ಹಾದಿಯಲಿ ಸಿಕ್ಕಿದ್ದ ಗೆಲ್ಲು!

ಹಾದಿಯಲಿ ಸಿಕ್ಕಿದ್ದ ಗೆಲ್ಲು ತಂದೆನು ಮನೆಗೆಮಣ್ಣಿನಲಿ ಬುಡವಿಟ್ಟೆ, ನೀರನೆರೆದೆಒಮ್ಮೆ ಚಿಗುರಿದರಾಯ್ತು ದೇವನಿಗೆ ಕೈ ಮುಗಿವೆಎಂದೆನುತ ದಿನಕೊಮ್ಮೆ ಕನಸುತಿದ್ದೆ. ಚಿಗುರಿತದು ಒಂದು ದಿನ, ನೀರನೆರೆಯುತಲಿದ್ದೆಬೆಳೆಯಲದು ಹೊಳೆಯಲದು ಎಂದು ದುಡಿದೆಎಲೆಬೆಳೆದು ಗೆಲ್ಲರಳಿ ಮೊಗ್ಗು ಮೂಡುವ ದಿನಕೆಗಿಡದ ಜೊತೆಗೂ ಮಾತು ಉಳಿಸುತಿದ್ದೆ. ಯಾವ ಹೂ ಬಿಡುವುದೋ? ದೊಡ್ಡದೇ ಸಣ್ಣದೇಹಳದಿಯದೆ? ಬಿಳಿಯದೇ? ಕೆಂಪು ತಾನೆ?ಎಷ್ಟು ಗಳಿಗೆಯ ಹೂವು? ಕೊಯ್ಯುವುದೆ ಬಿಡುವುದೆ?ಮೊಗ್ಗೊಡೆವ ಮೊದಲಿಷ್ಟು ಆಶೆ ಬೇನೆ! ಹೂವರಳಿ ಬಾಡಿತು, ಹೀಚು ಕಾಯಿಯ ಕಂಡೆಚಟ್ನಿಗೋ ಸಾರಿಗೋ ಬಾರದಿದು ಎಂದು;ಆಸೆಯಲಿ […]

Advertisements

ನವಮಾಸ ಹೊತ್ತವಳು ಹೆತ್ತಾಗ!

ತಿಂಗಳಾಯಿತು ಮುಂದು, ಅನುಮಾನದಲಿ ಸೊಗಸುಕಳವಳವು ದಿನವುರುಳೆ, ಹಗಲೆ ಇರುಳು;ಇನ್ನೇನು ಇರುವಿಕೆಯ ಒಪ್ಪಿರುವ ಗಳಿಗೆಯಲಿಒಂದು ತಿಂಗಳು ಎಂದು ಹೇಳಿದವಳು! ಏನು ತಿನ್ನುವುದಿನ್ನು? ತಿನ್ನಬಾರದು ಏನು?ಹೇಗೆ ನಡೆದರೆ ಚೆನ್ನ ಎನುತ ಭಯದಿ;ಎರಡು ತಿಂಗಳಿನಲ್ಲಿ ಬದಲಾದಳೋ ಹುಡುಗಿಅಂಜಿಕೆಯ ಭರವಸೆಯ ಉಳಿಸಿ ಮನದಿ! ಮೂರು ತಿಂಗಳು ತುಂಬಿ ಜಗವೆಲ್ಲ ತಿಳಿ ಮಂಜುಊಟ ಕರಗದು, ಹುಳಿಯ ತೇಗು ಗೋಜು;ಇದಕೆ ಉಪ್ಪಿಲ್ಲವೋ, ಇದು ಹುಳಿಯ ಹಿಡಿದಿಲ್ಲಎಂದೆನುವ ಮಾತುಗಳು ಬಹಳ ತೇಜು ನಾಲ್ಕರಲಿ ಬಹಳಿಲ್ಲ, ಯಾವ ನಿಶ್ಚಯವಿಲ್ಲಎಲ್ಲವೂ ಸೋಜಿಗವು ಕಣ್ಣ […]

ನಿನ್ನ ಇರುವಿಕೆಯೆನುವ ಸೊಗಸಾದ ಭಾವದಲಿ.

ನಿನ್ನ ಇರುವಿಕೆಯೆನುವ ಸೊಗಸಾದ ಭಾವದಲಿನಿನ್ನ ಮೇಲೊಂದಿಷ್ಟು ಮುನಿಸು ತೋರಿಅಲ್ಲಿಗೋ ಎಲ್ಲಿಗೋ ನೀನು ತೆರಳುವ ಸಮಯಮುನಿಸಿಗೂ ಹೂವಹುದು ಒಲವು ಹೀರಿ! ಒಮ್ಮೆ ಸಿಡಿಮಿಡಿಯಾಗಿ ಮತ್ತೊಮ್ಮೆ ಮಗುವಾಗಿಹಾಗೊಮ್ಮೆ ಹೀಗೊಮ್ಮೆ ಕಟುಮಾತು ಬೈದುನಾ ನಿನಗೆ ಹೇಳಿದೆನೋ ನನ್ನೊಳಗೆ ಒದರಿದೆನೊಎನುತ ಮಲಗಿತು ಮಾತು, ಮೌನ ಹೊದ್ದು.ನಮ್ಮಿಬ್ಬರಲಿ ಕೂಡ ಮಾತು ಸಾಯುವುದಿಲ್ಲಮೌನ ಬದುಕುವುದಿಲ್ಲ ದೀರ್ಘವಾಗಿ ಒಂದೆರಡು ಹನಿಕಟ್ಟಿ ಕಣ್ಣೀರು ಜಾರುವುದುಹನಿಮಳೆಗೆ ಅಣೆಕಟ್ಟು ಭಾರವೇನೇ?ಸೋಲುವುದು ಹಿತವಹುದು ಗೆಲ್ಲುವುದು ಸೋಲಲ್ತೆ?ನಾವು ಸೋಲುವುದಿಲ್ಲ ಜಗದ ಮುಂದೆ;ಗೆದ್ದರಾಯಿತು ಪ್ರೇಮ ನಮ್ಮಿಬ್ಬರೊಳಗಿಂತು ಹೂವರಳಿ ಬೆಳಗುವುದು […]

ಬಾಳು-ಬಳ್ಳಿ

ದೂರದಿಂದಲೇ ತೂರಿಬಂದಿರುವ ಗಾಳಿಗೊಂದು ಗಂಧ ಪಾರಮಾರ್ಥಿಕವೊ ಸ್ವಾರ್ಥ,ಭಾವುಕವೊ ತಿಳಿಯದಾದ ಬಂಧ. ಕಳಚಿಬಿದ್ದಿರುವ ಎಳಸು ಬಳ್ಳಿಯಲಿ ಹೊಸದು ಚಿಗುರು ಕಂಡೆ ಬಳಸಿ ಬದುಕುವುದು ಬದುಕಿ ಅರಳುವುದು ಮಲ್ಲೆಯೊಂದು ಬಂಡೆ! ನೆರವ ನೀರೆರೆದು ಮೀರಿ ಪೋಷಿಸುವ ದಾರಿಯಿರಲು ಸರಸ ಮೆರೆವ ಆಸೆಯಲಿ ಪೊರೆವ ಹಮ್ಮಿನಲಿ ತೋರಬಹುದು ಕ್ಲೇಶ ಫಲವ ಹುಡುಕುತಲಿ ಮಲ್ಲೆ ಬೆಳೆಸಿದರೆ ಮೂಡಬಹುದೆ ಹೀಚು? ನಿಲದ ಹೂವುಗಳ ಸ್ವಾದ ಬೆಳೆಯದಿರೆ ಬದುಕದೊಂದು ಪೇಚು! ಉರಿದು ಕುಸಿದು ತನು ತಣ್ಣಗಾಗಲದು ಬೂದಿಯೆಂಬ ಹೆಸರು […]

ಭಾವಯಜ್ಞ

ತವರಿನಲಿ ಯಾಗವಿದೆ ಎನುವ ಸುದ್ದಿಯ ಕೇಳಿ ಓಡಿ ಬಂದಳು ಸತಿಯು ಹೇಳಲೆಂದು ಕರೆಯು ಇಲ್ಲವದೇಕೆ, ಎನುವ ಯೋಚನೆ ಬೇಕೆ? ಏಕಾಂಗಿಯಾದರೂ ಪೋಪೆನೆಂದು ಮೆಲುನುಡಿಯ ಮೆಲ್ಲುತಲಿ ಲಲನೆಯಾಡಿದ ನುಡಿಯು ಪರಶಿವನ ವರಕಿವಿಗೆ ಬೀಳುತಿತ್ತು ಹೋಗಿ ಬಾ ಎನ್ನಲೇ, ಸಾಗಿ ಜೊತೆ ನಾ ಬರಲೆ? ಎದೆಯ ಬೀಗವ ವಿಧಿಯು ಜಡಿಯುತಿತ್ತು ಒಂದು ದಿನ ತಡೆದುಕೋ, ನಿಲ್ಲು ಸಂಜೆಯವರೆಗೆ, ಅಲ್ಲದಿರೆ ಅರೆಘಳಿಗೆ ಸುಮ್ಮನುಳಿಯೆ ಎನುವ ಮಾತುಗಳೆಲ್ಲ ಎದೆಯಲುಳಿಯಿತು ಹೇಗೆ ಮೌನ ಶಾಂತಿಯದೆಂತು? ಫಲವು ಕಹಿಯೆ […]