ಒಂದೇ ರೀತಿಯ ಎರಡು ಹೂಗಳು!

ಒಂದೇ ರೀತಿಯ ಎರಡು ಹೂಗಳುಬಳ್ಳಿಯಲಿತ್ತು, ಅರಳಿತ್ತು!ಒಂದನು ಕೊಯ್ದಳು ಮಲ್ಲಿಗೆ ಮಗಳುಇನ್ನೊಂದಲ್ಲಿಯೆ ಉಳಿದಿತ್ತು. ಕೊಯ್ದಿಹ ಹೂವಿಗೆ ದಾರವು ಸೇರಿಹೂವಿನ ಮಾಲೆ! ಹೆಸರಾಯ್ತುಬಳ್ಳಿಯೊಳುಳಿದ ಘಮಿಸುವ ಹೂವುಸಂಜೆಯವರೆಗೂ ನಗುತಿತ್ತು. ದೇವರಿಗಿಟ್ಟಳು, ಮುಡಿಯೊಳಗಿಟ್ಟಳುಹೂವಿನ ಮನಸಿನ ನಗೆಯವಳು!ರಾತ್ರಿಯ ಇಬ್ಬನಿ ಬಳ್ಳಿಯ ಹೂವಿನಮೆಲ್ಲನೆ ಹೀರುತ ಕೊಳೆಸಿದಳು. ಒಂದೇ ಭಾವದ ಜನರು ಬೆರೆತರೂಹೊಂದಿಕೆಯಾಗದೆ ಬದುಕಿದರು!ಜತೆಗೆ ಸೇರಿದರೂ, ಜೊತೆಗೆ ಬಾಳಿದರೂತೆರಳುವ ದಿನದಲಿ ಅಗಲಿದರು. Advertisements

Advertisements

ಬಾಳು-ಬಳ್ಳಿ

ದೂರದಿಂದಲೇ ತೂರಿಬಂದಿರುವ ಗಾಳಿಗೊಂದು ಗಂಧ ಪಾರಮಾರ್ಥಿಕವೊ ಸ್ವಾರ್ಥ,ಭಾವುಕವೊ ತಿಳಿಯದಾದ ಬಂಧ. ಕಳಚಿಬಿದ್ದಿರುವ ಎಳಸು ಬಳ್ಳಿಯಲಿ ಹೊಸದು ಚಿಗುರು ಕಂಡೆ ಬಳಸಿ ಬದುಕುವುದು ಬದುಕಿ ಅರಳುವುದು ಮಲ್ಲೆಯೊಂದು ಬಂಡೆ! ನೆರವ ನೀರೆರೆದು ಮೀರಿ ಪೋಷಿಸುವ ದಾರಿಯಿರಲು ಸರಸ ಮೆರೆವ ಆಸೆಯಲಿ ಪೊರೆವ ಹಮ್ಮಿನಲಿ ತೋರಬಹುದು ಕ್ಲೇಶ ಫಲವ ಹುಡುಕುತಲಿ ಮಲ್ಲೆ ಬೆಳೆಸಿದರೆ ಮೂಡಬಹುದೆ ಹೀಚು? ನಿಲದ ಹೂವುಗಳ ಸ್ವಾದ ಬೆಳೆಯದಿರೆ ಬದುಕದೊಂದು ಪೇಚು! ಉರಿದು ಕುಸಿದು ತನು ತಣ್ಣಗಾಗಲದು ಬೂದಿಯೆಂಬ ಹೆಸರು […]

ಭಾವಯಜ್ಞ

ತವರಿನಲಿ ಯಾಗವಿದೆ ಎನುವ ಸುದ್ದಿಯ ಕೇಳಿ ಓಡಿ ಬಂದಳು ಸತಿಯು ಹೇಳಲೆಂದು ಕರೆಯು ಇಲ್ಲವದೇಕೆ, ಎನುವ ಯೋಚನೆ ಬೇಕೆ? ಏಕಾಂಗಿಯಾದರೂ ಪೋಪೆನೆಂದು ಮೆಲುನುಡಿಯ ಮೆಲ್ಲುತಲಿ ಲಲನೆಯಾಡಿದ ನುಡಿಯು ಪರಶಿವನ ವರಕಿವಿಗೆ ಬೀಳುತಿತ್ತು ಹೋಗಿ ಬಾ ಎನ್ನಲೇ, ಸಾಗಿ ಜೊತೆ ನಾ ಬರಲೆ? ಎದೆಯ ಬೀಗವ ವಿಧಿಯು ಜಡಿಯುತಿತ್ತು ಒಂದು ದಿನ ತಡೆದುಕೋ, ನಿಲ್ಲು ಸಂಜೆಯವರೆಗೆ, ಅಲ್ಲದಿರೆ ಅರೆಘಳಿಗೆ ಸುಮ್ಮನುಳಿಯೆ ಎನುವ ಮಾತುಗಳೆಲ್ಲ ಎದೆಯಲುಳಿಯಿತು ಹೇಗೆ ಮೌನ ಶಾಂತಿಯದೆಂತು? ಫಲವು ಕಹಿಯೆ […]

ಬೆಳಕಿನಿಂದ ಕತ್ತಲೆಯೆಡೆಗೆ.

ಅನುದಿನವು ಮನದೊಳಗೆ ಸೆಳೆಯುತಿದೆ ನೋಡು ಬೆಳಕೆನುವ ಪಾಡು ಕತ್ತಲಿನ ಸೆರೆಯಲ್ಲಿ ಕರಗಿಹುದು ಹಾಡು, ಪದಗಳದೆ ಜಾಡು. ಇರುಳು ಕಳೆಯಿರಿ ಎನುತ ಹಗಲು ಚಿಂತೆಯ ಕೊಟ್ಟೆ ಮೌನ ಕೊರೆಯಲು ಮಾತು ಬುತ್ತಿಗಳನು ಶಾಂತ ನಿದ್ದೆಯ ತೊರೆದು ಎಚ್ಚರಿಕೆ ಎನ್ನುತಲಿ ಬೆಳಕನುರಿಸುವ ಹುಚ್ಚು ಬಯಕೆಗಳನು ಬೆಳಕು ಹೆಚ್ಚಿಸುವಾಸೆ , ಮೇಣ ಬತ್ತಿಯದೊಂದು ಎರಡು ಕಡೆಗಳಿಗೀಗ ಬೆಂಕಿಯಿಟ್ಟು ಬೇಗ ಕರಗಿತು ಮೇಣ, ಬೆಳಕಿಗಿಲ್ಲವು ತ್ರಾಣ ಕುಳಿತಿಹೆನು ಕತ್ತಲಲಿ ಕಣ್ಣನಿಟ್ಟು ಬೆಳಕು ಕತ್ತಲೆಯೆನುವ ತರ್ಕ ಸಂತೆಯ […]

ಮಳೆಯೆಂಬವಳಿಗೆ.

ನಿನಗೆ ಬಾಲ್ಯದ ನೆನಪು; ಮೋಡದುಯ್ಯಾಲೆಯಲಿ ತೂಗುತಲಿ ಬಾಗುತಲಿ ಆಡುತಿರುವೆ; ಮುತ್ತಿನಲಿ ಸಿಂಗರಿಸಿ ಇಟ್ಟ ತೊಟ್ಟಿಲಿನಿಂದ ಒಡೆದು ಹನಿಗಳ ತೆರನೆ ಚಿಮ್ಮುತಿರುವೆ.   ಸಂಜೆಯಲಿ ತಂಗಾಳಿ ಹೀಗೆ ಹನಿಗಳ ಸವರಿ ಎದೆಗೆ ಮುಟ್ಟಿಸಬಹುದೆ, ಹೇಳು ನಲ್ಲೆ; ಒಂದಿಷ್ಟು ತಡೆದುಕೋ ಬಿರುಸಾಗಿ ಬರಲಿ ಮಳೆ ನದಿಯ ಸೇರುವ ವರೆಗೆ ಕಾಯಬಲ್ಲೆ.   ಹಸಿನೆಲದ ಮೇಲಿಷ್ಟು ನಡೆದಾಡಿ ಪುಲಕದಲಿ ಮನದ ಕೆಸರನು ಇಳೆಗೆ ದೂಡುವಾಸೆ; ಮೇಲುನೋಟಕನಾಗಿ ಮಳೆಗೆ ಕಣ್ಣೀರಿಡಲು ಇಳಿಯದಂತೆಯೆ ತಡೆವ ಮೊಗದ ಮೀಸೆ! […]