ಮಲ್ಲಿಗೆ ಮಾಲೆ

ಮಲ್ಲಿಗೆಯ ಹೂವನ್ನು ದಾರಿಯಲಿ ಕಂಡವರುನಿಡಿದಾದ ಉಸಿರೆಳೆದು ಹೋದರಂತೆ;ಕಣ್ಣು ಹಿರಿದಾಗಿಸುವ ವಿದ್ಯೆಯನು ಕಲಿತವಳುಜಾಣತುಟಿಯಲಿ ನಗಲು ಮರೆತು ಚಿಂತೆ! ಒಂದೆರಡು ಮುಷ್ಟಿಯಲಿ ಹೂವ ಕೊಟ್ಟಳು ಅವಳುತೂಕದಲಿ ಹಾಕಿಲ್ಲ, ಏನಕೆಂದೆ?ಗಂಧವನು ತೂಕದಲಿ ಹಿಡಿಯಲಾಗುವುದಿಲ್ಲಮಲ್ಲಿಗೆಯ ಬೀಳಿಸದೆ ಸಾಗು ಮುಂದೆ. ಮೊಣಕೈಯ್ಯ ಭಾರದಲಿ ಬಾಗಿಲನು ದೂಡಿದರೆಒಳಗಿದ್ದ ಮನೆಯವಳು ಕೆರಳಿ ಬಂದು;ಬೇಗ ಬರುವೆನು ಎಂದು ಹೋದವರು ತಡವೇಕೆ?ಹೂ ಮುಖವ ನೋಡಿದಳು ಕೋಪ ತಿಂದು! ಹೂವ ಕಟ್ಟುವ ಅವಳ ಕೈಯ್ಯ ನೋಡುವುದೇನುಬೆರಳುಗಳ ನಡುವಿರುವ ದಾರವನ್ನೇ;ಆಗೊಮ್ಮೆ ಈಗೊಮ್ಮೆ ಹಣೆಯ ತುರಿಸುವ ತೋಳುಮಾಲೆಯನು […]

Advertisements

ನಿನ್ನ ಒಲವು ಎಂಬ ಮಲ್ಲಿಗೆಯ ಮಾಲೆ

ನಿನ್ನ ಒಲವು ಎಂಬ ಮಲ್ಲಿಗೆಯ ಮಾಲೆಯಿರೆ ಬೇರೆ ಹೂಗಳದೇಕೆ ಹೇಳು ನೀನೆ ನೋವೆನುವ ಎಲೆಗಳೋ ಶಂಕೆ ಕನಕಾಂಬರವೊ ಈ ಮಾಲೆಯೊಳಗಿಲ್ಲ ಅಲ್ಲವೇನೆ ಎಲ್ಲ ದಿಕ್ಕಿನ ಕಡೆಗೆ ಮಲ್ಲೆ ನಗುತಿರುವಂತೆ ಒತ್ತಾಗಿ ಮುತ್ತಾಗಿ ಕಟ್ಟುತಿರುವೆ ಸಂಸಾರ ದಾರದಲಿ ಬಿಗಿಯಾಗಿ ಸುಖವಾಗಿ ಜಾರದಂತೆಯೆ ತಡೆದು ಬಂಧಿಸಿರುವೆ ಮಾಲೆ ಕಟ್ಟುವುದೇನು, ಬಹು ಸುಲಭ ಎನ್ನುವರು, ಕೆಲರು ಹಾರವೆ ಬೇಡ ಎನ್ನುತಿಹರು ಇನ್ನೊಂದು ಗುಂಪಿನಲಿ ಇಂಥ ರಗಳೆಯೆ ಇಲ್ಲ, ಬರಿಯ ಬಿಡಿಹೂಗಳನೆ ಪಡೆಯುತಿಹರು ಗಂಧವೋ ಚಂದವೋ […]