ನಾಲಿಗೆಯ ಬಗೆಗಿನ ಮಾತು!

ಮನುಷ್ಯನ ಪ್ರಭಾವಿ ಅಂಗಗಳಲ್ಲಿ ನಾಲಿಗೆ ಬಹಳ ಮುಖ್ಯವಾದದ್ದು. ಜಗತ್ತಿನ ಬೇರೆ ಪ್ರಾಣಿಗಳಿಗಿಂತಲೂ ಮನುಷ್ಯನ ನಾಲಿಗೆ ಬಳಕೆಯಾಗುವುದು ಬೇರೆ ಕಾರಣಕ್ಕೆ. ಎಲ್ಲಾ ಪ್ರಾಣಿಗಳು ನಾಲಿಗೆಯನ್ನು ಆಹಾರದ ಪಚನಕ್ಕೆ, ರುಚಿಗೆ ಬಳಸಿದರೆ ಮನುಷ್ಯ ಅದನ್ನೂ ಮೀರಿ ಮಾತಿಗೆ ಬಳಸುತ್ತಾನೆ. ಆತನ ನಾಲಿಗೆ ಸರಿ ಇಲ್ಲ! ಎಂದು ಯಾರಾದರೂ ಅಂದರೆ ಆತನ ರುಚಿಯ ಬಗೆಗೆ ಹೇಳಿದ್ದಲ್ಲ, ಹೊರತಾಗಿ ಮಾತಿನ ಶುಚಿಗೆ ಸಂಬಂಧಿಸಿದ್ದು ಎಂದೇ ಅರ್ಥ. ಓ ಅವಳ ನಾಲಿಗೆ ಎಷ್ಟು ಉದ್ದ ಎಂದು ಹೇಳಿದರೆ […]

Advertisements

ಮಾತು-ಮೌನ

ಹೂವು ಹೇಳುವ ಮಾತು ಕಿವಿಗೆಂದೂ ಕೇಳಿಸದು ಕಿವಿಗೆ ಕೇಳುವುದೆಲ್ಲ ಮಾನವನದು; ಮಾನವನ ಮಾತುಗಳ ಆಲಿಸಿದೆ ಮಲ್ಲಿಗೆಯು ಈಗೀಗ ಮಾತುಗಳ ಕಲಿಯುತಿಹುದು. ಹೀಗೆನಲು ಮಲ್ಲಿಗೆಯ ಮುಡಿದವಳು ಕೇಳಿದಳು ಮೌನ ಮಲ್ಲೆಯ ಮಾತು ಕೇಳ್ದೆನೆಂದು; ಮಲ್ಲಿಗೆಯ ಮುಡಿಸಿದವ ಮಾತು ಬಿಟ್ಟಾನೆಂದು ಮಲ್ಲಿಗೆಯು ನೆಪವಾಯ್ತು ಅವಳಿಗಿಂದು.