ಮಲ್ಲಿಗೆ ಮಾಲೆ

ಮಲ್ಲಿಗೆಯ ಹೂವನ್ನು ದಾರಿಯಲಿ ಕಂಡವರುನಿಡಿದಾದ ಉಸಿರೆಳೆದು ಹೋದರಂತೆ;ಕಣ್ಣು ಹಿರಿದಾಗಿಸುವ ವಿದ್ಯೆಯನು ಕಲಿತವಳುಜಾಣತುಟಿಯಲಿ ನಗಲು ಮರೆತು ಚಿಂತೆ! ಒಂದೆರಡು ಮುಷ್ಟಿಯಲಿ ಹೂವ ಕೊಟ್ಟಳು ಅವಳುತೂಕದಲಿ ಹಾಕಿಲ್ಲ, ಏನಕೆಂದೆ?ಗಂಧವನು ತೂಕದಲಿ ಹಿಡಿಯಲಾಗುವುದಿಲ್ಲಮಲ್ಲಿಗೆಯ ಬೀಳಿಸದೆ ಸಾಗು ಮುಂದೆ. ಮೊಣಕೈಯ್ಯ ಭಾರದಲಿ ಬಾಗಿಲನು ದೂಡಿದರೆಒಳಗಿದ್ದ ಮನೆಯವಳು ಕೆರಳಿ ಬಂದು;ಬೇಗ ಬರುವೆನು ಎಂದು ಹೋದವರು ತಡವೇಕೆ?ಹೂ ಮುಖವ ನೋಡಿದಳು ಕೋಪ ತಿಂದು! ಹೂವ ಕಟ್ಟುವ ಅವಳ ಕೈಯ್ಯ ನೋಡುವುದೇನುಬೆರಳುಗಳ ನಡುವಿರುವ ದಾರವನ್ನೇ;ಆಗೊಮ್ಮೆ ಈಗೊಮ್ಮೆ ಹಣೆಯ ತುರಿಸುವ ತೋಳುಮಾಲೆಯನು […]

ಬೈಕೊಂಡು ಓಡಿಸಿದ್ದು.

ಒಂದೊಳ್ಳೆ ಹಾಡು ಹಾಕಿಕೊಂಡು, ಇಯರ್ ಫೋನ್ ಕಿವಿಗೆ ಸಿಕ್ಕಿಸಿಕೊಂಡು ಬೈಕ್ ಸ್ಟಾರ್ಟ್ ಮಾಡಿದ್ದಾಯ್ತು. ಸುಮಾರು ೨೫ ದಿನಗಳ ನಂತರ ಆಫೀಸ್ ಕಡೆ ಸವಾರಿ. ಬೆಂಗಳೂರಿನ ಮುಖ್ಯರಸ್ತೆಗಳು, ಅಡ್ಡರಸ್ತೆಗಳಲ್ಲಿ ಲೀಲಾಜಾಲವಾಗಿ ಓಡಾಡಿ ಅನುಭವ ಇದ್ದ ನನಗೆ ಇದೊಂದು ರೀತಿಯ ವಿಚಿತ್ರ ಅನುಭವ ನೀಡುವ ಕಲ್ಪನೆ ಇರಲಿಲ್ಲ. ಸುಮಾರು ಎರಡೂವರೆ ವರುಷದ ನಂತರ ನಾನು ಈ ರಸ್ತೆಗಳಲ್ಲಿ ಬೈಕ್ ಮೂಲಕ ಸಾಗುವುದು. ಎಷ್ಟೋ ಬಾರಿ ಓಲಾ ಊಬರ್, ಮೆಟ್ರೋ ಸವಾರಿಯನ್ನು ಮಾಡಿದ್ದೇನಾದರೂ ರಸ್ತೆಯಲ್ಲಿ, […]

ಒಂದು ನೋಟಿನ ಕತೆ.

ಸೂರ್ಯನ ಬೆಳಕು ಇನ್ನೂ ಬಂದಿಲ್ಲ. ಎಲ್ಲಿಂದಲೋ ಎದ್ದು ಬಂದ ಒಬ್ಬ ದಢೂತಿ ಮನುಷ್ಯ ನನ್ನನ್ನು ಅನಾಮತ್ತಾಗಿ ಎತ್ತಿಕೊಂಡು ನಡೆದ. ಮೊದಲ ಟ್ರಿಪ್ಪಿನ ಖುಷಿಯಲ್ಲಿದ್ದ ಬಸ್ಸು ರಸ್ತೆಯ ಖುಷಿಯನ್ನು ಹಾರಿ ಹಾರಿ ಅನುಭವಿಸುತ್ತಿತ್ತು. ಸಿಡುಕು ಮೋರೆಯ ಕಂಡಕ್ಟರ್ ಟಿಕೇಟ್ ಕೇಳಿದಾಗ ನನ್ನನ್ನೊಮ್ಮೆ ತಡವಿದಂತಾಯ್ತು. ನಿನ್ನೆಯ ಹಳಸಲು ಘಮದ ನಡುವೆ ಇಂದಿನ ಹೊಸಾ ಹೂಗಳ ಪರಿಮಳ, ತರಕಾರಿ ಸೊಪ್ಪುಗಳ ತಾಜಾತನದ ಗಂಧ ಘಮಿಸುವಾಗಲೇ ಮಾರುಕಟ್ಟೆ ತಲುಪಿದ್ದು ತಿಳಿಯಿತು. ದಡೂತಿ ಮನುಷ್ಯ ನನ್ನನ್ನು ತರಕಾರಿ […]

ನಾಲಿಗೆಯ ಬಗೆಗಿನ ಮಾತು!

ಮನುಷ್ಯನ ಪ್ರಭಾವಿ ಅಂಗಗಳಲ್ಲಿ ನಾಲಿಗೆ ಬಹಳ ಮುಖ್ಯವಾದದ್ದು. ಜಗತ್ತಿನ ಬೇರೆ ಪ್ರಾಣಿಗಳಿಗಿಂತಲೂ ಮನುಷ್ಯನ ನಾಲಿಗೆ ಬಳಕೆಯಾಗುವುದು ಬೇರೆ ಕಾರಣಕ್ಕೆ. ಎಲ್ಲಾ ಪ್ರಾಣಿಗಳು ನಾಲಿಗೆಯನ್ನು ಆಹಾರದ ಪಚನಕ್ಕೆ, ರುಚಿಗೆ ಬಳಸಿದರೆ ಮನುಷ್ಯ ಅದನ್ನೂ ಮೀರಿ ಮಾತಿಗೆ ಬಳಸುತ್ತಾನೆ. ಆತನ ನಾಲಿಗೆ ಸರಿ ಇಲ್ಲ! ಎಂದು ಯಾರಾದರೂ ಅಂದರೆ ಆತನ ರುಚಿಯ ಬಗೆಗೆ ಹೇಳಿದ್ದಲ್ಲ, ಹೊರತಾಗಿ ಮಾತಿನ ಶುಚಿಗೆ ಸಂಬಂಧಿಸಿದ್ದು ಎಂದೇ ಅರ್ಥ. ಓ ಅವಳ ನಾಲಿಗೆ ಎಷ್ಟು ಉದ್ದ ಎಂದು ಹೇಳಿದರೆ […]

ಒಂದೆರಡು ದಿನವಿದ್ದು ಹೋಗಬಾರದು ಏಕೆ ?

ಒಂದೆರಡು ದಿನವಿದ್ದು ಹೋಗಬಾರದು ಏಕೆ ಮೊನ್ನೆಯೋ ಮಳೆಗಾಲ;ಬಹಳ ನೀರು ಬೆಂಬಿಡದೆ ಕಾಡುತಿದೆ ಇಂದು ವಿರಹದ ಬೇಗೆ ನೀಡಬಾರದೆ ಚೂರು ಒಲವ ಹಸಿರು. ಸುಳಿವುದದು ಬಿರುಗಾಳಿ ಮೈಗೆ ಕಿಚ್ಚನು ಹಚ್ಚಿ ಬೆಂಕಿಯಾಡುವ ಮನವು ಹುಚ್ಚಾಗಿದೆ ತೆಗಳುವುದು ಸರಿಯೇನು? ಈ ಬಿಸಿಯ ಗಾಳಿಯನು ನಿನ್ನೊಲವ ಕಾಯುವುದು ಹೆಚ್ಚಾಗಿದೆ. ಯಾವುದೋ ಧಾಟಿಯಲಿ ಯಾವುದೋ ರಾಗದಲಿ ಹಾಡುವಾತನ ಕೊರಳು ದಣಿದುಹೋಗಿ ನಿನ್ನ ಪ್ರೀತಿಯ ಸ್ವಲ್ಪ ಪಡೆದು ಬಾ ಎನುತಲಿದೆ ಬರೆವ ಪದಗಳ ಸಾಲು ಮರವೆಯಾಗಿ ನಾಳೆದಿನ […]