ಹೈಸ್ಕೂಲ್ ದಿನಗಳು – ಭಾಗ ೨

10ನೇಯ ಸರದಿ. ಶಿಕ್ಷಕರು ಹೆಸರು ಕರೆದರು. ಉತ್ತರ ಪತ್ರಿಕೆ ಪಡೆಯಲು ಹೊರಟವರನ್ನು. ಅಲ್ಲೇ ನಿಲ್ಲಲು ಹೇಳಿದರು ಶಿಕ್ಷಕರು. ಉತ್ತರ ಪತ್ರಿಕೆಯನ್ನು ತೆರೆದು ಓದಲು ಆರಂಬಿಸಿದರು. ಪ್ರಶ್ಬೆ: ಹಾಸಿಗೆ ಇದ್ದಷ್ಟು ಕಾಲು ಚಾಚು ಈ ಗಾದೆಯನ್ನು ವಿವರಿಸಿ. ಉತ್ತರ: ಬಸವ ಮನೆಗೆ ಬಂದಾಗ ಬಂಗಾರಿ. ಹಾಸಿಗೆಯಲ್ಲಿ ಮಲಗಿ ನಿದ್ರಿಸುತ್ತಿದ್ದಳು. ಅವಳು ಕಾಲನ್ನು ಹಾಸಿಗೆಯಿಂದ ಹೊರಗೆ ಚಾಚಿದ್ದಳು. ಇದನ್ನು ನೋಡಿ ಬಸವನಿಗೆ ಕೋಪ ಬಂತು. ಹಾಸಿಗೆಯಿದ್ದಷ್ಟು ಕಾಲು ಚಾಚು ಎಂದು ಬಸವನು ಬಂಗಾರಿಯನ್ನುಬೈದನು. […]

Advertisements

ಹೈಸ್ಕೂಲ್ ದಿನಗಳು – ಭಾಗ ೧

ಏಳನೇ ಕ್ಲಾಸ್ ಮುಗಿಸಿ 8ನೇ ಕ್ಲಾಸಿಗೆ ಕಾಲಿಟ್ಟಿದ್ದೆ. ಹೆಸರಿನಲ್ಕಿ ಕಾಲೇಜು ಇದ್ದರೂ ಅದು ಹೈಸ್ಕೂಲೇ ಆಗಿತ್ತು. ಕೊನೆಯಲ್ಲಿ ಪೆರಡಾಲ ಅಂತ ಇದ್ದರೂ, ಅದು ಇದ್ದದ್ದು ನೀರ್ಚಾಲಿನಲ್ಲಿ. ನನ್ನ ಕ್ಲಾಸಿನಲ್ಲಿ ಹೊಸಬರು ಹಾಗೆಯೇ ಅನುಭವಿಗಳು ಇದ್ದರು. ಅನುಭವಿಗಳೆಂದರೆ ಹಿಂದಿನ ವರ್ಷ ಇದೇ ಕ್ಲಾಸಿನಲ್ಲಿ ಇದ್ದು ಬೆಂಚಿಗೆ ಅಂಟಿಕೊಂಡವರು ಈ ಅನುಭವಿಗಳೇ. ನಮಗೆ ಅಂದರೆ ಹೊಸಬರಿಗೆ ಮಾರ್ಗದರ್ಶಕರು. ಅಧ್ಯಾಪಕರು ತರಗತಿಗೆ ಬಂದು ತಮ್ಮ ಪರಿಚಯ ಮಾಡುವ ಮುನ್ನವೇ ಅವರ ಪರಿಚಯವಾಗಿತ್ತು. ಅದು ಅನುಭವಿ […]