ಕತೆ – ರಾಮನ ವೇಷ!

ಸುತ್ತಮುತ್ತಲ ಮೂರು ನಾಲ್ಕು ಹಳ್ಳಿಗಳ ಮಧ್ಯೆ ಅದೊಂದು ಪುಟ್ಟ ಊರು. ಎಲ್ಲಾ ಹಳ್ಳಿಗಳ ಹೃದಯವದು. ಬರೀ ೩೦ ಮನೆಗಳು ಸ್ವಲ್ಪವೇ ಜಮೀನು ಹೊಂದಿರುವ ಜನರು ಒಬ್ಬರಿಗೊಬ್ಬರು ಬೆರೆತು ರಾಮಪುರವಾಗಿತ್ತು ಹಳ್ಳಿ. ಸಣ್ಣ ದೇವರ ಗುಡಿಯೊಂದು, ಎದುರೇ ಸಣ್ಣ ಕೆರೆ ಹಿಂದಿನಿಂದ ಬೆಟ್ಟದೊಂದಿಗೆ ಕಾಡು. ಆಲೋಚಿಸಿದರೆ ಸಣ್ಣಮಕ್ಕಳು ಚಿತ್ರ ಬಿಡಿಸಿದಂತೆ ತೋರುತ್ತಿತ್ತು. ಪೇಟೆಯಲ್ಲಿ ಕೋಳಿಅಂಗಡಿ ಇಟ್ಟ ತಿಮ್ಮನ ಮನೆ ಮೊದಲ್ಗೊಂಡು ರಾಮಣ್ಣನ ಮನೆ ದಾಟಿದರೆ ಟೈಲರಣ್ಣನ ಮನೆ. ನಂತರ ಒಂದೆಕರೆಯಷ್ಟು ಮಳೆನೀರಾವರಿ […]

Advertisements

ಹೊಸ ಹೂವು!

ದಾರಿಯೊಲವಿನ ಗಂಧ; ತೊರೆಯದಿರು ನನ್ನಿಂದದೂರದಾರಿಯ ನಡೆಯೆ ಬೇಕೊಂದು ಬಂಧಗಮ್ಯವಿಲ್ಲದೆ ಹೀಗೆ ಸಾಗಿ ಹೋಗುವ ದಿನಕೆನೀ ಜೊತೆಗೆ ಇರದಿರಲು ಏನು ಚಂದ?

Ramayana – By Seeta

ಸರಳ ಸಂಜೆಯೂ ಮೋದಗೊಂಡಿರಲು ಸೀತೆಗಾಯ್ತು ನೆಪವು ಮರಳಿ ಅಡವಿಯೊಳು ತಿರುಗಬೇಕೆನುವ ಆಸೆಯಾಯ್ತು ಬಲವು ತಂಗಿ ಊರ್ಮಿಳೆಯ ಮತ್ತೆ ಮಾಂಡವಿಯ ಕರೆದಳಲ್ಲಿ ಬಳಿಗೆ ಬೆಳಗು ಜಾವದಲಿ ಸರಯೂ ದಾಟಿದರು ನಾಲ್ವರಡವಿಯೆಡೆಗೆ! ನಡೆದ ದಾರಿ ನೆನಪಿಸುವ ಆಸೆ ಸೀತೆಗೋ ಹಾಗೆ ಹೀಗೆ ಊರ್ಮಿಳೆಗೆ ಮಾತ್ರ ನೆನಪಿರಲುಬಹುದು ತಾ ಕಳೆದ ಮನದ ಬೇಗೆ “ಓ ಇಲ್ಲೆ ತಾನೆ ಈ ಮುಳ್ಳುಚುಚ್ಚೆ ಕಾಲಡಿಗೆ ನೋವು ಬಂತು” ಎನುತ ನಡೆಸಿದಳು ಸೀತೆ ಸೋದರಿಯ ;ಮುಳ್ಳು ಕಾಣದಾಯ್ತು! ಮುಂದೆ […]

ಬಾಳು-ಬಳ್ಳಿ

ದೂರದಿಂದಲೇ ತೂರಿಬಂದಿರುವ ಗಾಳಿಗೊಂದು ಗಂಧ ಪಾರಮಾರ್ಥಿಕವೊ ಸ್ವಾರ್ಥ,ಭಾವುಕವೊ ತಿಳಿಯದಾದ ಬಂಧ. ಕಳಚಿಬಿದ್ದಿರುವ ಎಳಸು ಬಳ್ಳಿಯಲಿ ಹೊಸದು ಚಿಗುರು ಕಂಡೆ ಬಳಸಿ ಬದುಕುವುದು ಬದುಕಿ ಅರಳುವುದು ಮಲ್ಲೆಯೊಂದು ಬಂಡೆ! ನೆರವ ನೀರೆರೆದು ಮೀರಿ ಪೋಷಿಸುವ ದಾರಿಯಿರಲು ಸರಸ ಮೆರೆವ ಆಸೆಯಲಿ ಪೊರೆವ ಹಮ್ಮಿನಲಿ ತೋರಬಹುದು ಕ್ಲೇಶ ಫಲವ ಹುಡುಕುತಲಿ ಮಲ್ಲೆ ಬೆಳೆಸಿದರೆ ಮೂಡಬಹುದೆ ಹೀಚು? ನಿಲದ ಹೂವುಗಳ ಸ್ವಾದ ಬೆಳೆಯದಿರೆ ಬದುಕದೊಂದು ಪೇಚು! ಉರಿದು ಕುಸಿದು ತನು ತಣ್ಣಗಾಗಲದು ಬೂದಿಯೆಂಬ ಹೆಸರು […]

ಬೆಳಕಿನಿಂದ ಕತ್ತಲೆಯೆಡೆಗೆ.

ಅನುದಿನವು ಮನದೊಳಗೆ ಸೆಳೆಯುತಿದೆ ನೋಡು ಬೆಳಕೆನುವ ಪಾಡು ಕತ್ತಲಿನ ಸೆರೆಯಲ್ಲಿ ಕರಗಿಹುದು ಹಾಡು, ಪದಗಳದೆ ಜಾಡು. ಇರುಳು ಕಳೆಯಿರಿ ಎನುತ ಹಗಲು ಚಿಂತೆಯ ಕೊಟ್ಟೆ ಮೌನ ಕೊರೆಯಲು ಮಾತು ಬುತ್ತಿಗಳನು ಶಾಂತ ನಿದ್ದೆಯ ತೊರೆದು ಎಚ್ಚರಿಕೆ ಎನ್ನುತಲಿ ಬೆಳಕನುರಿಸುವ ಹುಚ್ಚು ಬಯಕೆಗಳನು ಬೆಳಕು ಹೆಚ್ಚಿಸುವಾಸೆ , ಮೇಣ ಬತ್ತಿಯದೊಂದು ಎರಡು ಕಡೆಗಳಿಗೀಗ ಬೆಂಕಿಯಿಟ್ಟು ಬೇಗ ಕರಗಿತು ಮೇಣ, ಬೆಳಕಿಗಿಲ್ಲವು ತ್ರಾಣ ಕುಳಿತಿಹೆನು ಕತ್ತಲಲಿ ಕಣ್ಣನಿಟ್ಟು ಬೆಳಕು ಕತ್ತಲೆಯೆನುವ ತರ್ಕ ಸಂತೆಯ […]