಣ? ಮರಿಗಿಳಿಯು ಹಾ-ಯೆಂದು ಬಾಯ್ತೆರದು ಕುಳಿತಿಹುದುತಾಯ್ ತರುವ ಕುಕ್ಕಿನಲಿ ಇರಿಸಿ ಮನಸುಗಿಳಿಯ ಮುದ್ದಿಸಿ ಬಂದೆಯೇ ನನ್ನ ಅರಗಿಣಿಯೆ?ಮೈ ಕೆಂಪಗೆಂತಾಯ್ತು ಎಂದು ತಿಳಿಸು ಹಗಲಿನಾಟವ ಮುಗಿಸಿ ತೆರಳಿದನು ದಿನಕರನುಪಶ್ಚಿಮದ ಬೆಟ್ಟದಲಿ ಅಡಗುತಿಹನು;ಕಣ್ಣು ಮುಚ್ಚಾಲೆಯಲಿ ನಿನ್ನ ಪಾಲಿಹುದೇನೆ?ಆ ಬಣ್ಣ ಸೋಕಿದುದೆ ಹೇಳು ನೀನು! ಚಂದ್ರ ತಂಪೆರೆದಾನು ಎಂದೆನುವ ಆಸೆಯಲಿಕಳೆದ ನಿನ್ನೆಯ ನೆನಪು ಹೆಚ್ಚಿತೇನೆ!ಆ ನೆನಪು […]

ಬದುಕಿನ ತಿರುವು.

ನಡೆವ ದಾರಿಯ ಬದಿಗೆ ಇರುವಂತ ಕೊನೆಯ ಮನೆಕೊನೆಯೆಂದರೇನೆಂದು ಹೇಳಲಿಲ್ಲಕೊನೆಯೆನುವ ಮಾತಿನಲಿ ಒಂದಷ್ಟು ಮರುಗಿದೆನುದಾರಿ ನಡೆಯುವುದೆಂತು ತಿಳಿಯಲಿಲ್ಲ. ಇಲ್ಲೊಂದು ಹೊಸಹೂವು ಹುಟ್ಟಿಹುದು, ಕೊಯ್ಯಲೇಘಮವಿಹುದೆ ಮೂಸಲೇ? ಬಿಟ್ಟು ಬಿಡಲೆ?ನಿನ್ನೆ ಮೂಡಿದ ಬೀಜ ಇನ್ನೊಂದು ದಿನದಲ್ಲಿಮೊಳಕೆಯೊಡೆಯುವುದೆಂದು ಹೆಮ್ಮೆ ಪಡಲೆ? ದಾರಿಬದಿಯಲಿ ಹುಣಸೆ ಬೀಜ ಮರವಾಗಿಹುದುಮತ್ತೊಂದು ಕೊಂಬೆಯಲಿ ಬಂದಣಿಕೆಯುತೇಗಿ ತೇಲುವ ತೊಗಟೆ ನಾಳೆ ಮಣ್ಣಾಗುವುದುಎಂಬ ಕವಿಮಾತಿಗೆ ಪೊಳ್ಳುಕಿವಿಯು. ಬಂತು ಸವಾರಿಯಿದು, ಯಾರ ಹರಕೆಗೆ ಬಲಿಯುಎಂದೆಲ್ಲ ದನಿಗಳದೊ ಕೇಳುತಿಹುದುಮನೆಗೆ ಹೋಗಲೆ ನಾನು? ಬಾಗಿಲನು ಬಡಿಯಲೇಯಾರು ತೆಗೆಯುವರೆಂಬ ಶಂಕೆ […]

ಬಾಳು-ಬಳ್ಳಿ

ದೂರದಿಂದಲೇ ತೂರಿಬಂದಿರುವ ಗಾಳಿಗೊಂದು ಗಂಧ ಪಾರಮಾರ್ಥಿಕವೊ ಸ್ವಾರ್ಥ,ಭಾವುಕವೊ ತಿಳಿಯದಾದ ಬಂಧ. ಕಳಚಿಬಿದ್ದಿರುವ ಎಳಸು ಬಳ್ಳಿಯಲಿ ಹೊಸದು ಚಿಗುರು ಕಂಡೆ ಬಳಸಿ ಬದುಕುವುದು ಬದುಕಿ ಅರಳುವುದು ಮಲ್ಲೆಯೊಂದು ಬಂಡೆ! ನೆರವ ನೀರೆರೆದು ಮೀರಿ ಪೋಷಿಸುವ ದಾರಿಯಿರಲು ಸರಸ ಮೆರೆವ ಆಸೆಯಲಿ ಪೊರೆವ ಹಮ್ಮಿನಲಿ ತೋರಬಹುದು ಕ್ಲೇಶ ಫಲವ ಹುಡುಕುತಲಿ ಮಲ್ಲೆ ಬೆಳೆಸಿದರೆ ಮೂಡಬಹುದೆ ಹೀಚು? ನಿಲದ ಹೂವುಗಳ ಸ್ವಾದ ಬೆಳೆಯದಿರೆ ಬದುಕದೊಂದು ಪೇಚು! ಉರಿದು ಕುಸಿದು ತನು ತಣ್ಣಗಾಗಲದು ಬೂದಿಯೆಂಬ ಹೆಸರು […]

ಭಾವಯಜ್ಞ

ತವರಿನಲಿ ಯಾಗವಿದೆ ಎನುವ ಸುದ್ದಿಯ ಕೇಳಿ ಓಡಿ ಬಂದಳು ಸತಿಯು ಹೇಳಲೆಂದು ಕರೆಯು ಇಲ್ಲವದೇಕೆ, ಎನುವ ಯೋಚನೆ ಬೇಕೆ? ಏಕಾಂಗಿಯಾದರೂ ಪೋಪೆನೆಂದು ಮೆಲುನುಡಿಯ ಮೆಲ್ಲುತಲಿ ಲಲನೆಯಾಡಿದ ನುಡಿಯು ಪರಶಿವನ ವರಕಿವಿಗೆ ಬೀಳುತಿತ್ತು ಹೋಗಿ ಬಾ ಎನ್ನಲೇ, ಸಾಗಿ ಜೊತೆ ನಾ ಬರಲೆ? ಎದೆಯ ಬೀಗವ ವಿಧಿಯು ಜಡಿಯುತಿತ್ತು ಒಂದು ದಿನ ತಡೆದುಕೋ, ನಿಲ್ಲು ಸಂಜೆಯವರೆಗೆ, ಅಲ್ಲದಿರೆ ಅರೆಘಳಿಗೆ ಸುಮ್ಮನುಳಿಯೆ ಎನುವ ಮಾತುಗಳೆಲ್ಲ ಎದೆಯಲುಳಿಯಿತು ಹೇಗೆ ಮೌನ ಶಾಂತಿಯದೆಂತು? ಫಲವು ಕಹಿಯೆ […]

ಬೆಳಕಿನಿಂದ ಕತ್ತಲೆಯೆಡೆಗೆ.

ಅನುದಿನವು ಮನದೊಳಗೆ ಸೆಳೆಯುತಿದೆ ನೋಡು ಬೆಳಕೆನುವ ಪಾಡು ಕತ್ತಲಿನ ಸೆರೆಯಲ್ಲಿ ಕರಗಿಹುದು ಹಾಡು, ಪದಗಳದೆ ಜಾಡು. ಇರುಳು ಕಳೆಯಿರಿ ಎನುತ ಹಗಲು ಚಿಂತೆಯ ಕೊಟ್ಟೆ ಮೌನ ಕೊರೆಯಲು ಮಾತು ಬುತ್ತಿಗಳನು ಶಾಂತ ನಿದ್ದೆಯ ತೊರೆದು ಎಚ್ಚರಿಕೆ ಎನ್ನುತಲಿ ಬೆಳಕನುರಿಸುವ ಹುಚ್ಚು ಬಯಕೆಗಳನು ಬೆಳಕು ಹೆಚ್ಚಿಸುವಾಸೆ , ಮೇಣ ಬತ್ತಿಯದೊಂದು ಎರಡು ಕಡೆಗಳಿಗೀಗ ಬೆಂಕಿಯಿಟ್ಟು ಬೇಗ ಕರಗಿತು ಮೇಣ, ಬೆಳಕಿಗಿಲ್ಲವು ತ್ರಾಣ ಕುಳಿತಿಹೆನು ಕತ್ತಲಲಿ ಕಣ್ಣನಿಟ್ಟು ಬೆಳಕು ಕತ್ತಲೆಯೆನುವ ತರ್ಕ ಸಂತೆಯ […]