ಹೂವು ಅರಳುವ ಮುನ್ನ!

ಮಲ್ಲಿಗೆಯ ಮೊಗ್ಗುಗಳು ಅರಳಿಲ್ಲವೆಂದುನುತಸಿಡುಕಿದರೆ ಹೂವಾಯ್ತೆ, ಗಂಧ ಬಂತೆ?ಅವಳ ದಾರಿಯ ಕಾದು ಕುಳಿತ ಪ್ರೇಮಿಯ ಜಗಕೆಮುನಿಸು ಬಂದರೆ ಪ್ರೇಮ ಉಳಿಯದಂತೆ! ತಡವಾದರೇನಂತೆ ಬಂದಳಲ್ಲಾ ಎನುತಅಡಗಿಸಿಹ ಹೂಗಳನು ನೀಡಬೇಕು;ಬೇಗ ಹೋಗುವೆನೆಂಬ ಅವಳ ಮಾತಿನ ನಡುವೆಹೊಸತು ಪದಗಳ ಪದ್ಯ ಕಟ್ಟಬೇಕು. ಕತ್ತಲಿನ ಕಾರ್ಮೋಡ ಸುತ್ತಲೂ ಬಂದಾಗನಗೆಯ ಮಿಂಚುಗಳನ್ನು ಹರಡಬೇಕು;ತೊರೆವ ಕ್ಷಣದಲಿ ಕಣ್ಣು ಕತ್ತಲೆಯೆ ಆಗುವುದುಪ್ರೇಮದಲಿ ಮೈಮರೆತು ನೆನೆಯಬೇಕು. ಮಲ್ಲಿಗೆಯು ಅರಳುವುದು ತಡವಾದರೇನಂತೆಹಿತವಾದ ಭಾವಗಳು ತಾನೆ ಪ್ರೇಮ?ಸಹಜದಲಿ ದೊರೆತದ್ದು ಮನುಜ ಪುಣ್ಯವು ತಾನೆಹೊಸಕಿದರೆ ಉಳಿದೀತೆ ನಿತ್ಯಕಾಮ! […]

Advertisements

ಮಲ್ಲಿಗೆ ಮಾಲೆ

ಮಲ್ಲಿಗೆಯ ಹೂವನ್ನು ದಾರಿಯಲಿ ಕಂಡವರುನಿಡಿದಾದ ಉಸಿರೆಳೆದು ಹೋದರಂತೆ;ಕಣ್ಣು ಹಿರಿದಾಗಿಸುವ ವಿದ್ಯೆಯನು ಕಲಿತವಳುಜಾಣತುಟಿಯಲಿ ನಗಲು ಮರೆತು ಚಿಂತೆ! ಒಂದೆರಡು ಮುಷ್ಟಿಯಲಿ ಹೂವ ಕೊಟ್ಟಳು ಅವಳುತೂಕದಲಿ ಹಾಕಿಲ್ಲ, ಏನಕೆಂದೆ?ಗಂಧವನು ತೂಕದಲಿ ಹಿಡಿಯಲಾಗುವುದಿಲ್ಲಮಲ್ಲಿಗೆಯ ಬೀಳಿಸದೆ ಸಾಗು ಮುಂದೆ. ಮೊಣಕೈಯ್ಯ ಭಾರದಲಿ ಬಾಗಿಲನು ದೂಡಿದರೆಒಳಗಿದ್ದ ಮನೆಯವಳು ಕೆರಳಿ ಬಂದು;ಬೇಗ ಬರುವೆನು ಎಂದು ಹೋದವರು ತಡವೇಕೆ?ಹೂ ಮುಖವ ನೋಡಿದಳು ಕೋಪ ತಿಂದು! ಹೂವ ಕಟ್ಟುವ ಅವಳ ಕೈಯ್ಯ ನೋಡುವುದೇನುಬೆರಳುಗಳ ನಡುವಿರುವ ದಾರವನ್ನೇ;ಆಗೊಮ್ಮೆ ಈಗೊಮ್ಮೆ ಹಣೆಯ ತುರಿಸುವ ತೋಳುಮಾಲೆಯನು […]

ನಿನ್ನ ಇರುವಿಕೆಯೆನುವ ಸೊಗಸಾದ ಭಾವದಲಿ.

ನಿನ್ನ ಇರುವಿಕೆಯೆನುವ ಸೊಗಸಾದ ಭಾವದಲಿನಿನ್ನ ಮೇಲೊಂದಿಷ್ಟು ಮುನಿಸು ತೋರಿಅಲ್ಲಿಗೋ ಎಲ್ಲಿಗೋ ನೀನು ತೆರಳುವ ಸಮಯಮುನಿಸಿಗೂ ಹೂವಹುದು ಒಲವು ಹೀರಿ! ಒಮ್ಮೆ ಸಿಡಿಮಿಡಿಯಾಗಿ ಮತ್ತೊಮ್ಮೆ ಮಗುವಾಗಿಹಾಗೊಮ್ಮೆ ಹೀಗೊಮ್ಮೆ ಕಟುಮಾತು ಬೈದುನಾ ನಿನಗೆ ಹೇಳಿದೆನೋ ನನ್ನೊಳಗೆ ಒದರಿದೆನೊಎನುತ ಮಲಗಿತು ಮಾತು, ಮೌನ ಹೊದ್ದು.ನಮ್ಮಿಬ್ಬರಲಿ ಕೂಡ ಮಾತು ಸಾಯುವುದಿಲ್ಲಮೌನ ಬದುಕುವುದಿಲ್ಲ ದೀರ್ಘವಾಗಿ ಒಂದೆರಡು ಹನಿಕಟ್ಟಿ ಕಣ್ಣೀರು ಜಾರುವುದುಹನಿಮಳೆಗೆ ಅಣೆಕಟ್ಟು ಭಾರವೇನೇ?ಸೋಲುವುದು ಹಿತವಹುದು ಗೆಲ್ಲುವುದು ಸೋಲಲ್ತೆ?ನಾವು ಸೋಲುವುದಿಲ್ಲ ಜಗದ ಮುಂದೆ;ಗೆದ್ದರಾಯಿತು ಪ್ರೇಮ ನಮ್ಮಿಬ್ಬರೊಳಗಿಂತು ಹೂವರಳಿ ಬೆಳಗುವುದು […]

ಮಲ್ಲಿಗೆಯ ಮಾತು!

ಇಷ್ಟು ಹೂಗಳ ನಡುವೆ ನನ್ನನೇ ಆಯುವೆಯೆಕೆಂಗುಲಾಬಿಯು ನಿನ್ನ ಕರೆದಳಲ್ಲ!ನೀಳದಾ ಜಡೆಯವಳ ಮುಂಗುರುಳು ಕಡೆವವಳಕೇದಿಗೆಯ ಹೂವೂ ಹೊರಳಿತಲ್ಲ ಮೂಗನ್ನೇ ನಾಚಿಸುವ ಸಂಪಿಗೆಯ ಹೂವಿತ್ತು ರೇಶಿಮೆಯ ನುಣುಪಿರುವ ಕಮಲವಿತ್ತು ಮಾದಕತೆ ತುಂಬಿದ್ದ ಬಕುಲ ಮಾಲೆಗಳಲ್ಲಿ ನಿನ್ನ ಕರೆದಂತೇನೋ ಭಾವವಿತ್ತು. ನನಗೆ ಮಲ್ಲಿಗೆಯೆಂದೆ, ಬಳಿಗೆ ನನ್ನನೆ ಕರೆದೆ ನನ್ನ ಜಾತಿಯಲೆಷ್ಟು ಮಲ್ಲರಿಹರು! ಅಷ್ಟೇಕೆ ಕಣ್ಣಿನಲಿ ಕಾಯುವರು ಓ ಗೆಳೆಯ ಮಲ್ಲಿಗೆಯ ತೋಟಕ್ಕೆ ಬೇಲಿಯವರು. ನಿನ್ನೊಂದಿಗಿಹೆನೆಂದು ಬಂದೆ ಬಳ್ಳಿಯ ತೊರೆದು ಬೇರೆ ಹೂಗಳ ಕಡೆಗೆ ನೋಟಬೇಡ […]

ಮಾತು-ಮೌನ

ಹೂವು ಹೇಳುವ ಮಾತು ಕಿವಿಗೆಂದೂ ಕೇಳಿಸದು ಕಿವಿಗೆ ಕೇಳುವುದೆಲ್ಲ ಮಾನವನದು; ಮಾನವನ ಮಾತುಗಳ ಆಲಿಸಿದೆ ಮಲ್ಲಿಗೆಯು ಈಗೀಗ ಮಾತುಗಳ ಕಲಿಯುತಿಹುದು. ಹೀಗೆನಲು ಮಲ್ಲಿಗೆಯ ಮುಡಿದವಳು ಕೇಳಿದಳು ಮೌನ ಮಲ್ಲೆಯ ಮಾತು ಕೇಳ್ದೆನೆಂದು; ಮಲ್ಲಿಗೆಯ ಮುಡಿಸಿದವ ಮಾತು ಬಿಟ್ಟಾನೆಂದು ಮಲ್ಲಿಗೆಯು ನೆಪವಾಯ್ತು ಅವಳಿಗಿಂದು.