ಹೂವು ಅರಳುವ ಮುನ್ನ!

ಮಲ್ಲಿಗೆಯ ಮೊಗ್ಗುಗಳು ಅರಳಿಲ್ಲವೆಂದುನುತಸಿಡುಕಿದರೆ ಹೂವಾಯ್ತೆ, ಗಂಧ ಬಂತೆ?ಅವಳ ದಾರಿಯ ಕಾದು ಕುಳಿತ ಪ್ರೇಮಿಯ ಜಗಕೆಮುನಿಸು ಬಂದರೆ ಪ್ರೇಮ ಉಳಿಯದಂತೆ! ತಡವಾದರೇನಂತೆ ಬಂದಳಲ್ಲಾ ಎನುತಅಡಗಿಸಿಹ ಹೂಗಳನು ನೀಡಬೇಕು;ಬೇಗ ಹೋಗುವೆನೆಂಬ ಅವಳ ಮಾತಿನ ನಡುವೆಹೊಸತು ಪದಗಳ ಪದ್ಯ ಕಟ್ಟಬೇಕು. ಕತ್ತಲಿನ ಕಾರ್ಮೋಡ ಸುತ್ತಲೂ ಬಂದಾಗನಗೆಯ ಮಿಂಚುಗಳನ್ನು ಹರಡಬೇಕು;ತೊರೆವ ಕ್ಷಣದಲಿ ಕಣ್ಣು ಕತ್ತಲೆಯೆ ಆಗುವುದುಪ್ರೇಮದಲಿ ಮೈಮರೆತು ನೆನೆಯಬೇಕು. ಮಲ್ಲಿಗೆಯು ಅರಳುವುದು ತಡವಾದರೇನಂತೆಹಿತವಾದ ಭಾವಗಳು ತಾನೆ ಪ್ರೇಮ?ಸಹಜದಲಿ ದೊರೆತದ್ದು ಮನುಜ ಪುಣ್ಯವು ತಾನೆಹೊಸಕಿದರೆ ಉಳಿದೀತೆ ನಿತ್ಯಕಾಮ! […]

Advertisements

ಒಂದಿಷ್ಟು ಮಂದಹಾಸ.

ಯೋಚನೆ ಮಾಡಿದಾಗ ಮಂದಹಾಸ ತರುವಂತಹಾ ಸಣ್ಣ ಸಣ್ಣ ವಿಷಯಗಳು ಬಹಳ ಇರುತ್ತವೆ. ಆದರೆ ಇವು ನಮ್ಮ ದೈನಂದಿನ ಬದುಕಿನಲ್ಲಿ ಏನೂ ಅರಿವಿರದಂತೆ ನಡೆಯುವ ಘಟನೆಗಳು. ಕೆಲವೊಂದನ್ನು ಹೇಳ್ತೇನೆ, ನಿಮ್ಮಲ್ಲಿಯೂ ಇಂತಹ ಅನುಭವಗಳಿದ್ದರೆ ಹಂಚಿಕೊಳ್ಳಿ. ೧. ಒಳ್ಳೇ ಇಷ್ಟದ ಉಪ್ಪಿನಕಾಯಿಯನ್ನು ಚಮಚದಿಂದ ತಟ್ಟೆಗೆ ಹಾಕಿಕೊಂಡು, ಆ ಚಮಚದಲ್ಲಿ ಉಳಿದಿರುವ ರಸವನ್ನು ಮೆಲ್ಲಗೆ ಕೈಯ್ಯಿಂದ ಒರೆಸಿ, ನಂತರ ಚಮಚವನ್ನೂ ಕೈಯ್ಯನ್ನೂ ನೆಕ್ಕದಿದ್ದರೆ ಅದೊಂದು ಸಂಪೂರ್ಣವಾದ ಕೆಲಸವಲ್ಲ. ೨. ಊಟವಾದ ಮೇಲೆ, ನೆಲವನ್ನು ಒರೆಸುವಾಗ […]

ಉಪನಿಷತ್ತಿನ ವಿಶೇಷ.

ಸಹ ನೌ ಯಶಃ| ಸಹ ನೌ ಬ್ರಹ್ಮವರ್ಚಸಾಮ್|…… ಇದು ತೈತ್ತೀರಿಯ ಉಪನಿಷತ್ತಿನ ಮೂರನೇ ಅನುವಾಕದ ಪ್ರಾರಂಭದ ಮಾತುಗಳು. ತೈತ್ತೀರಿಯ ಉಪನಿಷತ್ತಿನ ಬಗೆಗಿನ ಕತೆಯೇ ಬಹಳ ಸ್ವಾರಸ್ಯವಾಗಿದೆ. ಕೃಷ್ಣಯಜುರ್ವೇದದಲ್ಲಿ ಬರುವ ಈ ಉಪನಿಷತ್ತನ್ನು ವ್ಯಾಸರು ವೈಶಂಪಾಯನರಿಗೆ ಹೇಳಿದ್ದು. ನಂತರ ವೈಶಂಪಾಯನರು ಇದನ್ನು ಯಾಜ್ಞವಲ್ಕ್ಯರಿಗೆ ಹೇಳಿದರಂತೆ. ಯಾವುದೋ ಒಂದು ವೈಮನಸ್ಸು ಬಂದಾಗ, ವೈಶಂಪಾಯನರು ನಾನು ಕಲಿಸಿದ ಈ ಉಪನಿಷತ್ತನ್ನು ವಾಪಸ್ಸು ಕೊಡು ಎಂದು ಕೇಳಿದಾಗ ಯಾಜ್ಞವಲ್ಕ್ಯರು ಕಲಿತದ್ದನ್ನು ವಾಂತಿ ಮಾಡಿದರಂತೆ. ಈ ಹೊರಬಂದ […]

ನಳನು ಹೇಳಿದ ಕತೆ

ಮಗನೊಡನೆ ಪಂದ್ಯದಲಿ ಸೋತಾಯ್ತು ಸುಮ್ಮನೆಗೆದ್ದವನಿಗೊಂದು ಕತೆ ಹೇಳಬೇಕಂತೆ;ನನ್ನದೇ ಕತೆಯನ್ನು ಹೇಳುವೆನು ಅವನಿಗೆಹಳೆಯ ನೆನಪಲಿ ಮಿಂದು ಮಣಿಯುವಂತೆ ಹಂಸಗಳ ದೌತ್ಯದಲಿ ಮದುವೆಯಾಯಿತು ನನಗೆದಮಯಂತಿ ಎಂಬವಳು ನನ್ನ ಮಡದಿ;ದೇವತೆಗಳೈವರನು ತಳ್ಳಿ ಹಾಕಿದಳವಳುದೂಡಿ ಬಂದಳು ನಾಕ ಸಮ್ಮೋಹದಿ! ಕಲಿಗೆ ಏನಾಯಿತೋ ಪುಷ್ಕರನ ಕಾಡಿಸಿದಅವನಿಂದ ಪಗಡೆಯಲಿ ಸೋಲಾಯಿತು.ರಾಜ್ಯ ಹೋಗಲಿ ಮತ್ತೆ ವೈಭೋಗವೂ ನಡೆಯೆಹೆಂಡತಿಯೆ ಪಣವೆನ್ನೆ ಕೋಪ ಬಂತು. ಉಟ್ಟಿರುವ ಬಟ್ಟೆಯಲೆ ದಮಯಂತಿ ಕೈ ಹಿಡಿದುಕಾನನದ ದಾರಿಯಲಿ ನಡೆಯುತಿದ್ದೆ;ಹಂಸಗಳು ವಸ್ತ್ರವನು ಎಳೆದು ನಭಕೇರಿದವುಮಾನಿನಿಯ ಸೆರಗೆಳೆದು ಮಾನ ಹೊದ್ದೆ! […]

ಹಾದಿಯಲಿ ಸಿಕ್ಕಿದ್ದ ಗೆಲ್ಲು!

ಹಾದಿಯಲಿ ಸಿಕ್ಕಿದ್ದ ಗೆಲ್ಲು ತಂದೆನು ಮನೆಗೆಮಣ್ಣಿನಲಿ ಬುಡವಿಟ್ಟೆ, ನೀರನೆರೆದೆಒಮ್ಮೆ ಚಿಗುರಿದರಾಯ್ತು ದೇವನಿಗೆ ಕೈ ಮುಗಿವೆಎಂದೆನುತ ದಿನಕೊಮ್ಮೆ ಕನಸುತಿದ್ದೆ. ಚಿಗುರಿತದು ಒಂದು ದಿನ, ನೀರನೆರೆಯುತಲಿದ್ದೆಬೆಳೆಯಲದು ಹೊಳೆಯಲದು ಎಂದು ದುಡಿದೆಎಲೆಬೆಳೆದು ಗೆಲ್ಲರಳಿ ಮೊಗ್ಗು ಮೂಡುವ ದಿನಕೆಗಿಡದ ಜೊತೆಗೂ ಮಾತು ಉಳಿಸುತಿದ್ದೆ. ಯಾವ ಹೂ ಬಿಡುವುದೋ? ದೊಡ್ಡದೇ ಸಣ್ಣದೇಹಳದಿಯದೆ? ಬಿಳಿಯದೇ? ಕೆಂಪು ತಾನೆ?ಎಷ್ಟು ಗಳಿಗೆಯ ಹೂವು? ಕೊಯ್ಯುವುದೆ ಬಿಡುವುದೆ?ಮೊಗ್ಗೊಡೆವ ಮೊದಲಿಷ್ಟು ಆಶೆ ಬೇನೆ! ಹೂವರಳಿ ಬಾಡಿತು, ಹೀಚು ಕಾಯಿಯ ಕಂಡೆಚಟ್ನಿಗೋ ಸಾರಿಗೋ ಬಾರದಿದು ಎಂದು;ಆಸೆಯಲಿ […]