ಶ್ರೀ ಟೊಂಯ್ಕಾನಂದ ಚರಿತೆ. ಭಾಗ 4

ಪುಟ-೮ ಬದಲಾವಣೆಗೆ ಭಾವಗಳು ಸಾಕು. ಯಾರೂ ಹೇಳಬೇಕಿಲ್ಲ, ಯಾರೂ ಒಪ್ಪಿಸಬೇಕಿಲ್ಲ. ಕೆಲವೊಂದು ಕಾರ್ಯಕಾರಣವಿಲ್ಲದೇ ಬಹಳವಾಗಿ ಜೀವನಶೈಲಿ, ವಿಚಾರಗಳು ಹೆಚ್ಚೇಕೆ ನಡೆ ನುಡಿಗಳೂ ಬದಲಾವಣೆಯಾಗುತ್ತದೆ. ಇಂತಹ ಒಂದು ಜೀವನದ ತಿರುವು ಬಂದಿತ್ತು ಟೊಂಯ್ಕಾನಂದರಿಗೆ. ಅದೊಂದು ರಾತ್ರಿ ಹೊಂಚು ಹಾಕಿ ಬಂದ ಬೆಕ್ಕಿನಂತೆ ಬಂತು. ಯಾವುದೋ ಸುಟ್ಟ ಭಾವಗಳಿಗೆ ರೂಪು ಕೊಡುತ್ತಾ ಟೊಂಯ್ಕಾನಂದರು ಮಲಗಿದ್ದರೆ, ಡಿಲೈಟಾನಂದರು ಗೋಡೆಗೆ ಒರಗಿ ಕುಳಿತಿದ್ದರು. ಒಮ್ಮೆಲೇ ಎದ್ದ ಟೊಂಯ್ಕರು ಗುರುಗಳಲ್ಲಿ ಪ್ರಶ್ನೆಗಳ ಬಾಣಗಳನ್ನು ಎಸೆದರು. ಗುರುಗಳೇ, ತನ್ನನ್ನು […]

Advertisements

ಶ್ರೀ ಟೊಂಯ್ಕಾನಂದ ಚರಿತೆ. ಭಾಗ ೩

ಪುಟ-೫ ಕೆಲವೊಂದು ಸಲ ಎರಡು ಆಯ್ಕೆಗಳೂ ತಪ್ಪಲ್ಲವೆನ್ನುವಾಗ ಯಾವುದಾದರೂ ಒಂದು ಆಯ್ಕೆ ಮಾಡಿ ಮತ್ತೊಂದನ್ನ ಆಯ್ಕೆ ಮಾಡಬಹುದಿತ್ತು ಎನ್ನುವ ಪರಿತಾಪ ಉಂಟಾಗುತ್ತದೆ. ಅಂತಹ ಒಂದು ಪರಿತಾಪ, ಗೊಂದಲದ ನಡುವೆ ಮಲ್ಲಪ್ಪನವರು ಆಗಲಿ, ನೋಡೋಣ ಎಂದು ಟೊಂಯ್ಕರನ್ನು ಕಳಿಸಿದರು. ಅಂತಿರ್ಪೊಡೆ, ಇದೆಲ್ಲ ಸಮಾಚಾರವೂ ಡಿಲೈಟಾನಂದರ ಕಿವಿಗಳಿಗೆ, ಕಣ್ಣುಗಳಿಗೆ ತಿಳಿಯಲಿಲ್ಲ. ಒಂದು ದಿನ ಶ್ರೀಮಾನ್ ಮಲ್ಲಪ್ಪನವರ ಸಂಸಾರ ಸಮೇತವಾದ ಸವಾರಿ ಗುರುಗಳಿದ್ದಲ್ಲಿಗೆ ಬಂದಾಗ ಡಿಲೈಟಾನಂದರಿಗೆ ವಿಷಯವನ್ನು ಹೇಳಿದರು. ಯಾವುದೋ ಬಿಸಿಲಿನಲ್ಲಿ ಹಪ್ಪಳ ಒಣಗಿಸುತ್ತಿದ್ದಾಗ […]

ಶ್ರೀ ಟೊಂಯ್ಕಾನಂದ ಚರಿತೆ. ಭಾಗ ೨

ಪುಟ-೩ ಜಗತ್ತಿನ ಗುರುಗಳನ್ನು ನೋಡಿ ಬಲ್ಲವರು ಟೊಂಯ್ಕರು. ಆದರೆ ಡಿಲೈಟಾನಂದರ ಪೂರ್ವವನ್ನೂ ಉತ್ತರವನ್ನೂ ತಿಳಿಯಲಾರದವರು. ತಾನು ಓರ್ವನೇ ಶಿಷ್ಯ, ಆದರೆ ಗುರುವಿನಿಂದ ಏನನ್ನೂ ಕಲಿಯಲಿಲ್ಲ ಎನ್ನುವ ಒಂದು ಬೇಸರ ಇತ್ತೀಚೆಗೆ ಕಾಡುತ್ತಿತ್ತು. ಮಾಡುವುದಕ್ಕೇನೂ ಕೆಲಸ ಇಲ್ಲದೇ ಕುಳಿತವನೇ ಗುರು? ಬೆಳಗ್ಗೆ ಸೂರ್ಯ ಮೂಡುವ ಮೊದಲೇ ಏಳುತ್ತಿದ್ದ ಡಿಲೈಟರು ದೂರದ ನಡಿಗೆಯನ್ನು ಮುಗಿಸಿ ವಾಪಸ್ಸು ಬರಬೇಕಾದರೆ ಟೊಂಯ್ಕರು ಎದ್ದಿರುತ್ತಿದ್ದರು. ಇತ್ತೀಚೆಗೆ ಯಾರ್ಯಾರೋ ಭಕ್ತರು ಬರುತ್ತಿದ್ದರಿಂದ ಹಣ್ಣು ಹಂಪಲುಗಳು, ತೆಂಗಿನಕಾಯಿ ಸಿಗುತ್ತಿದ್ದುದರಿಂದ ಆಹಾರದ […]

ಶ್ರೀ ಟೊಂಯ್ಕಾನಂದ ಚರಿತೆ. ಭಾಗ ೧

ಪ್ರಮುಖ ಪಾತ್ರಗಳಾದ”ಟೊಂಯ್ಕಾನಂದರು ’ಮತ್ತು”ಡಿಲೈಟಾನಂದರು’, ಇಬ್ಬರು ಸ್ವಾಮಿಗಳಾಗಿದ್ದು ಇವರ ವಿಚಾರವಾಗಿ ಯಾವುದೇ ಪ್ರಸ್ತುತವಿರುವ ದೂರದರ್ಶನಗಳಲ್ಲಿ , ಪತ್ರಿಕೆಗಳಲ್ಲಿ ಬಂದಿರುವುದಿಲ್ಲ. ಇವು ಸಾಮಾನ್ಯ ಮನುಷ್ಯನ ವಿಪರೀತ ಕಲ್ಪನೆಯಾಗಿದ್ದು, ಯಾವುದೇ ಪ್ರಕಾರವಾಗಿ ಯಾರನ್ನೂ ನಕಲಿಸಿರುವುದಿಲ್ಲ. ಆದ್ದರಿಂದ, ಯಾವುದಾದರೂ ರೀತಿಯಲ್ಲಿ ಸಾಮ್ಯ ಕಂಡುಬಂದರೆ ಬರಹಗಾರನ ಮೆದುಳಿಗೇ ಸಲ್ಲಬೇಕು ಹೊರತು ತಲೆಗೆ ಹೊಡೆಯಬಾರದಾಗಿ ವಿನಂತಿ.