ಪೊಟ್ಟಣದ ಆಹಾರ (Packed Lunch) – 2

Article 2:ಶಾಲಾ ಮಕ್ಕಳ ಆಹಾರ ಮಾರ್ಗಸೂಚಿ:ಶಾಲಾ ವಯಸ್ಸಿನ ಅವಧಿಯು ಸ್ಥಿರವಾದ ಬೆಳವಣಿಗೆಯ ಹಂತವಾಗಿದೆ. ಹಸಿವಿನ ಸ್ವಾಭಾವಿಕ ಹೆಚ್ಚಳವು ಆಹಾರ ಸೇವನೆಯ ಹೆಚ್ಚಳಕ್ಕೆ ಕಾರಣವಾಗಿದೆ. ಬೆಳೆಯುತ್ತಿರುವ ಸ್ವಾತಂತ್ರ್ಯವು ಆಹಾರ ಆಯ್ಕೆಯ ನಿಯಂತ್ರಣವನ್ನು ಕ್ರಮೇಣ ಪೋಷಕರಿಂದ ಮಗುವಿಗೆ ವರ್ಗಾಯಿಸಲು ಕಾರಣವಾಗುತ್ತದೆ. ಹೆಚ್ಚುತ್ತಿರುವ ಚಟುವಟಿಕೆ ಮತ್ತು ಬೆಳವಣಿಗೆಗಾಗಿ, ಅನಾರೋಗ್ಯ ಅಥವಾ ಇತರೆ ಗಾಯಗಳಿಂದಾಗುವ ನಷ್ಟವನ್ನು ಪೂರೈಸಲು ವಿಶೇಷ ಪೌಷ್ಟಿಕಾಂಶದ ಅಗತ್ಯವಿರುತ್ತದೆ.ಮಕ್ಕಳು ಸಾಮಾನ್ಯವಾಗಿ ಪ್ರಕ್ಷುಬ್ಧರಾಗಿರುತ್ತಾರೆ ಮತ್ತು ತಿನ್ನುವುದಕ್ಕಾಗಿ ಮೇಜಿನ ಬಳಿ ಹೆಚ್ಚು ಸಮಯ ಕಳೆಯಲು ಇಚ್ಛಿಸುವುದಿಲ್ಲ. […]

Advertisements

ಮಹಿಳೆ ಮತ್ತು ಆರೋಗ್ಯ -7

ಪೂರಕ ಆಹಾರ ಈ ಮುಂಚಿನ ಲೇಖನದಲ್ಲಿ ಸ್ತನ್ಯಪಾನದ ಮಹತ್ವವನ್ನು ವಿವರಿಸಲಾಗಿತ್ತು. ಈಗ ಅತ್ಯಾವಶ್ಯಕವಾದ ಪೂರಕ ಆಹಾರಗಳ ಬಗ್ಗೆ ತಿಳಿದುಕೊಳ್ಳೋಣ. ಪೂರಕ ಆಹಾರ ಎಂದರೇನು? ಮೊದಲ ಆರು ತಿಂಗಳು, ತಾಯಿಯ ಹಾಲು, ಶಿಶುವಿನ ಪೋಷಣೆಯ ಎಲ್ಲಾ ಬೇಡಿಕೆಯನ್ನು ಸಮರ್ಥವಾಗಿ ಪೂರೈಸುತ್ತದೆ. ಶೈಶಾವಸ್ಥೆಯಲ್ಲಿ, ತಿಂಗಳುಗಳು ಕಳೆದಂತೆಲ್ಲ, ಮಗುವಿನ ತೂಕ ಹಾಗೂ ಉದ್ದಳತೆ ಹೆಚ್ಚಾಗಿ, ಪೋಷಕಾಂಶದ ಬೇಡಿಕೆಯು ಹೆಚ್ಚಾಗುತ್ತದೆ. ಆದ್ದರಿಂದ ತಾಯಿಯ ಹಾಲಿನ ಜೊತೆಗೆ ಆರು ತಿಂಗಳ ನಂತರ ಶಿಶುವಿಗೆ ಮೆದುವಾದ ಆಹಾರ ಪದಾರ್ಥಗಳನ್ನು […]

ಮಹಿಳೆ ಮತ್ತು ಆರೋಗ್ಯ -5

ಗೌಟ್( Gout) -ಸಂಧಿವಾತ ಗೌಟ್ ಸಾಮಾನ್ಯವಾದ ಮತ್ತು ಸಂಕೀರ್ಣವಾದ, ಉರಿಯೂತದ ಸಂಧಿವಾತದ ಒಂದು ರೂಪವಾಗಿದೆ. ಗೌಟ್ ವ್ಯಾಧಿಯು ನಮ್ಮ ದೇಹದಲ್ಲಿ ನಡೆಯುವ ಯೂರಿಕ್ ಆಮ್ಲದ ಪ್ರಕ್ರಿಯೆ ಸರಿಯಾಗಿ ಇಲ್ಲದಿರುವ ಕಾರಣದಿಂದ ಉಂಟಾಗುತ್ತದೆ.  ರಕ್ತದಲ್ಲಿ ಯೂರಿಕ್ ಆಮ್ಲದ ಪ್ರಮಾಣ ಹೆಚ್ಚಾಗಿದ್ದಲ್ಲಿ, ಅವು ಕೀಲುಗಳಲ್ಲಿ ಸಂಗ್ರಹವಾಗುತ್ತದೆ. ಹೀಗೆ ಶೇಖರಣೆಯಾದ ಯೂರಿಕ್ ಆಮ್ಲವು ಹರಳಿನ ರೂಪದಲ್ಲಿ ಕೀಲುಗಳಲ್ಲಿ ಮತ್ತು ಕೀಲುಗಳ ಸುತ್ತಲೂ ಇರುವ ಕೋಶಗಳಲ್ಲಿ ಸೇರಿಕೊಂಡು ಕೀಲುಗಳು ಉಬ್ಬಿಕೊಂಡು ಕದಲಿಸಲು ಕಷ್ಟವಾಗುತ್ತದೆ ಮತ್ತು ಇದರಿಂದ […]

ಮಹಿಳೆ ಮತ್ತು ಆರೋಗ್ಯ – ೪

ಇಂದಿನ ಜಡ ಜೀವನ ಶೈಲಿ ಹಾಗೂ ರಾಸಾಯನಿಕಯುಕ್ತ, ಸಂಸ್ಕರಿಸಿದ ಆಹಾರಗಳ ಮತ್ತು ಜಂಕ್ ಫುಡ್‍ಗಳ ಸೇವನೆ ಹೆಚ್ಚುತ್ತಿರುವ ಕಾರಣ ಮಧುಮೇಹ, ಸ್ಥೂಲಕಾಯ, ಕ್ಯಾನ್ಸರ್ (ಅರ್ಭುದ),ಹೃದಯ ಸಂಬಂಧಿ ಕಾಯಿಲೆಗಳು, ಸಂಧಿವಾತದಂತಹ ಹಲವಾರು ವ್ಯಾಧಿಗಳು ವಯಸ್ಸಿನ ಬೇಧವಿಲ್ಲದೆ ಎಲ್ಲರಲ್ಲೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಇಂತಹ ಸಂದರ್ಭದಲ್ಲಿ, ಆರೋಗ್ಯ ಸುಧಾರಣೆಯ ಕ್ರಾಂತಿಯಂತೆ ಮನೆ ಮನೆಯಲ್ಲೂ ಪ್ರಚಲಿತಗೊಂಡಿದ್ದು ಹತ್ತು ಸಾವಿರ ವರ್ಷ ಇತಿಹಾಸವಿರುವ ಹುಲ್ಲಿನ ಪ್ರಬೇಧದ ಸಣ್ಣ ಬೀಜದ ಧಾನ್ಯ. ಮೇವು ಮತ್ತು ಮಾನವನ ಆಹಾರಕ್ಕಾಗಿ ಏಕದಳ […]

ಮಹಿಳೆ ಮತ್ತು ಆರೋಗ್ಯ – ೩

ರಕ್ತಹೀನತೆ ಒಟ್ಟು ರಕ್ತದಲ್ಲಿ ಸಾಮಾನ್ಯಕ್ಕಿಂತ ಕಡಿಮೆ ರಕ್ತಕಣಗಳು ಇದ್ದಲ್ಲಿ ಅಥವಾ ಪ್ರತೀ ರಕ್ತಕಣಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಹಿಮೋಗ್ಲೋಬಿನ್ ಇದ್ದಲ್ಲಿ ರಕ್ತಹೀನತೆ ಅಥವಾ ಅನೀಮಿಯ ಎಂದು ಕರೆಯಲ್ಪಡುತ್ತದೆ. ಈ ಎರಡು ಸಂದರ್ಭಗಳಲ್ಲಿ, ರಕ್ತ ಜೀವಕೋಶಗಳು ತಮ್ಮ ಆಮ್ಲಜನಕ ಸಾಗಿಸುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ. ಇದು ಅಧಿಕ ರಕ್ತಸ್ರಾವ ಅಥವಾ ಕೆಂಪುಕಣಗಳ ಉತ್ಪಾದನೆಯಲ್ಲಿ ಏನಾದರೂ ದೋಷದಿಂದ ಅಥವಾ ಯಾವುದೇ ಇತರೆ ಕಾರಣಗಳಿಂದ ಬರಬಹುದಾಗಿದೆ. ಕಬ್ಬಿಣ ಅಂಶದ ಕೊರತೆಯಿಂದಾಗುವ ರಕ್ತಹೀನತೆಯು ಕುಪೋಷಣೆಯಿಂದಾಗುತ್ತದೆ. ಹಿಮೋಗ್ಲೋಬಿನ್ ಎಂದರೆ ಕಬ್ಬಿಣದ […]