ಮಹಿಳೆ ಮತ್ತು ಆರೋಗ್ಯ -6

ತಾಯಿಯ ಹಾಲು ಮತ್ತು ಶೈಶಾವಸ್ಥೆ ಪ್ರತೀ ವರ್ಷವೂ, ಸೆಪ್ಟೆಂಬರ್ ತಿಂಗಳನ್ನು ವಿಶ್ವ ಪೌಷ್ಠಿಕ ತಿಂಗಳನ್ನಾಗಿ ಆಚರಿಸುತ್ತಾರೆ. ಈ ವರ್ಷವೂ ಸಹ ಎಂದಿನಂತೆ, “Go Further with Food” ಎಂಬ ಧ್ಯೆಯವನ್ನಿಟ್ಟುಕೊಂಡು ಅದರಲ್ಲೂ ಮುಖ್ಯವಾಗಿ ಶೈಶಾವಸ್ಥೆಯಲ್ಲಿ (ಹುಟ್ಟಿದ ಸಾವಿರ ದಿನಗಳ ಒಳಗಿನ ಮಕ್ಕಳಲ್ಲಿ) ಕಂಡು ಬರುವ ಅ ಪೌಷ್ಟಿಕತೆಯನ್ನು ನೀಗಿಸುವ ಉದ್ದೇಶದೊಂದಿಗೆ ವಿಶ್ವ ಪೌಷ್ಟಿಕ ಮಾಸಾಚರಣೆ ನಡೆಸಲಾಯಿತು. ಶೈಶಾವಸ್ಥೆಯಲ್ಲಿ ಮಕ್ಕಳ ಬೆಳವಣಿಗೆ ಅತೀ ಶೀಘ್ರವಾಗಿ ಮುಂದುವರೆಯುತ್ತದೆ. ಆರೊಗ್ಯವಂತ ಶಿಶುವಿಗೆ ೬ ತಿಂಗಳುಗಳು […]

Advertisements

ಮಹಿಳೆ ಮತ್ತು ಆರೋಗ್ಯ -5

ಗೌಟ್( Gout) -ಸಂಧಿವಾತ ಗೌಟ್ ಸಾಮಾನ್ಯವಾದ ಮತ್ತು ಸಂಕೀರ್ಣವಾದ, ಉರಿಯೂತದ ಸಂಧಿವಾತದ ಒಂದು ರೂಪವಾಗಿದೆ. ಗೌಟ್ ವ್ಯಾಧಿಯು ನಮ್ಮ ದೇಹದಲ್ಲಿ ನಡೆಯುವ ಯೂರಿಕ್ ಆಮ್ಲದ ಪ್ರಕ್ರಿಯೆ ಸರಿಯಾಗಿ ಇಲ್ಲದಿರುವ ಕಾರಣದಿಂದ ಉಂಟಾಗುತ್ತದೆ.  ರಕ್ತದಲ್ಲಿ ಯೂರಿಕ್ ಆಮ್ಲದ ಪ್ರಮಾಣ ಹೆಚ್ಚಾಗಿದ್ದಲ್ಲಿ, ಅವು ಕೀಲುಗಳಲ್ಲಿ ಸಂಗ್ರಹವಾಗುತ್ತದೆ. ಹೀಗೆ ಶೇಖರಣೆಯಾದ ಯೂರಿಕ್ ಆಮ್ಲವು ಹರಳಿನ ರೂಪದಲ್ಲಿ ಕೀಲುಗಳಲ್ಲಿ ಮತ್ತು ಕೀಲುಗಳ ಸುತ್ತಲೂ ಇರುವ ಕೋಶಗಳಲ್ಲಿ ಸೇರಿಕೊಂಡು ಕೀಲುಗಳು ಉಬ್ಬಿಕೊಂಡು ಕದಲಿಸಲು ಕಷ್ಟವಾಗುತ್ತದೆ ಮತ್ತು ಇದರಿಂದ […]

ಮಹಿಳೆ ಮತ್ತು ಆರೋಗ್ಯ – ೪

ಇಂದಿನ ಜಡ ಜೀವನ ಶೈಲಿ ಹಾಗೂ ರಾಸಾಯನಿಕಯುಕ್ತ, ಸಂಸ್ಕರಿಸಿದ ಆಹಾರಗಳ ಮತ್ತು ಜಂಕ್ ಫುಡ್‍ಗಳ ಸೇವನೆ ಹೆಚ್ಚುತ್ತಿರುವ ಕಾರಣ ಮಧುಮೇಹ, ಸ್ಥೂಲಕಾಯ, ಕ್ಯಾನ್ಸರ್ (ಅರ್ಭುದ),ಹೃದಯ ಸಂಬಂಧಿ ಕಾಯಿಲೆಗಳು, ಸಂಧಿವಾತದಂತಹ ಹಲವಾರು ವ್ಯಾಧಿಗಳು ವಯಸ್ಸಿನ ಬೇಧವಿಲ್ಲದೆ ಎಲ್ಲರಲ್ಲೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಇಂತಹ ಸಂದರ್ಭದಲ್ಲಿ, ಆರೋಗ್ಯ ಸುಧಾರಣೆಯ ಕ್ರಾಂತಿಯಂತೆ ಮನೆ ಮನೆಯಲ್ಲೂ ಪ್ರಚಲಿತಗೊಂಡಿದ್ದು ಹತ್ತು ಸಾವಿರ ವರ್ಷ ಇತಿಹಾಸವಿರುವ ಹುಲ್ಲಿನ ಪ್ರಬೇಧದ ಸಣ್ಣ ಬೀಜದ ಧಾನ್ಯ. ಮೇವು ಮತ್ತು ಮಾನವನ ಆಹಾರಕ್ಕಾಗಿ ಏಕದಳ […]

ಮಹಿಳೆ ಮತ್ತು ಆರೋಗ್ಯ – ೩

ರಕ್ತಹೀನತೆ ಒಟ್ಟು ರಕ್ತದಲ್ಲಿ ಸಾಮಾನ್ಯಕ್ಕಿಂತ ಕಡಿಮೆ ರಕ್ತಕಣಗಳು ಇದ್ದಲ್ಲಿ ಅಥವಾ ಪ್ರತೀ ರಕ್ತಕಣಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಹಿಮೋಗ್ಲೋಬಿನ್ ಇದ್ದಲ್ಲಿ ರಕ್ತಹೀನತೆ ಅಥವಾ ಅನೀಮಿಯ ಎಂದು ಕರೆಯಲ್ಪಡುತ್ತದೆ. ಈ ಎರಡು ಸಂದರ್ಭಗಳಲ್ಲಿ, ರಕ್ತ ಜೀವಕೋಶಗಳು ತಮ್ಮ ಆಮ್ಲಜನಕ ಸಾಗಿಸುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ. ಇದು ಅಧಿಕ ರಕ್ತಸ್ರಾವ ಅಥವಾ ಕೆಂಪುಕಣಗಳ ಉತ್ಪಾದನೆಯಲ್ಲಿ ಏನಾದರೂ ದೋಷದಿಂದ ಅಥವಾ ಯಾವುದೇ ಇತರೆ ಕಾರಣಗಳಿಂದ ಬರಬಹುದಾಗಿದೆ. ಕಬ್ಬಿಣ ಅಂಶದ ಕೊರತೆಯಿಂದಾಗುವ ರಕ್ತಹೀನತೆಯು ಕುಪೋಷಣೆಯಿಂದಾಗುತ್ತದೆ. ಹಿಮೋಗ್ಲೋಬಿನ್ ಎಂದರೆ ಕಬ್ಬಿಣದ […]

ಮಹಿಳೆ ಮತ್ತು ಆರೋಗ್ಯ -2

ಆಸ್ಟಿಯೋಪೊರೋಸಿಸ್ (Osteoporosis) ಇದು ಮೂಳೆಗೆ ಸಂಬಂಧಿಸಿದಂತ ಖಾಯಿಲೆ. ಈ ಸ್ಥಿತಿಯಲ್ಲಿ ಮೂಳೆಯು ಸಾಂದ್ರತೆಯನ್ನು ಕಳೆದುಕೊಳ್ಳುತ್ತಾ ಶಿಥಿಲವಾಗುತ್ತದೆ. ಮೂಳೆಯನ್ನು ದುರ್ಬಲಗೊಳಿಸುತ್ತದೆ ಮತ್ತು ಸೌಮ್ಯವಾದ ಒತ್ತಡಗಳಿಗೂ ಮೂಳೆಗಳು ಮುರಿಯುವ ಅಪಾಯವನ್ನು ಹೆಚ್ಚಿಸುತ್ತದೆ. 35 ವರ್ಷದ ನಂತರ ಪ್ರತಿ ಮಹಿಳೆಯರಲ್ಲೂ ಮೂಳೆಯ ಸಾಂದ್ರತೆ ಸ್ವಾಭಾವಿಕವಾಗಿ ಕಡಿಮೆಯಾಗುತ್ತದೆ ಮತ್ತು ಋತುಬಂಧದ(ಮೆನೋಪಾಸ್) ನಂತರ ಮೂಳೆಯು ಹೆಚ್ಚು ವೇಗವಾಗಿ ದುರ್ಬಲವಾಗುತ್ತದೆ. ಪ್ರಮುಖ ಅಪಾಯಕಾರಿ ಅಂಶಗಳು: ಅನುವಂಶಿಕತೆ ಜಡಜೀವನ ವ್ಯಾಯಾಮದ ಕೊರತೆ ಆಹಾರದಲ್ಲಿ ಕ್ಯಾಲ್ಸಿಯಂ ಮತ್ತು ಡಿ-ಜೀವಸತ್ವದ ಕೊರತೆ ಧೂಮಪಾನ […]